ಕನ್ನಡದಲ್ಲೇ ಸೇವೆ ಪಡೆಯುವುದು ಕನ್ನಡಿಗರ ಹಕ್ಕು: ಟ್ವಿಟ್ಟರ್ ಅಭಿಯಾನ
ಬೆಂಗಳೂರು, ಮಾರ್ಚ್ 12: ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಸರ್ವ್ ಇನ್ ಮೈ ಲ್ಯಾಂಗ್ವೇಜ್ ಹ್ಯಾಶ್‌ಟ್ಯಾಗ್ ನಡಿಯಲ್ಲಿ ಗ್ರಾಹಕರಿಗೆ ಪ್ರಾದೇಶಿಕ ಭಾಷೆಯಲ್ಲೇ ಅಪ್ಲಿಕೇಷನ್ ಗಳು ದೊರೆಯಬೇಕೆಂಬ ಅಭಿಯಾನವನ್ನು ಟ್ವಿಟ್ಟರ್ ಮೂಲಕ ಆರಂಭಿಸಲಾಗುತ್ತಿದೆ.
ಗ್ರಾಹಕರಿಗೆ ಕನ್ನಡ ಭಾಷೆಯಲ್ಲಿಯೇ ಉತ್ಪನ್ನಗಳು ಹಾಗೂ ವಸ್ತುಗಳ ಕುರಿತಾದ ಮಾಹಿತಿ ದರ, ಒಂದು ವಸ್ತುವನ್ನು ತಯಾರಿಸಲು ಬೇಕಾದ ಕಚ್ಛಾವಸ್ತುಗಳ ಕುರಿತಾಗಿ ಹಾಗೂ ಆಯಾ ವಸ್ತುವಿನ ವಿಶ್ವಾಸಾರ್ಹತೆ ಕುರಿತಂತೆ ಮಾಹಿತಿ ಎಲ್ಲ ಉತ್ಪನ್ನಗಳ ಮೇಲ್ಮೈಯಲ್ಲಿ ಪ್ರದರ್ಶಿತಗೊಳ್ಳಲೇ ಬೇಕು.
ಆ ಮೂಲಕ ಗ್ರಾಹಕರಿಗೆ ತಾವು ಕೊಳ್ಳುತ್ತಿರುವ ವಸ್ತುಗಳ ಬಗ್ಗೆ ಸಂಪೂರ್ಣ ಅರಿವಿರಬೇಕು ಇದು ಗ್ರಾಹಕರ ಹಕ್ಕು ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಗಳ ಮೂಲಕ ಕನ್ನಡ ಗ್ರಾಹಕರ ಕೂಟ ಅಭಿಯಾನವೊಂದನ್ನು ಮಾರ್ಚ್ 15ರಂದು ಬೆಳಗ್ಗೆ 10ಗಂಟೆಯಿಂದ ಹಮ್ಮಿಕೊಂಡಿದೆ.
#ServeInMyLanguage #WorldConsumerRightsDay
— A.N.NatarajGowda INC (@annatarajgowda) March 12, 2018
ಕನ್ನಡದಲ್ಲೇ ಸೇವೆ ಪಡೆಯುವುದು ಕನ್ನಡಿಗರ ಹಕ್ಕು. pic.twitter.com/6g2VOaSe40
ಆಯಾ ಪ್ರಾದೇಶಿಕ ಭಾಷೆಯಲ್ಲೇ ಅಪ್ಲಿಕೇಷನ್ ಗಳು ಕೂಡ ಲಭಿಸುವಂತಾಗಬೇಕು ಎಂಬ ಉದ್ದೇಶದಿಂದ ಗ್ರಾಹಕರ ಹಕ್ಕು ರಕ್ಷಣೆಗಾಗಿ ಅಭಿಯಾನ ನಡೆಸಲಾಗುತ್ತಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನಕ್ಕೆ ಕೈಜೋಡಿಸಲು ಕೋರಲಾಗಿದೆ.
ಭಾರತೀಯ ಗ್ರಾಹಕರಿಗೆ ತಮ್ಮ ನುಡಿಯಲ್ಲಿಯೇ ಎಲ್ಲಾ ಗ್ರಾಹಕ ಸೇವೆಗಳು ಸಿಗುವುದರ ಮಹತ್ವವನ್ನು ಸಾರಲು ವಿಶ್ವ ಗ್ರಾಹಕರ ಒಕ್ಕೂಟ ಟ್ವೀಟ್ ಅಪ್ ಅಭಿಯಾನವನ್ನು ಹಮ್ಮಿಕೊಂಡಿದೆ. ಹ್ಯಾಶ್ ಟ್ಯಾಗ್serveInMyLanguage, ಹ್ಯಾಶ್ ಟ್ಯಾಗ್ WorldConsumersRightsDay ಮೂಲಕ ಟ್ವೀಟ್ ಮಾಡಬಹುದು.












Click it and Unblock the Notifications