ಪೊಲೀಸರ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ಇಬ್ಬರು ಅರೆಸ್ಟ್

ಬೆಂಗಳೂರು, ಡಿ. 15: ಪೊಲೀಸರಂತೆ ನಟಿಸಿ ಸುಲಿಗೆ ಮಾಡಿದ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಬೆಂಗಳೂರಿನಲ್ಲಿ ತಮ್ಮನ್ನು ಕ್ರೈಂ ಬ್ರಾಂಚ್ ಪೊಲೀಸರೆಂದು ಹೇಳಿಕೊಂಡು ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿದ ಇಬ್ಬರನ್ನು ಭಾನುವಾರ ರಾತ್ರಿ ಭಾರತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಗಿದ್ದೇನು?: ಹಲಸೂರು ಕೆರೆ ಹತ್ತಿರ ಕಾರಿನಲ್ಲಿ ಸಿದ್ಧಾರ್ಥ ಎಂಬುವರು ತಮ್ಮ ಗೆಳತಿಯೊಂದಿಗೆ ಭಾನುವಾರ ರಾತ್ರಿ 8.30 ಗಂಟೆ ಸಮಯದಲ್ಲಿ ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಅನಿಲ್ ಮತ್ತು ಫೈಜುಲ್ ಎಂಬುವರು ಈ ಕಾರನ್ನು ಅಡ್ಡಗಟ್ಟಿದರು. [ನಕಲಿ ಸಿಬಿಐ ಅಧಿಕಾರಿ ಪರಾರಿ]

map

ನಾವು ಕ್ರೈಂ ಬ್ರಾಂಚ್ ಪೊಲೀಸರು ಎಂದು ಹೇಳಿ ಸಿದ್ಧಾರ್ಥ ಅವರಿಗೆ ಕೆಳಗಿಳಿಯಲು ಸೂಚಿಸಿದರು. ನಂತರ ಬಲವಂತವಾಗಿ ಅವರ ಪರ್ಸ್‌ ಕಸಿದುಕೊಂಡು ಅದರಲ್ಲಿದ್ದ 1,700 ರೂ. ಎತ್ತಿಕೊಂಡು ಪರಾರಿಯಾಗಲು ಯತ್ನಿಸಿದರು.

ದಿಢೀರ್ ಬೆಳವಣಿಗೆಯಿಂದ ಶಾಕ್‌ಗೊಳಗಾದ ಸಿದ್ಧಾರ್ಥ ರಕ್ಷಣೆ ನೀಡುವಂತೆ ಕೂಗಿಕೊಂಡರು. ಆಗ ಅಲ್ಲಿಯೇ ಗಸ್ತಿನಲ್ಲಿ ತಿರುಗುತ್ತಿದ್ದ ಭಾರತಿನಗರ ಠಾಣೆ ಪೊಲೀಸರು ಸುಲಿಗೆಗೆ ಯತ್ನಿಸಿದವರನ್ನು ಬೆನ್ನಟ್ಟಿ ಜನರ ನೆರವಿನಿಂದ ಬಂಧಿಸಿದ್ದಾರೆ. [ಸಿಕ್ಕಿಬಿದ್ರು ನಕಲಿ ಪೊಲೀಸರು]

ಬಂಧಿತರನ್ನು ಆರ್.ಟಿ. ಸುಲ್ತಾನ್‌ಪಾಳ್ಯದ ಅನಿಲ್‌ಕುಮಾರ್ ಹಾಗೂ ಮಾಲೂರು ತಾಲೂಕಿನ ಫೈಜುಲ್ ಎಂದು ಗುರುತಿಸಲಾಗಿದೆ. ಇವರು ಕಳೆದ ವರ್ಷವೂ ಇಂತಹುದೇ ಪ್ರಕರಣದಲ್ಲಿ ಸದಾಶಿವ ನಗರ ಠಾಣೆಯಲ್ಲಿ ಬಂಧಿತರಾಗಿದ್ದರು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+