• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಧನ ನಂತರವೂ ಟ್ವಿಟ್ಟರ್‌ನಲ್ಲಿ ಮುಗಿಬಿದ್ದ 'ಅನಂತ'ಅಭಿಮಾನಿಗಳು

|
   Ananth Kumar Demise : ಅನಂತ್ ಕುಮಾರ್ ಮರಣದ ನಂತರವೂ ಟ್ವಿಟ್ಟರ್ ನಲ್ಲಿ ಹೆಚ್ಚಾದ ಅಭಿಮಾನಿಗಳು |Oneindia Kannada

   ಬೆಂಗಳೂರು, ನವೆಂಬರ್ 16: ಕೇಂದ್ರ ಸಚಿವ ಅನಂತ ಕುಮಾರ್ ಎಲ್ಲರನ್ನು ಅಗಲಿದ್ದರೂ ಅವರ ಅಭಿಮಾನಿಗಳ ಮನದಲ್ಲಿ ಎಂದಿಗೂ ಶಾಶ್ವತವಾಗಿ ನೆಲೆಸಿದ್ದಾರೆ ಎನ್ನುವುದು ಸಾಭೀತಾಗಿದೆ.

   ಬಿಜೆಪಿಯ ಧೀಮಂತ ನಾಯಕರಲ್ಲಿ ಒಬ್ಬರಾಗಿದ್ದ ದಿವಂಗತ ಅನಂತ ಕುಮಾರ್ ಅವರು ಇನ್ನುಮುಂದೆ ಯಾವ ಪ್ರತಿಕ್ರಿಯೆಗೂ ಲಭ್ಯವಾಗುವುದಿಲ್ಲ ಎಂದು ತಿಳಿದಿದ್ದರೂ ಕೂಡ ಅವರ ಮರಣ ನಂತರ ಮೂರು ದಿನಗಳಲ್ಲಿ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ ಹೆಚ್ಚಾಗಿದೆ.

   ಸಾಮಾನ್ಯವಾಗಿ ನಾವು ಇಷ್ಟ ಪಡುವ ವ್ಯಕ್ತಿ ಅಥವಾ ನಮ್ಮ ಸ್ನೇಹಿತ ಯಾರೇ ಆಗಿರಲಿ ಅವರ ಮೃತ್ಯು ಸಂಭವಿಸಿದರೆ ನಾವು ಅವರ ಫೋಟೊವನ್ನು ನೋಡಿದರೆ ಅವರ ನೆನಪು ಮತ್ತೆ ಬಂದು ಬೇಸರವಾಗುತ್ತದೆ ಎಂದು ಅನ್‌ಫಾಲೋ ಮಾಡುತ್ತೇವೆ ಆದರೆ ಅನಂತ ಕುಮಾರ್ ಮರಣ ನಂತರ ಅವರನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

   ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿ ಅಭ್ಯರ್ಥಿ?!

   ರಾಜ್ಯದ ಹಿರಿಯ ರಾಜಕಾರಣಿಯೊಬ್ಬರ ಸಾಮಾಜಿಕ ಜಾಲತಾಣದ ಖಾತೆ ಅವರ ಮರಣದ ನಂತರವೂ ಹಿಂಬಾಲಕರಿಂದ ಚಟುವಟಿಕೆಯಲ್ಲಿದೆ ಎನ್ನುವುದೇ ಕುತೂಹಲ ಮೂಡಿಸುವ ಸಂಗತಿಯಾಗಿದೆ.

   ಸಚಿವ ಅನಂತ ಕುಮಾರ್ ಅವರು ನವೆಂಬರ್ 12 ರಂದು ನಿಧನರಾದ ದಿನ ಅವರ ಹಿಂಬಾಲಕರ ಸಂಖ್ಯೆ 3.35 ಲಕ್ಷ ಇತ್ತು ನ.15ರೊಳಗೆ ಸಾವಿರಕ್ಕೂ ಅಧಿಕ ಸಂಖ್ಯೆ ಸೇರ್ಪಡೆಯಾಗಿದೆ. ಸದ್ಯ ಅವರ ಟ್ವಿಟ್ಟರ್ ಖಾತೆಯ ಹಿಂಬಾಲಕರ ಸಂಖ್ಯೆ 3.36 ಲಕ್ಷಕ್ಕೆ ಏರಿದೆ.

   ಅನಂತ ಕುಮಾರ್ ಅವರು ಏಳು ವರ್ಷಗಳಿಂದ ಟ್ವಿಟ್ಟರ್ ಖಾತೆ ಹೊಂದಿದ್ದಾರೆ. ಬಹಳಷ್ಟು ಜನರು ಅವರನ್ನು ನೆನೆದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

   English summary
   More than one thousand fans were followed union minister late Ananth Kumar in the last four days despite knowing his demise.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X