• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿನ್ ನಿವೃತ್ತಿ ಬಗ್ಗೆ ಟ್ವೀಟ್ಸ್ ಮಹಾಪೂರ

By Mahesh
|

ಬೆಂಗಳೂರು, ಅ.10: ಸಚಿನ್ ಅವರು ತಮ್ಮ ವೃತ್ತಿ ಜೀವನದ ಕಟ್ಟ ಕಡೆಯ ಕೊನೆ ಟೆಸ್ಟ್ ಎಲ್ಲಿ ಆಡಲಿದ್ದಾರೆ? ಸಚಿನ್ ಅವರ 200ನೇ ಟೆಸ್ಟ್ ಪಂದ್ಯಕ್ಕೆ ಟಿಕೆಟ್ ಪಡೆಯುವುದು ಹೇಗೆ? ಒಂದು ವೇಳೆ 200ನೇ ಟೆಸ್ಟ್ ಪಂದ್ಯದಲ್ಲಿ ಆಡದಂತೆ ಬೆಂಚ್ ನಲ್ಲೇ ಕೂರಲು ನಾಯಕ ಧೋನಿ ಹೇಳಿದರೆ ಏನಾಗಲಿದೆ? ಹೀಗೆ ತರಾವರಿ ಪ್ರಶ್ನೋತ್ತರ ಚರ್ಚೆ ಸಾಮಾಜಿಕ ಜಾಲ ತಾಣಗಳಲ್ಲಿ ನಡೆದಿದೆ.

ನ.14ರಂದು 200ನೇ ಟೆಸ್ಟ್ ಅವರು ತಮ್ಮ ಅಂತಿಮ ಟೆಸ್ಟ್ ಆಡಲಿದ್ದಾರೆ. 300 ರನ್ ಗಡಿ ಹಾಗೂ 200 ಟೆಸ್ಟ್ ಪಂದ್ಯ ಎರಡು ಸದ್ಯಕ್ಕೆ ಸಚಿನ್ ಅವರ ಮುಂದಿರುವ ಗುರಿ ಎನ್ನಲಾಗಿದೆ. ಅಭಿಮಾನಿಗಳು ಸಚಿನ್ ಅವರ ನಿವೃತ್ತಿ ಸುದ್ದಿ ಕೇಳಿ ಆಘಾತ ವ್ಯಕ್ತಪಡಿಸಿದ್ದಾರೆ. ಮಾಜಿ ಕ್ರಿಕೆಟರ್ ಗಳು, ಚಿರ ಅಭಿಮಾನಿಗಳು ಸಚಿನ್ ಬಗ್ಗೆ ಹೇಳಿರುವ ಮಾತುಗಳು ಇಲ್ಲಿವೆ ಮುಂದೆ ಓದಿ

ಸಚಿನ್ ರಿಟೈರ್ ಆಗ್ತಾರಂತೆ. Oh 'My GOD'..! ಅಂದ ಹಾಗೆ ದೇವರಿಗೂ ನಿವೃತ್ತಿ ಎಂಬುದಿದೆ ಎಂದರೆ ನಂಬುವುದಕ್ಕೇ ಆಗುತ್ತಿಲ್ಲ. ಏನೋಪ್ಪಾ...ದೇವರ ಆಟ ಬಲ್ಲವರಾರು? ನನಗಂತೂ ಕ್ರಿಕೆಟ್ ಹುಚ್ಚು ಹಿಡಿಸಿ ಪರೀಕ್ಷೆಯ ದಿನಗಳಲ್ಲೂ ಪುಸ್ತಕ ಓದುವುದು ಬಿಟ್ಟು ಕಣ್ಕಣ್ ಬಿಟ್ಟು ಕ್ರಿಕೆಟ್ ನೋಡುವಂತೆ ಮಾಡಿ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಲು ಕಾರಣವಾದ ತೆಂಡೂಲ್ಕರ್ ಇನ್ನುಮುಂದೆ ಆಡುವುದಿಲ್ಲ ಎಂದು ನನ್ನ ತಾಯಿಯ ಬಳಿ ಹೇಳಿದರೆ ಖಂಡಿತ ಅವಳಿಗೆ ಸ್ವಲ್ಪ ಸಮಾಧಾನವಾಗಬಹುದು. ಅವಳ ಎಷ್ಟೋ ಧಾರಾವಾಹಿಗಳನ್ನು ಬಲಿ ತೆಗೆದುಕೊಂಡವನೇ ಈ ಭೂಪ. 'ಓದ್ಕೊಳ್ಳೋ ಹೋಗೋ' ಅಂದರೂ ಕೇಳದೇ, ಸ್ವತಃ ತಾಯಿಯ ಮಾತನ್ನೂ ಮೀರುವಂತೆ ನನ್ನನ್ನು ಮೋಡಿ ಮಾಡಿದ ಸಚಿನ್, ರಿಟೈರ್ ಆಗುತ್ತಾರೆ ಅಂದರೆ ಖಂಡಿತ ಅವಳು ಅಬ್ಬಾ.. ಎಂದು ನಿಟ್ಟುಸಿರು ಬಿಡುತ್ತಾಳೆ.

ಇನ್ನು ಮುಂದೆ ಸಚಿನ್ ಗ್ರೇಟೋ, ದ್ರಾವಿಡ್ ಗ್ರೇಟೋ ಅಂತೆಲ್ಲಾ ಸ್ನೇಹಿತರ ಬಳಿ ಜಗಳವಾಡುವುದೂ ಇರುವುದಿಲ್ಲ. ಇಬ್ಬರೂ ಪ್ಯಾಕಪ್ ಮಾಡಿಕೊಂಡು ಹೊರಟು ನಿಂತಿದ್ದಾರೆ. ಅಭಿಮಾನಿ ಫೇಸ್ ಬುಕ್ ವಾಲ್ ಮೇಲೆ ಬರೆದ ಮಾತುಗಳು ಮುಂದುವರೆದು...

ಅಭಿಮಾನಿ ವಿಶ್ವನಾಥ್ ಸುಂಕಸಾಲ

ಅಭಿಮಾನಿ ವಿಶ್ವನಾಥ್ ಸುಂಕಸಾಲ

ಆದರೆ ನನ್ನ ಪಾಲಿಗೆ ಸಚಿನ್ ಅಂದರೆ ಕುಡುಕರಿಗೆ ವೈನ್ ಇದ್ದ ಹಾಗೆ. ಬೇಸರದ ಸಮಯದಲ್ಲಿ ಎಷ್ಟೋ ಸಲ ಕ್ರಿಕೆಟ್ ನೋಡಿಯೇ ಬೇಸರ ಕಳೆದದ್ದಿದೆ. ಅನೇಕ ಸಲ ದುಗುಡ, ಚಿಂತೆಗಳನ್ನೆಲ್ಲ ಸಚಿನ್ ಆಟದಲ್ಲಿ ಮರೆತದ್ದಿದೆ.

ಇಂದಿಗೂ ಊರಿಗೆ ಹೋಗುವಾಗ ಕ್ರಿಕೆಟ್ ಮ್ಯಾಚ್ ಇದೆಯಾ ಎಂದು ಒಮ್ಮೆ ಪರೀಕ್ಷಿಸಿ ಹೋಗುತ್ತೇನೆ. ಸಚಿನ್ ಲಭ್ಯ ಇರುವ ಯಾವುದೇ ಮ್ಯಾಚ್ ಇದ್ದ ದಿನ ಮನೆಗೆ ಯಾರಾದರೂ ಬಂದರೂ ಅವನು ಔಟ್ ಆದ ಮೇಲೆಯೇ ನಾನವರನ್ನು ಮಾತನಾಡಿಸುವುದು. ಊಟ, ನಿದ್ರೆಗಳೆಲ್ಲ ದೇವರ ಆಟ ಮುಗಿದ ಮೇಲೆ. ದೇವರು ಆಟ ಮುಗಿಸಿದ. ಕೊನೆಯ ಮ್ಯಾಚ್ ನೋಡುವುದಕ್ಕೆ ನನಗೆ ಇಷ್ಟವೇ ಇಲ್ಲ -ವಿಶ್ವನಾಥ್ ಸುಂಕಸಾಲ

ಫೇಕಿಂಗ್ ನ್ಯೂಸ್

ಸಚಿನ್ ನಿವೃತ್ತಿ ಬಗ್ಗೆ ಫೇಕಿಂಗ್ ನ್ಯೂಸ್ ಮಾಡಿದ ಜೋಕ್

ವೋಟ್ ಕೇಳ್ಬೇಡಪ್ಪ

ಕಾಂಗ್ರೆಸ್ ಗೆ ವೋಟ್ ಮಾಡಿ ಎಂದು ಕೇಳ್ಬೇಡಪ್ಪ

ಇರ್ಫಾನ್ ಪಠಾಣ್ ಟ್ವೀಟ್

ವೇಗಿ ಇರ್ಫಾನ್ ಪಠಾಣ್ ತಮ್ಮ ನೋವನ್ನು ತೋಡಿಕೊಂಡಿದ್ದು ಹೀಗೆ

ಮುಂಬೈ ಇಂಡಿಯನ್ಸ್ ಟ್ವೀಟ್

ಮುಂಬೈ ಇಂಡಿಯನ್ಸ್ ತಂಡದವರು ಕ್ರಿಕೆಟ್ ದೇವರ ಬಗ್ಗೆ ಟ್ವೀಟ್ ಮಾಡಿದ್ದು ಹೀಗೆ

ರಾಜದೀಪ್ ಪ್ರತಿಕ್ರಿಯೆ

ಸಿಎನ್ ಎನ್ ಐಬಿಎನ್ ಎಡಿಟರ್ ಇನ್ ಚೀಫ್ ರಾಜದೀಪ್ ಸರ್ದೇಸಾಯಿ ಅವರ ಪ್ರತಿಕ್ರಿಯೆ

ಇಯಾನ್ ಮಾರ್ಗನ್

ನೀವು ಇಡೀ ದೇಶಕ್ಕೆ ಸ್ಪೂರ್ತಿ ತುಂಬಿದ್ದೀರಾ ಗ್ರೇಟ್ ಎಂದ ಇಂಗ್ಲೆಂಡ್ ಆಟಗಾರ

ಅಭಿಮಾನಿಗಳ ಪ್ರತಿಕ್ರಿಯೆ

ಅಭಿಮಾನಿಗಳ ಪ್ರತಿಕ್ರಿಯೆ

Dada retired-ತಂಡದಲ್ಲಿ ಹೊಂದಾಣಿಕೆಯ ಸಾವು,

Dravid retired- ಗೋಡೆಯ ಆಟ ಮಾಯ,

Laxman retired- ಕಲಾತ್ಮಕ ರೇಖೆಯ ಆಟ ಮಾಯ,

Sachin retired- ಕ್ರೀಕೆಟ್ ನ ಸಾವು...ಎಂದೆಂದಿಗೂ ಮರೆಯದ ದಂತಕತೆಗಳು...vvs-ವಿನೋದ್ ವಿವಿಎಸ್

ಇಲ್ಲೂ ರಾಜಕೀಯ

ಸಚಿನ್ ನಿವೃತ್ತಿ ನಂತರ ಕಾಂಗ್ರೆಸ್ ಪರ ನಿಂತರೆ ಹೇಗಿರುತ್ತೆ ಪ್ರತಿಕ್ರಿಯೆ

ವಿಂಡೀಸ್ ಲಕ್ಕಿ

ಸಿಕ್ಕಿದ್ರೆ ಸೀರುಂಡೆ 200ನೇ ಟೆಸ್ಟ್ ನಲ್ಲಿ ಸಚಿನ್ ವಿಕೆಟ್ ಕಿತ್ತವನೇ ಜಾಣ

ಅಪಸ್ವರದ ಹಾಡು

ಸಚಿನ್ ನಿವೃತ್ತಿ ಸಂದರ್ಭದಲ್ಲಿ ಹೀಗೊಂದು ಅಪಸ್ವರದ ಟ್ವೀಟ್

ಪ್ರೊ ಡೀನ್ ಜೋನ್ಸ್

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಹಾಗೂ ಕಾಮೆಂಟರ್ಸ್ ಡೀನ್ ಜೋನ್ಸ್ ಪ್ರಶ್ನೆಗೆ ಉತ್ತರ ಯಾರು ಹೇಳಬಲ್ಲರು

ಸಚಿನ್ ಬಗ್ಗೆ ಮೋದಿ

ಐಪಿಎಲ್ ಸ್ಥಾಪಕ ಲಲಿತ್ ಮೋದಿ ಅವರು ಸಚಿನ್ ಬಗ್ಗೆ ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ

ರಮೇಶ್

ರಮೇಶ್ ಶ್ರೀವತ್ಸ್ ಟ್ಟೀಟ್ ಮಾಡಿ ದೇವರಿಲ್ಲದ ಆಟ ಎಂದಿದ್ದಾರೆ

ಸಚಿನ್ ಮ್ಯಾಜಿಕ್ ಮಿಸ್ ಮಾಡ್ಕೋತೀವಿ

ಕನ್ನಡ ನಟಿ ನಿಧಿ ಸುಬ್ಬಯ್ಯ ಅವರಿಂದ ಸಚಿನ್ ನಿವೃತ್ತಿಯ ಬಗ್ಗೆ ಪ್ರತಿಕ್ರಿಯೆ.

English summary
Sachin Tendulkar has announced his retirement from Test cricket. His statement to the BCCI said, 'I look forward to playing my 200th Test Match on home soil, as I call it a day.' Former cricketers and his fans took to the micro blogging site to pay respect to the 40-year-old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X