ಮಲ್ಲೇಶ್ವರಂನಲ್ಲಿ ಸೀರೆಗಾಗಿ ಪರಸ್ಪರ ಕೂದಲಿಡಿದು ಕಿತ್ತಾಡಿದ ಮಹಿಳೆಯರು!
ಬೆಂಗಳೂರು, ಏಪ್ರಿಲ್. 24: ಜಗಳಕ್ಕೆ ಕಾರಣಗಳು ಹಲವಾರು ಬಿಡಿ. ಆದರೆ ಕೆಲವೊಂದು ಕಾರಣಗಳು ಮಾತ್ರ ಬಾರಿ ಚರ್ಚೆಗೆ ಒಳಗಾಗುತ್ತವೆ. ಜೊತೆಗೆ ಜನರನ್ನೂ ಆಶ್ಚರ್ಯಕ್ಕೆ ನೂಕುತ್ತವೆ. ಇಂತಹದ್ದೇ ಒಂದು ವೈರಲ್ ಜಗಳದ ಕಥೆ ಇದು. ಸಿಲಿಕಾನ್ ಸಿಟಿಯಲ್ಲಿ ಸೀರೆಗಾಗಿ ನೀರೆಯರು ಮುಖ ಮೂತಿ ನೋಡದೆ ಬಡಿದಾಡಿಕೊಂಡ ಘಟನೆ ನಡೆದಿದೆ.
Mysore silk saree yearly sale @Malleshwaram .. two customers fighting over for a saree.👆🤦♀️RT pic.twitter.com/4io5fiYay0
— RVAIDYA2000 🕉️ (@rvaidya2000) April 23, 2023
ಬೆಂಗಳೂರಿನ ಅಂಗಡಿಯೊಂದರಲ್ಲಿ ವಾರ್ಷಿಕವಾಗಿ ಆಯೋಜಿಸಲಾಗಿದ್ದ ರೇಷ್ಮೆ ಸೀರೆ ಸೇಲ್ ನಲ್ಲಿ ಸೀರೆಗಾಗಿ ಇಬ್ಬರು ಮಹಿಳೆಯರು ಜಗಳವಾಡುತ್ತಿರುವುದು ಕಂಡು ಬಂದಿದೆ. ಅಂಗಡಿಯೊಳಗೆ ಸೀರೆಗಾಗಿ ಇಬ್ಬರು ಮಹಿಳೆಯರ ನಡುವೆ ಕೆಟ್ಟ ಹೊಡೆದಾಟದ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರೀ ವೈರಲ್ ಆಗಿದೆ. ಸೀರೆಗಾಗಿ ಮಹಿಳೆಯರು ಹೀಗೂ ಕಿತ್ತಾಡುತ್ತಾರಾ ಎಂದು ಜನ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ವರದಿಗಳ ಪ್ರಕಾರ, ಬಟ್ಟೆ ಅಂಗಡಿಯು ದಾಸ್ತಾನು ವಿಲೇವಾರಿ ಮಾಡಲು ಪ್ರಸಿದ್ಧ ಮಲ್ಲೇಶ್ವರಂನ ರೇಷ್ಮೆ ಸೀರೆಯಲ್ಲಿ ವಾರ್ಷಿಕ ರಿಯಾಯಿತಿ ಮಾರಾಟವನ್ನು ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇಬ್ಬರು ಮಹಿಳೆಯರು ಜಗಳವಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ, ಮೈಸೂರಿನ ರೇಷ್ಮೆ ಸೀರೆ ಮಾರಾಟ ಸಮಾರಂಭದಲ್ಲಿ ಶಾಪಿಂಗ್ ಮಾಡುವಾಗ ಇಬ್ಬರು ಮಹಿಳೆಯರು ತೀವ್ರ ವಾಗ್ವಾದದಲ್ಲಿ ತೊಡಗಿರುವುದನ್ನು ಕಾಣಬಹುದು.
ವಾದ ವಾಗ್ವಾದಕ್ಕೆ ತಿರುಗಿದ ಸ್ವಲ್ಪ ಸಮಯದ ನಂತರ, ಜಗಳವು ಹೆಚ್ಚಾಗಿದ್ದು, ಪರಸ್ಪರರ ಕೂದಲನ್ನು ಹಿಡಿದು ಹೊಡೆಯುವುದು ಮತ್ತು ಎಳೆಯುವುದು ವೈರಲ್ ವೀಡಿಯೊದಲ್ಲಿ ಕಂಡುಬಂದಿದೆ. ನಂತರ, ಭದ್ರತಾ ಸಿಬ್ಬಂದಿ ಹೊಡೆದಾಟವನ್ನು ನಿಲ್ಲಿಸಿ ಇಬ್ಬರನ್ನು ದೂರ ತಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಗ್ರಾಹಕರು ಪರಸ್ಪರ ಕಪಾಳಮೋಕ್ಷ ಮಾಡುವುದನ್ನು ಮುಂದುವರೆಸಿದ್ದಾರೆ.
ಇನ್ನು, ಇದರ ನಡುವೆ ವೈರಲ್ ವಿಡಿಯೋ ನೋಡಿದ ಮತ್ತಷ್ಟು ಜನರಿಗೆ ಆಶ್ಚರ್ಯವಾಗಿದ್ದು, ಇತರ ಹೆಚ್ಚಿನ ಮಹಿಳಾ ಗ್ರಾಹಕರು ಜಗಳವನ್ನು ಲೆಕ್ಕಿಸದೆ ಶಾಪಿಂಗ್ ಮುಂದುವರೆಸಿದ್ದು. ಅಷ್ಟು ದೊಡ್ಡ ಗಲಾಟೆಯ ನಡುವೆಯೂ ಇತರ ಮಹಿಲೆಯರು ತಮ್ಮ ಪಾಡಿಗೆ ತಾವು ಶಾಪಿಂಗ್ ಮುಂದುವರೆಸಿದ್ದಾರೆ.
ಈ ವಿಡಿಯೋ ಟ್ವಿಟರ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ಏನಾಗುತ್ತಿದೆ ಎಂದು ನೋಡಲು ತಲೆಯನ್ನೂ ಸಹ ತಿರುಗಿಸದೆ ಶಾಪಿಂಗ್ ಮಾಡುವವರನ್ನು ನಾನು ಇಷ್ಟಪಡುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಸೀರೆಯು ಕೇವಲ ಬಟ್ಟೆಯ ತುಂಡಲ್ಲ, ಅದೊಂದು ಭಾವನೆ" ಎಂದು ಎರಡನೇ ಬಳಕೆದಾರರು ವ್ಯಂಗ್ಯವಾಡಿದ್ದಾರೆ.












Click it and Unblock the Notifications