'ಒನ್ ಇಂಡಿಯಾ ಒನ್ ಲಾ' ಸಂಹಿತೆ ಟ್ವೀಟ್ ಚರ್ಚೆ

ನವದೆಹಲಿ, ಜು.16: ಲೋಕಸಭಾ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿತ್ತು. ಈ ಬಗ್ಗೆ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಸಂಸತ್ ಕಲಾಪದ ವೇಳೆ ಪ್ರಶ್ನಿಸಿದ್ದಕ್ಕೆ ಕಾನೂನು ಸಚಿವ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಸಮರ್ಪಕ ಉತ್ತರವನ್ನು ನೀಡಿದ್ದಾರೆ. ಅದರೆ, ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಇನ್ನೂ ಜಾರಿಯಲ್ಲಿದೆ.

ಎಲ್ಲ ಪಕ್ಷಗಳೊಂದಿಗೆ ಸಮಗ್ರವಾಗಿ ಸಮಾಲೋಚನೆ ನಡೆಸಿದ ಬಳಿಕ ಏಕರೂಪದ ನಾಗರಿಕ ಸಂಹಿತೆ ಕುರಿತು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಂವಿಧಾನದ 44 ಕಾಲಂ ಅಡಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಇದ್ದು , ಈ ಬಗ್ಗೆ ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಲ್ಲ ಪಕ್ಷಗಳು, ಎನ್ ಜಿಒಗಳು, ಜನಸಾಮಾನ್ಯರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್‌ ಲೋಕಸಭೆಯಲ್ಲಿ ಉತ್ತರಿಸಿದ್ದರು.

ಆದರೆ, ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಆತಂಕ ವ್ಯಕ್ತಪಡಿಸಿದ್ದರೆ, ಇದು ಯಾವ ರೀತಿ ಜನರಿಗೆ ಉಪಯೋಗವಾಗಲಿದೆ ಎಂಬುದರ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ನಡೆದಿದೆ. ಈ ಬಗ್ಗೆ ಬಂದಿರುವ ಟ್ವೀಟ್ ಗಳು, ಮೋದಿ ಅವರು ಈ ಹಿಂದೆ ನೀಡಿದ್ದ ಸಮರ್ಥನೆ ಮುಂದೆ ಓದಿ...

ಹಿಂದೂ ನಾಗರಿಕ ಸಂಹಿತೆಯನ್ನು ಹೇರುವುದಲ್ಲ

ಹಿಂದೂ ನಾಗರಿಕ ಸಂಹಿತೆಯನ್ನು ಹೇರುವುದಲ್ಲ

'ಸಂವಿಧಾನ ಹೇಳುವಂತೆ ಏಕರೂಪ ನಾಗರಿಕ ಸಂಹಿತೆ ತರಲು ಸರ್ಕಾರ ಪ್ರಯತ್ನಿಸುತ್ತದೆ, ಆದರೆ ಇದೇ ಹೊತ್ತಿಗೆ ಮತ್ತೊಂದು ವಿಷಯವನ್ನು ನಾನು ಸ್ಪಷ್ಟಪಡಿಸಬೇಕಾಗಿದೆ. 'ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದ ಜನರ ಮೇಲೆ ಹಿಂದೂ ನಾಗರಿಕ ಸಂಹಿತೆಯನ್ನು ಹೇರುವುದು ಎಂದರ್ಥ ಅಲ್ಲ. ಈ ಬಗ್ಗೆ ಆತಂಕ ಬೇಡ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದರು.

ಕಾನೂನು ಬದಲಾವಣೆ ಬಗ್ಗೆ ಮೋದಿ

ಕಾನೂನು ಬದಲಾವಣೆ ಬಗ್ಗೆ ಮೋದಿ

ನನ್ನ ಪ್ರಕಾರ ಹಿಂದೂ ನಾಗರಿಕ ಸಂಹಿತೆಯಲ್ಲಿ ಇರುವ ಅಂಶಗಳಲ್ಲಿ ಕೆಲವು ಸದ್ಯದ ಸ್ಥಿತಿಗೆ ಅನಗತ್ಯ ಎನಿಸಿದ್ದು ಅವುಗಳನ್ನು ಪುನರ್‌ವಿಮರ್ಶಿಸಬೇಕಾಗಿದೆ. 18ನೇ ಶತಮಾನದ ಕಾನೂನುಗಳನ್ನು 21ನೇ ಶತಮಾನದಲ್ಲಿ ಅಳವಡಿಸುವುದು ಸರಿ ಅಲ್ಲ' ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ ಸಂವಿಧಾನಾತ್ಮಕ ಸೌಲಭ್ಯಗಳಿಗೆ ಯಾವುದೇ ಕತ್ತರಿ ಹಾಕುವುದಿಲ್ಲ ಎಂದೂ ಮೋದಿ ಸ್ಪಷ್ಟಪಡಿಸಿದ್ದರು.
ಮಾಜಿ ಸಚಿವ ಮನಿಷ್ ತಿವಾರಿ ಪ್ರತಿಕ್ರಿಯೆ

ಮಾಜಿ ಸಚಿವ ಮನಿಷ್ ತಿವಾರಿ ಪ್ರತಿಕ್ರಿಯೆ

ಕೇಂದ್ರ ಮಾಜಿ ಸಚಿವ ಮನಿಷ್ ತಿವಾರಿ, ಏಕರೂಪ ನಾಗರಿಕ ಸಂಹಿತೆ ಜಾರಿ ನೆಪದಲ್ಲಿ ಖಾಸಗಿ ಕಾನೂನುಗಳಿಗೆ ಧಕ್ಕೆ ಉಂಟು ಮಾಡಬಾರದು ಎಂದಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಆರ್.ಎಸ್.ಎಸ್ ನ ಅಜೆಂಡಾ ಆಗಿದೆ. ಆದರೆ ಭಾರತ ವೈವಿಧ್ಯತೆಯಿಂದ ಕೂಡಿರುವ ದೇಶ, ದೇಶದ ಜನತೆ ತಮ್ಮ ತಮ್ಮ ಧರ್ಮಗಳ ಪದ್ಧತಿಯನ್ನು ಅನುಸರಿಸುತ್ತಾರೆ.

ಮದುವೆ, ಅಂತ್ಯ ಸಂಸ್ಕಾರ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನತೆ ತಮ್ಮದೇ ಧರ್ಮದ ಪದ್ಧತಿಗಳನ್ನು ಆಚರಿಸುತ್ತಾರೆ. ಆದ್ದರಿಂದ ಸರ್ಕಾರ ಖಾಸಗಿ ಕಾನೂನು ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಕಾನೂನಿನಲ್ಲಿ ಬದಲಾವಣೆ ಏಕೆ?

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ ಮಾಡುವುದರಲ್ಲಿ ತಪ್ಪೇನಿಲ್ಲ.

ಅಲ್ಪಸಂಖ್ಯಾತರಿಗೆ ನ್ಯಾಯ ಸಿಗಬೇಕಾದರೆ ಇದೇಕೆ ಬೇಡ

ಅಲ್ಪಸಂಖ್ಯಾತರಿಗೆ ನ್ಯಾಯ ಸಿಗಬೇಕಾದರೆ ನಾಗರಿಕ ಸಂಹಿತೆ ತಿದ್ದುಪಡಿ ಏಕೆ ಬೇಡ?

ಭಾರತದಲ್ಲಿ ಸಮಾನ ನೀತಿ ಸಂಹಿತೆ ಬೇಕಿದೆ

ಭಾರತದಲ್ಲಿ ಸಮಾನ ನೀತಿ ಸಂಹಿತೆ ಬೇಕಿದೆ

ವಿವಿಧತೆಯಲ್ಲಿ ಏಕತೆ ಜಾರಿಯಾಗಬೇಕಿದೆ

ವಿವಿಧತೆಯಲ್ಲಿ ಏಕತೆ ಜಾರಿಯಾಗಬೇಕಿದೆ ಇದಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಬೇಕಿದೆ.

ಜನಸಮಾನ್ಯರ ಕಾನೂನುಗಳಿಗಿಂತ ಭಿನ್ನವಾಗಿದೆ

ಜನಸಮಾನ್ಯರ ಕಾನೂನುಗಳಿಗಿಂತ ಭಿನ್ನವಾಗಿದೆ

ಈ ಕಾನೂನುಗಳು ಜನಸಮಾನ್ಯರ ಕಾನೂನುಗಳಿಗಿಂತ ಭಿನ್ನವಾಗಿರುತ್ತವೆ. ಇದು ಮದುವೆ, ವಿಚ್ಚೇದನ, ಪಿತ್ರಾರ್ಜಿತ ಭಾದ್ಯತೆ, ದತ್ತು ತೆಗೆದುಕೊಳ್ಳುವಿಕೆ ಪೋಷಣೆ ಇವುಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ರಾಜ್ಯವು ಸಂವಿದಾನದ 44 ನೇ ವಿಧಿಯಲ್ಲಿರುವ ಭಾರತದ ಏಕರೂಪ ನಾಗರೀಕ ಸಂಹಿತೆಯನ್ನು ಅಳವಡಿಸಿಕೊಳ್ಳುವುದು ಅವರ ಕರ್ತವ್ಯವಾಗಿದೆ. ಹೆಚ್ಚಿನ ವಿವರ ಇಲ್ಲಿ ಓದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+