ಬೆಂಗಳೂರು: ಸಂಪ್ ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಉಸಿರುಗಟ್ಟಿ ದುರ್ಮರಣ
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು, ಸಂಪು ಸ್ವಚ್ಛಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ಸಾವಿಗೀಡಾದ ಘಟನೆ ಬೆಂಗಳೂರು ಹೊರವಲಯದ ಹಾರೋಹಳ್ಳಿ ಎಂಬಲ್ಲಿ ನಿನ್ನೆ (ಮೇ 28) ನಡೆದಿದೆ.
ಬೆಂಗಳೂರು, ಮೇ 29: ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು, ಸಂಪು ಸ್ವಚ್ಛಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ಸಾವಿಗೀಡಾದ ಘಟನೆ ಬೆಂಗಳೂರು ಹೊರವಲಯದ ಹಾರೋಹಳ್ಳಿ ಎಂಬಲ್ಲಿ ನಿನ್ನೆ (ಮೇ 28) ನಡೆದಿದೆ.
ಮೃತರನ್ನು ಉಮೇಶ್(28), ದಿಲಿಪ್(27) ಎಂದು ಗುರುತಿಸಲಾಗಿದೆ. ರಾಜಾಜೀನಗರದ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಒಳಚರಂಡಿ ಘಟಕಕ್ಕೆ ಸಂಬಂಧಿಸಿಸದ ಕೆಲ ಮಾಡುತ್ತಿದ್ದರು. [ಇನ್ನೂ ಪತ್ತೆಯಾಗಿಲ್ಲ ರಾಜಾಕಾಲುವೆಯಲ್ಲಿ ಕೊಚ್ಚಿಹೋದ ಶಾಂತಕುಮಾರ್]

ಸಂಪು ಸ್ವಚ್ಛಗೊಳಿಸಲೆಂದು ಮೊದಲು ಸೊಂಪಿನೊಳಗೆ ಇಳಿದ ಉಮೇಶ್ ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಆತನಿಗೆ ಅಪಾಯವಾಗಿರಬೇಕೆಂದು ಭಾವಿಸಿದ ದಿಲಿಪ್ ತಾವೂ ಸಂಪಿಗೆ ಇಳಿದಿದ್ದಾರೆ. ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಸರಿಯಾದ ಮುಂಜಾಗರೂಕತೆಯಿಲ್ಲದೆ, ಕಂಪೆನಿಯ ನಿರ್ಲಕ್ಷ್ಯದಿಂದ ಇಬ್ಬರು ಅಮಅಯಕರ ಸಾವು ಸಂಭವಿಸಿದೆ ಎಂದಿರುವ ಪೊಲಿಸರು ಕಂಪೆನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications