ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕಾರು ಪೂಲಿಂಗ್ ಸೇವೆ ಆರಂಭಿಸಿದ ಊಬರ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14 : ಬೆಂಗಳೂರು ನಗರದಲ್ಲಿ ಟ್ಯಾಕ್ಸಿ ಸೇವೆ ಆರಂಭಿಸಿದ್ದ ಊಬರ್ ಈಗ ಕಾರ್ ಪೂಲಿಂಗ್ ಸೇವೆಗೆ ಚಾಲನೆ ನೀಡಿದೆ. ಕಾರ್ ಪೂಲಿಂಗ್ ಬಳಸುವುದರಿಂದ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂದು ಊಬರ್ ಹೇಳಿದೆ.

ಕಾರ್ ಪೂಲಿಂಗ್ ಸೇವೆಯನ್ನು ಮಂಗಳವಾರ ಊಬರ್ ಅಧಿಕೃತವಾಗಿ ಆರಂಭಿಸಿದ್ದು, ಈ ಸೇವೆಯನ್ನು ಪಡೆಯಲು ಜನರು ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಿ ಊಬರ್ ಮೊಬೈಲ್ ಅಪ್ಲಿಕೇಶನ್‌ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. [ಊಬರ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ]

taxi

ಈ ಸೇವೆಯನ್ನು ಸೇವೆಯನ್ನು ವಾರದ ಏಳು ದಿನವೂ ಬೆಳಗ್ಗೆ 7 ರಿಂದ ರಾತ್ರಿ 9ರ ತನಕ ಬಳಸಬಹುದಾಗಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಅಪ್ಲಿಕೇಶನ್‌ಗಳ ಮೂಲಕ ಅಥವ ಸ್ಥಳದಲ್ಲಿಯೇ ಬಿಲ್ ಪಾವತಿ ಮಾಡಬಹುದಾಗಿದೆ. [car pooling : ಬೆಂಗಳೂರು ಆಯ್ಕೆ ಮಾಡಿಕೊಂಡ ಉಬರ್‌]

ಬಳಸುವುದು ಹೇಗೆ? : ಊಬರ್ ಅಪ್ಲಿಕೇಶನ್ ಡೌಲ್ ಲೋಡ್ ಮಾಡಿಕೊಂಡ ನಂತರ ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಹೋಗಬೇಕು ಎಂದು ಟೈಪ್ ಮಾಡಬೇಕು. ನಂತರ ಎರಡು ಆಯ್ಕೆಗಳು ಬರುತ್ತವೆ. ಬೇರೆ-ಬೇರೆ ವ್ಯಕ್ತಿಗಳೊಂದಿಗೆ ಕಾರು ಕಾರು ಬಳಸಿಕೊಳ್ಳುತ್ತಿರೋ ಅಥವ ಒಬ್ಬರೇ ಬಳಸಲು ಇಷ್ಟ ಪಡುವಿರಾ ಎಂಬ ಆಯ್ಕೆಗಳು ಬರುತ್ತವೆ. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ನೀವು ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು ಆಗ ಎಷ್ಟು ಬಾಡಿಗೆ ಪಾವತಿ ಮಾಡಬೇಕು ಎಂಬ ಮಾಹಿತಿ ಲಭ್ಯವಾಗುತ್ತದೆ. ಬೇರೆ-ಬೇರೆ ವ್ಯಕ್ತಿಗಳು ಒಂದೇ ಜಾಗಕ್ಕೆ ಹೋಗಬೇಕಾದರೆ ಒಂದೇ ಕಾರಿನಲ್ಲಿ ಬಾಡಿಗೆಯನ್ನು ಹಂಚಿಕೊಂಡು ಸಂಚರಿಸಬಹುದು ಎಂದು ಊಬರ್ ಹೇಳಿದೆ.

ಊಬರ್ ಈಗಾಗಲೇ ಕಾರ್ ಪೂಲಿಂಗ್ ಸೇವೆಯನ್ನು ಸ್ಯಾನ್‌ ಫ್ರಾನ್ಸಿಸ್ಕೊ, ನ್ಯೂಯಾರ್ಕ್‌, ಬಾಸ್ಟನ್‌, ಆಸ್ಟಿನ್‌ ಮತ್ತು ಪ್ಯಾರಿಸ್‌ ಮುಂತಾದ ನಗರದಲ್ಲಿ ಆರಂಭಿಸಿದೆ. ಸದ್ಯ, ಬೆಂಗಳೂರಿನಲ್ಲಿ ಈ ಸೇವೆ ಆರಂಭಗೊಂಡಿದೆ.

English summary
Uber taxi has launched it's car pooling service in Bengaluru city on Tuesday, October 13, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X