ಬೆಂಗಳೂರು: ಮೇ10, 11ರಂದು ದೇಹದಾರ್ಢ್ಯ ಕಾರ್ಯಾಗಾರ
ಬೆಂಗಳೂರು, ಮೇ. 10: ಸ್ಟೆರಾಯ್ಡ್ ಬಳಸದೇ ನೈಸರ್ಗಿಕವಾಗಿ ದೇಹದಾರ್ಢ್ಯತೆಯನ್ನು ಹೊಂದುವ ಬಗ್ಗೆ ಅರಿವು ಮೂಡಿಸಲು ನಗರದ ದಯಾನಂದ ಸಾಗರ್ ಕಾಲೇಜ್‌ನಲ್ಲಿ 'ನ್ಯಾಚುರಲ್ ಬಾಡಿಬಿಲ್ಡ್' ವಿಷಯದ ಕುರಿತ ವಿಚಾರ ಸಂಕೀರಣ ನಡೆಯಲಿದೆ.
ಮೇ 10 ಮತ್ತು 11 ರಂದು ಕಾರ್ಯಾಗಾರ ನಡೆಯಲಿದ್ದು ಮಾಡೆಲ್ ಇಂಡಿಯಾ ಚಾಂಪಿಯನ್‌ಶಿಪ್ ಹಾಗೂ ಮಸಲ್ ಮೇನಿಯಾ ಇಂಡಿಯಾ ಟೂರ್ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ವಿಚಾರ ಸಂಕೀರಣದಲ್ಲಿ ಅಂತರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಟುಗಳಾದ ಅಮೆರಿಕದ ಪ್ರೋಸ್ ಉಲಿಸಸ್, ಜೆಸ್ಸಿಕಾ ವಾಸ್ವೆಜ್, ಲಂಡನ್‌ನ ಸಿಯೋನ್ ಪಾಂಡಾ ಭಾಗವಹಿಸಿ ಆಹಾರ ಸೇವನೆ, ಕ್ರಮಬದ್ಧ ವ್ಯಾಯಾಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದರು.
ಹೆಚ್ಚಿನ ಮಾಹಿತಿಗೆ ಈ ನಂಬರ್‌ಗೆ ಕರೆ ಮಾಡಬಹುದು: 98450 44468












Click it and Unblock the Notifications