ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ಕಾರ್ಮಿಕರ ಅನುಮಾನಾಸ್ಪದ ಸಾವು: ಪ್ರಕರಣ ದಾಖಲು

ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಫೆಬ್ರವರಿ. 06: ದಕ್ಷಿಣ ಬೆಂಗಳೂರಿನ ಕೋಣನಕುಂಟೆಯ ಅಪಾರ್ಟ್‌ಮೆಂಟ್‌ನ ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ (ಎಸ್‌ಟಿಪಿ) ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಉಸಿರುಗಟ್ಟುವಿಕೆ ಅಥವಾ ವಿದ್ಯುತ್ ಸ್ಪರ್ಶದಿಂದ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಮೃತರನ್ನು ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ರವಿಕುಮಾರ್ (29) ಮತ್ತು ಒಡಿಶಾ ಮೂಲದ ದಿಲೀಪ್ ಕುಮಾರ್ ಜಾನಾ (25) ಎಂದು ಗುರುತಿಸಲಾಗಿದೆ. ಖಾಸಗಿ ಸಂಸ್ಥೆಯೊಂದರ ಉದ್ಯೋಗಿಗಳಾಗಿರುವ ಇವರನ್ನು ಅಂಜನಾದ್ರಿ ಲೇಔಟ್‌ನ ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು.

Two STP workers found dead at an apartment complex

ಪ್ರಾಥಮಿಕ ತನಿಖೆಯ ಪ್ರಕಾರ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿಕುಮಾರ್ ಅವರ ಪತ್ನಿ ಶಶಿಕಲಾ ಅವರ ದೂರಿನ ಪ್ರಕಾರ, ಭಾನುವಾರ ಬೆಳಗ್ಗೆ 9 ಗಂಟೆಗೆ ಬಯೋ ಸೆಂಟ್ರಾ ಇಂಡಿಯಾ ಲಿಮಿಟೆಡ್‌ನ ಮೇಲ್ವಿಚಾರಕರು ತಮ್ಮ ಪತಿಯ ಸಾವಿನ ಬಗ್ಗೆ ಶಶಿಕಲಾ ಅವರಿಗೆ ಮಾಹಿತಿ ನೀಡಿದ್ದಾರೆ.

"ಅವರ ಸಾವಿಗೆ ನಿಖರವಾಗಿ ಕಾರಣವೇನು ಎಂದು ನಮಗೆ ಸ್ಪಷ್ಟವಾಗಿಲ್ಲ. ಎಸ್‌ಟಿಪಿ ಬಳಿ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು, ಟ್ರಾನ್ಸ್‌ಫಾರ್ಮರ್ ಮತ್ತು ಜನರೇಟರ್ ಇವೆ, ಆದರೆ ದೇಹಗಳ ಮೇಲೆ ಯಾವುದೇ ಸುಟ್ಟ ಗುರುತುಗಳಿಲ್ಲ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೊಲೀಸ್ ಪ್ರಕಾರ, ಅಪಾರ್ಟ್ಮೆಂಟ್ ಸಮುಚ್ಚಯದ ಎಸ್‌ಟಿಪಿಯ ಕೆಲಸವನ್ನು ಶನಿವಾರ ಎರಡು ಪಾಳಿಗಳಲ್ಲಿ ನಡೆಸಲಾಯಿತು. ಮೃತ ರವಿಕುಮಾರ್ ಮತ್ತು ದಿಲೀಪ್ ಕುಮಾರ್ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ, ಹೆಚ್ಚಿನ ಸೂಚನೆಗಳನ್ನು ನೀಡಲು ಮೇಲ್ವಿಚಾರಕ ರಮೇಶ್ ಅವರಿಗೆ ಕರೆ ಮಾಡಿದ್ದಾರೆ. ಆದರೆ ಅವರು ಉತ್ತರಿಸಲಿಲ್ಲ. ಭಾನುವಾರ ಅಪಾರ್ಟ್‌ಮೆಂಟ್ ಸಮುಚ್ಚಯದ ಭದ್ರತಾ ಸಿಬ್ಬಂದಿಗೆ ಮೇಲ್ವಿಚಾರಕ ಎಚ್ಚರಿಕೆ ನೀಡಿದ್ದು, ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

Two STP workers found dead at an apartment complex

ಶಶಿಕಲಾ ಅವರು ಬಯೋ ಸೆಂಟ್ರಾ ಇಂಡಿಯಾ ಲಿಮಿಟೆಡ್‌ನ ಮಾಲೀಕ ಮುಕ್ತಿಯಾರ್ ಅಹ್ಮದ್ ಮತ್ತು ಸಂಸ್ಥೆಯ ನೌಕರರು, ಪ್ರಭು ಎಲೆಕ್ಟ್ರಿಕಲ್ ಪ್ರಭಾರಿ ಮತ್ತು ಮೇಲ್ವಿಚಾರಕ ರಮೇಶ್ ಮತ್ತು ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ ಬ್ಲಾಕ್‌ನ ಆಡಳಿತ ಮಂಡಳಿ ಮತ್ತು ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಕೋಣನಕುಂಟೆ ಪೊಲೀಸರು ಅಹಮದ್, ಪ್ರಭು, ರಮೇಶ್ ಮತ್ತು ಆಡಳಿತ ಮಂಡಳಿ ಮತ್ತು ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್ 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+