ಕ್ಷುಲ್ಲಕ ಕಾರಣಕ್ಕೆ ಎನ್‌ಆರ್‌ಐ ಮೇಲೆ ಊಬರ್ ಚಾಲಕನಿಂದ ಹಲ್ಲೆ
ಬೆಂಗಳೂರು, ಜೂನ್ 22: ಕ್ಷುಲ್ಲಕ ಕಾರಣಕ್ಕೆ ಊಬರ್ ಚಾಲಕ ಎನ್‌ಆರ್‌ಐ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಾಲಕನನ್ನು ಬಂಧಿಸಲಾಗಿದೆ.
ಹಲ್ಲೆಗೊಳಗಾದ ದುಬೈ ಮೂಲದ ಎಂಜಿನಿಯರ್‌ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಎಂಜಿನಿಯರ್ ಎಂಜಿ ರಸ್ತೆಯಿಂದ ಇಂದಿರಾನಗರಕ್ಕೆ ಊಬರ್‌ನಲ್ಲಿ ಪ್ರಯಾಣಿಸಿದ್ದಾರೆ. ಇಂದಿರಾನಗರದ ಬಳಿ ಐದನೇ ಮುಖ್ಯ ಜಂಕ್ಷನ್ ಬಳಿ ಬಿಡಲು ಚಾಲಕನಿಗೆ ತಿಳಿಸಿದ್ದಾರೆ
ಇದ್ದಕ್ಕಿದ್ದಂತೆ ಸಿಟ್ಟಾದ ಚಾಲಕ ಜಿಪಿಎಸ್‌ನಲ್ಲಿ ತೋರಿಸುತ್ತಿರುವ ಜಾಗಕ್ಕೆ ನಿಮ್ಮನ್ನು ಕರೆದೊಯ್ಯುತ್ತೇನೆ ಅಲ್ಲಿಯೇ ಬಿಡುತ್ತೇನೆ ಎಂದು ಹೇಳಿದ್ದಾನೆ.

ಆದರೆ ಎನ್‌ಆರ್‌ಐ ಕಮಲ್ ಮೆನನ್ ತಾನು ಹೇಳಿದ ಕಡೆಯೇ ಬಿಡಬೇಕು ಎಂದು ವಾದ ಮಾಡಿದ್ದಾನೆ. ತಾವು ಇಳಿಯಬೇಕಿದ್ದ ಸ್ಥಳ ಇದು ಎಂದು ಇಳಿಯಲು ಹೋದಾಗ ಡೋರ್ ಓಪನ್ ಮಾಡಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಈ ಘಟನೆ ಬಳಿಕ ಸಿಟ್ಟಾದ ಮತ್ತೊಂದು ಕಾರಿನ ಮಾಲೀಕ ಪೊಲೀಸರಿಗೆ ದೂರು ನೀಡುವುದಾಗಿ ಗದರಿ ಅವರನ್ನು ತಳ್ಳಿದ್ದಾನೆ. ಅವರೊಂದಿಗೆ ಸೇರಿಕೊಂಡ ಉಬರ್ ಚಾಲಕ ರಘು ದುಬೈ ಮೂಲದ ಎಂಜಿನಿಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕನನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಕೆಲ ಪುರಾವೆಗಳನ್ನು ಸಹ ದೂರುದಾರರು ನೀಡಿದ್ದಾರೆ. ಇನ್ನು, ಉಬರ್ ಕಂಪನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ತನಿಖೆಗೆ ಸಹಕಾರ ನೀಡೋದಾಗಿ ಭರವಸೆ ನೀಡಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ.
ಕಾರಿನಲ್ಲಿದ್ದ ಪೈಪ್‌ನಿಂದಲೂ ತನ್ನ ಕಾಲಿಗೆ ಹಲ್ಲೆ ನಡೆಸಿದ್ದಾನೆ ಎಂದು ಮೆನನ್ ಪೊಲೀಸರಿಗೆ ಹೇಳಿದ್ದು, ತಾನು ವಾಪಸ್ ಅವನಿಗೆ ಹೊಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಸದ್ಯ, ಮೆನನ್‌ಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.











Click it and Unblock the Notifications