ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Rains : ಬೆಂಗಳೂರಿಗೆ ಇನ್ನೂ 2ದಿನ ಜಿಟಿ ಜಿಟಿ ಮಳೆ ನಿರೀಕ್ಷೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 02: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರದವರೆಗೆ ಗುಡುಗು ಸಹಿತ ಸಾಧಾರಣವಾಗಿ ಮಳೆ ಅಬ್ಬರಿಸುವ ಮುನ್ಸೂಚನೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಆಗಾಗ ಮಳೆ ಸುರಿಯುತ್ತಿದೆ. ಇದು ಮುಂದಿನ ಎರಡು ಮೂರು ದಿನಗಳ ವರೆಗೆ ಹೀಗೆ ಮಳೆ ಮುಂದುವರಿಯಲಿದೆ. ಅದರಲ್ಲೂ ಮಂಗಳವಾರದವರೆಗೆ ಮಧ್ಯಾಹ್ನ ಅಲ್ಲಲ್ಲಿ ಸಾಧಾರಣವಾಗಿ ಮಳೆ ಆಗಲಿದೆ. ಕೆಲವು ಕಡೆಗಳಲ್ಲಿ ತಡರಾತ್ರಿವರೆಗೂ ತುಂತುರು ಮಳೆ ಆಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

Two days rain will be continues to Bengaluru city

ಬೆಂಗಳೂರು ಕೋವಿಡ್ ಕಂಟೈನ್ಮೆಂಟ್ ಝೋನ್‌ ಮುಕ್ತ: ಬಿಬಿಎಂಪಿಬೆಂಗಳೂರು ಕೋವಿಡ್ ಕಂಟೈನ್ಮೆಂಟ್ ಝೋನ್‌ ಮುಕ್ತ: ಬಿಬಿಎಂಪಿ

ಭಾನುವಾರ ಸಹ ಬೆಳಗ್ಗೆಯಿಂದ ತಂಪು ವಾತಾವರವೇ ಕಂಡು ಬಂದಿದೆ. ಎರಡು ದಿನದಿಂದ ನಗರದಲ್ಲಿ ಚಳಿಯ ವಾತಾವರಣ ಕಂಡು ಬರುತ್ತಿದೆ. ಶನಿವಾರ ಅನೇಕ ಬಡಾವಣೆಗಳಲ್ಲಿ ಆಗಾಗ ಜಿಟಿ ಜಿಟಿ ಮಳೆ ಸುರಿದಿದೆ.

ನಗರದಲ್ಲಿ ಕಳೆದ 24ಗಂಟೆಗಳಲ್ಲಿ ಪೂರ್ವ ವಲಯದಲ್ಲಿ ಅಧಿಕ ಮಳೆ ದಾಖಲಾಗಿದೆ. ಕೆ.ಆರ್‌.ಪುರಂ ನಲ್ಲಿ 28ಮಿ.ಮೀ. ಮಳೆ ಆಗಿದೆ. ಉಳಿದಂತೆ ಹಗದೂರು ಮತ್ತು ದೊಡ್ಡಾನೆಕ್ಕುಂದಿಯಲ್ಲಿ ತಲಾ 26ಮಿ.ಮೀ, ವರ್ತೂರು, ಹೊರಮಾವು ಮತ್ತು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ತಲಾ 21ಮಿ.ಮೀ. ಮಳೆ ಬಿದ್ದಿದೆ. ಇದಲ್ಲದೇ ಕಾಡುಗೋಡಿ, ಎಚ್‌.ಗೊಲ್ಲಹಳ್ಳಿ, ಗರುಡಾಚಾರ್‌ಪಾಳ್ಯ, ಹೂಡಿ, ಹೆಮ್ಮಿಗೆ ಪುರ, ಕೆಂಗೇರಿ, ರಾಮಮೂರ್ತಿ ನಗರ, ಬಸವನಗುಡಿ, ಮಾರತ್ತಹಳ್ಳಿ, ಯಲಹಂಕ ಸೇರಿದಂತೆ ವಿವಿಧಡೆ ಹಗುರ ಮಳೆ ಆಗಿದೆ.

ಮಂಗಳವಾರದ ನಂತರ ದಿನಗಳಲ್ಲಿ ಮಳೆ ಪ್ರಮಾಣ ತುಸು ತಗ್ಗಲಿದೆ. ಮರು ದಿವಸದಿಂದ ಬಿಸಿಲಿನ ದರ್ಶನವಾಗಲಿದೆ. ಈ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ 29ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ಕಂಡು ಬರುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

English summary
Two days rain will be continues to Bengaluru city, says Karnataka State Natural Disaster Monitoring Centre weather report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X