ಒಂದೇ ದಿನಕ್ಕೆ ಎರಡು ಡಿಗ್ರಿ ಏರಿದ ಬೆಂಗಳೂರು ತಾಪಮಾನ

ಬೆಂಗಳೂರು, ಜನವರಿ 17: ಬೆಂಗಳೂರಿನ ತಾಪಮಾನದಲ್ಲಿ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ. ಮಂಗಳವಾರ 12.3 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಬುಧವಾರ 14.5 ಡಿಗ್ರಿಗೆ ಏರಿಕೆಯಾಗಿತ್ತು.

ಹವಾಮಾನ ನಿಧಾನವಾರ ಏರುಪೇರಾದರೆ ಯಾವುದೇ ಸಮಸ್ಯೆಯಿಲ್ಲ ಆದರೆ ಪ್ರತಿ ದಿನವೂ ದೊಡ್ಡ ಮಟ್ಟದಲ್ಲಿ ಏರುಪೇರಾದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಜನವರಿ ಆರಂಭದಿಂದಲೂ ಈ ರೀತಿ ಪದೇ ಪದೇ ತಾಪಮಾನದಲ್ಲಿ ಏರಿಳಿತ ಕಂಡುಬರುತ್ತಿದೆ. ಜನವರಿ 2ರಂದು ನಗರದ ಕೇಂದ್ರ ಭಾಗದಲ್ಲಿ 12.4 ಡಿಗ್ರಿ ತಾಪಮಾನ ಕಂಡುಬಂದಿತ್ತು. ಬಳಿಕ 15 ಡಿಗ್ರಿಗೆ ತಲುಪಿತ್ತು. ಈಗ 12 ಡಿಗ್ರಿ ಸೆಲ್ಸಿಯಸ್‌ಗೆ ಬಂದು ತಕ್ಷಣವೇ 14 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ.

Two degree temperature increased in a Day

2012ರ ಜನವರಿ 16ರಂದು 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡುಬಂದಿತ್ತು. ಇದಾದ ಬಳಿಕ ಮುಂದಿನ ವರ್ಷಗಳ ಜನವರಿಯಲ್ಲಿ ಈ ಮಟ್ಟಿಗೆ ತಾಪಮಾನ ಇಳಿದಿರಲಿಲ್ಲ.

ಜನವರಿ ಮುಗಿಯುವವರೆಗೂ ಇದೇ ರೀತಿ ತಾಪಮಾನದಲ್ಲಿ ಏರಿಳಿಕೆ ಕಂಡು ಬರುತ್ತದೆ. ಇನ್ನು ನಾಲ್ಕು ದಿನ 14,15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಮುಂದುವರೆಯಲಿದೆ. ಅಂತಾರಾಷ್ಟ್ರೀ ವಿಮಾನ ನಿಲ್ದಾಣದಲ್ಲಿ 11.3 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+