• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2 ವರ್ಷದ ಹಿಂದೆಯೂ ಖರ್ಗೆಗೆ ಬೆದರಿಕೆ ಕರೆ ಬಂದಿತ್ತು, ಆ ಘಟನೆ ಏನಾಯಿತು?

|

ಬೆಂಗಳೂರು, ಜೂನ್ 10: ಕಾಂಗ್ರೆಸ್ ಮಾಜಿ ಸಂಸದೀಯ ನಾಯಕ, ರಾಜ್ಯಸಭೆ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದೆ. ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದು ಜೀವ ಬೆದರಿಕೆ ಹಾಕಿದ್ದಾರೆ. ಖರ್ಗೆಗೆ ಅವರಿಗೆ ಮಾತ್ರವಲ್ಲ ಅವರ ಪುತ್ರ ಪ್ರಿಯಾಂಕ್ ಖರ್ಗೆಗೂ ದೂರವಾಣಿ ಮೂಲಕ ಬೆದರಿಕೆ ಕರೆ ಬಂದಿದೆ.

   Sriramulu taking a break at a small shop video goes viral | Oneindia Kannada

   ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪ್ರಿಯಾಂಕ್ ಖರ್ಗೆ ದೂರು ನೀಡಿದ್ದಾರೆ. ಅಂದ್ಹಾಗೆ, ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿರುವುದು ಇದು ಮೊದಲ ಸಲ ಅಲ್ಲ, ಇದಕ್ಕೂ ಮುಂಚೆ ಎರಡು ವರ್ಷಗಳ ಹಿಂದೆಯೂ ಫೋನ್ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

   ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸದಂತೆ ಮಲ್ಲಿಕಾರ್ಜುನ ಖರ್ಗೆರಿಗೆ ಜೀವ ಬೆದರಿಕೆ ಕರೆ!

   ಆ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾಗಿದ್ದರು. ಹಾಗಾದ್ರೆ, ಎರಡು ವರ್ಷದ ಹಿಂದೆ ಬಂದಿದ್ದು ಬೆದರಿಕೆ ಕರೆಗೂ ಈಗ ಬಂದಿರುವ ಬೆದರಿಕೆಗೆ ಕರೆಗೂ ಸಂಬಂಧ ಇದ್ಯಾ? ಎರಡು ವರ್ಷದ ಹಿಂದಿನ ಪ್ರಕರಣ ಏನಾಯಿತು? ಮುಂದೆ ಓದಿ....

   ಎರಡು ವರ್ಷದ ಹಿಂದೆ ಬೆದರಿಕೆ ಕರೆ ಪ್ರಕರಣ

   ಎರಡು ವರ್ಷದ ಹಿಂದೆ ಬೆದರಿಕೆ ಕರೆ ಪ್ರಕರಣ

   ಎರಡು ವರ್ಷಗಳ‌ ಹಿಂದೆಯೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿತ್ತು. ಈ ಬಗ್ಗೆ ಲೋಕಸಭೆ ಸ್ಪೀಕರ್ ಅವರ ಗಮನಕ್ಕೆ ಈ ಕುರಿತು ಮಾಹಿತಿ ನೀಡಿದ್ದರು. ಪ್ರಧಾನಿ ಮೋದಿ ಅವರ ಗಮನಕ್ಕೂ ಈ ವಿಚಾರ ಮುಟ್ಟಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಘಲಕ್ ಠಾಣೆಯಲ್ಲೂ ದೂರು ಸಹ ದಾಖಲಾಗಿದೆ. ಇನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ತನಿಖೆ ನಡೆಯುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.

   ನೋಡೋಣ ಏನು ಮಾಡ್ತಾರೆ?

   ನೋಡೋಣ ಏನು ಮಾಡ್ತಾರೆ?

   ''ಎರಡು ವರ್ಷದ ಬಳಿಕ ಈಗ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. 7 ರಂದು ಮಧ್ಯರಾತ್ರಿ 1.30ಕ್ಕೆ ಲ್ಯಾಂಡ್ ಲೈನ್ ಗೆ ಕರೆ ಬಂದಿದೆ. ಈ ಕುರಿತು ಪ್ರಿಯಾಂಕ ಖರ್ಗೆ ದೂರು ಕೊಟ್ಟಿದ್ದಾರೆ. ನೋಡೋಣ ಏನು ಮಾಡುತ್ತಾರೆ' ಎಂದು ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

   'ಕೊನೆಯ ಹೋರಾಟ, ಹಿಂಬಾಗಿಲಿನಲ್ಲಿ ರಾಜ್ಯಸಭೆ ಪ್ರವೇಶ ವಿಧಿಯ ಆಟ' - ಡಾ ಸುಧಾಕರ್

   ಯಾವುದಕ್ಕೂ ನಾವು ಹೆದರುವುದಿಲ್ಲ

   ಯಾವುದಕ್ಕೂ ನಾವು ಹೆದರುವುದಿಲ್ಲ

   ''ಜೂನ್ 7 ರಂದು ನನಗೆ, ಖರ್ಗೆಯವರಿಗೆ ದೂರವಾಣಿ ಮೂಲಕ ಬೆದರಿಕೆ ಕರೆ ಬಂದಿದೆ. ಡಿಜಿ, ಆಯುಕ್ತರಿಗೆ ನಾನು ದೂರು ಕೊಟ್ಟಿದ್ದೇನೆ. ಗೃಹ ಸಚಿವರಿಗೆ ಭೇಟಿ ಮಾಡಿ ಮಾತನಾಡ್ತೇನೆ. ಈ ಹಿಂದೆ ಕೆನಾಡದಿಂದ ಕರೆ ಬಂದಿತ್ತು. ಕೆಲವೊಂದು ಗೋಶ್ಟ್ ಕರೆಗಳು ಬರುತ್ತವೆ. ಕೆಲವೊಂದು ಕಾಲ್ ರೆಕಾರ್ಡ್ ಇರುವುದಿಲ್ಲ. ಉನ್ನತ ಮಟ್ಟದ ತನಿಖೆಗೆ ನಾವು ಪ್ರಯತ್ನ ಮಾಡುತ್ತೇವೆ. ಎಲ್ಲೋ ರಾಜಕೀಯ ಉದ್ದೇಶ ಇತ್ತು ಎಂದು ಕಾಣುತ್ತದೆ. ನಮ್ಮ ತತ್ವ ಸಿದ್ದಾಂತಗಳಿಗೆ ಹೆದರುವ ಮಾತಿಲ್ಲ. ಅವರು ಏನೋ ಮಾಡುತ್ತೇವೆ ಅಂದುಕೊಂಡ್ರೆ ಅದು ಸುಳ್ಳು. ನಾವು ನಮ್ಮ ತತ್ವ ಸಿದ್ದಾಂತಗಳಿಗೆ ಬದ್ದರಿದ್ದೇವೆ. ಯಾವುದಕ್ಕೂ ನಾವು ಹೆದರುವುದಿಲ್ಲ'' ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

   ಸಿಒಡಿ ತನಿಖೆಗೆ ಇದನ್ನ ವಹಿಸಬೇಕು

   ಸಿಒಡಿ ತನಿಖೆಗೆ ಇದನ್ನ ವಹಿಸಬೇಕು

   ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿರುವ ಹಿನ್ನೆಲೆ ಮಾತನಾಡಿದ ಶಾಸಕ ಅಜಯ್ ಸಿಂಗ್ 'ಈ ಬಗ್ಗೆ ಪ್ರಿಯಾಂಖ ಖರ್ಗೆ ಅಂದೇ ನನ್ನ ಜೊತೆ ಚರ್ಚಿಸಿದ್ರು. ಅಪರಿಚಿತರಿಂದ ಬೆದರಿಕೆ ಕರೆ ಬಂದಿದೆ. ಖರ್ಗೆಯವರು ಪಕ್ಷದಲ್ಲಿ ಹಿರಿಯ ನಾಯಕರು. ಅಂತವರಿಕೆ ಜೀವ ಬೆದರಿಕೆ ಕರೆ ಬಂದರೆ ಹೇಗೆ? ಕೂಡಲೇ ಪೊಲೀಸ್ ಇಲಾಖೆ ಇದರ ಬಗ್ಗೆ ತನಿಖೆ ನಡೆಸಬೇಕು. ಈ‌ ವಿಚಾರ ಸಣ್ಣ ಮಟ್ಟದಲ್ಲ. ಸಿಒಡಿ ತನಿಖೆಗೆ ಇದನ್ನ ವಹಿಸಬೇಕು. ಯಾರು ಮಾಡಿದ್ದಾರೆ ಅನ್ನೋದನ್ನ ಪತ್ತೆಹಚ್ಚಬೇಕು. ಈಗ ಎಲ್ಲಾ ಮಾಹಿತಿ ಕೂಡ ಸಿಗಲಿದೆ. ತನಿಖೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು'' ಎಂದಿದ್ದಾರೆ.

   English summary
   Congress senior leader and rajyasabha candidate mallikarjun kharge and his son priyank kharge recivied threat call on june 7th. this is not first time. two year before also kharge recivied threat call.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X