Tungabhadra Dam: ಜಮೀರ್ ಅಹ್ಮದ್ ಈ ಕಾರ್ಮಿಕರಿಗೆ 50,000 ಘೋಷಣೆ ಮಾಡಿದ್ದೇಕೆ?

Tungabhadra Dam: ಭಾರೀ ಮಳೆ ಹಿನ್ನೆಲೆ ರಾಜ್ಯದ ಬಹುತೇಕ ಜಲಾಶಯಗಳು ತುಂಬಿವೆ. ಹಾಗೆಯೇ ತುಂಬಿದ್ದ ತುಂಗಭದ್ರಾ ಜಲಾಶಯ ಗೇಟ್‌ ಇತ್ತೀಚೆಗಷ್ಟೇ ಹಾನಿಯಾಗಿದ್ದು, ಇದರಿಂದ ನೀರು ಸುಮ್ಮನ ಪೋಲಾಗುತ್ತಲೇ ಇದೆ. ಇನ್ನು ಸ್ಟಾಪ್‌ಲಾಗ್‌ ಗೇಟ್‌ ಅವಡಿಕೆ ಮಾಡಲಾಗುವ ಸ್ಥಳಕ್ಕೆ ಜಮೀರ್‌ ಅಹ್ಮದ್‌ ಭೇಡಿ ನೀಡಿ ಕಾರ್ಮಿಕರ ಜೊತೆ ಮಾತುಕತೆ ನಡೆಸಿದ್ದು, ವೈಯಕ್ತಕವಾಗಿ ಹಣ ನೀಡುವುದಾಗಿಯೂ ಹೇಳಿದ್ದಾರೆ.

ತುಂಗಭದ್ರಾ ಜಲಾಶಯ ಸ್ಟಾಪ್‌ಲಾಗ್‌ ಗೇಟ್‌ ಅಳವಡಿಕೆ ಮಾಡಲಾಗುವ ಸ್ಥಳಕ್ಕೆ ವಿಜಯನಗರ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಭೇಟಿ ನೀಡಿ ಕಾರ್ಮಿಕೆ ಜೊತೆ ಮಾತನಾಡಿದ್ದಾರೆ. ಅಲ್ಲದೆ, ಈ ವೇಳೆ ಅವರು ಧೈರ್ಯ ಕಳೆದುಕೊಳ್ಳದೇ ಕೆಲಸ ಮಾಡಿ. ಗೇಟ್ ಸಂಪೂರ್ಣವಾಗಿ ಕೂರಿಸಿ ಕಾರ್ಯ ಯಶಸ್ವಿಗೊಳಿಸಿ. ನನ್ನ ಕಡೆಯಿಂದ ವೈಯಕ್ತಿಕವಾಗಿ ಪ್ರತಿ ಕಾರ್ಮಿಕನಿಗೆ 50,000 ರೂಪಾಯಿ ಕೊಡುವುದಾಗಿ ಹೇಳಿದ್ದಾರೆ.

Tungabhadra Dam Why did Minister Zameer Ahmed announce 50 000 to This workers

ಸ್ಟಾಪ್ ಲಾಗ್ ಗೇಟ್ ಕೂರಿಸಲು ಕನ್ನಯ್ಯ ಮತ್ತು ತಂಡದ ಸದಸ್ಯರು ಹರಸಾಹಸ ಪಟ್ಟಿದ್ದು, ಸಚಿವ ಜಮೀರ್ ಅಹ್ಮದ್ 50,000 ರೂಪಾಯಿ ಕೊಡುತ್ತೇನೆ ಎಂದಿದ್ದಕ್ಕೆ ಕಾರ್ಮಿಕರು ಮತ್ತಷ್ಟು ಸಂತಗೊಂಡಿದ್ದರು. ಜಲಾಶಯದ 19ನೇ ಕ್ರಸ್ಟ್‌ ಗೇಟ್ ಹಾನಿಯಾಗಿ 6 ದಿನಗಳು ಕಳೆದಿವೆ. ಆ ಸ್ಥಳದಲ್ಲಿ ತಾತ್ಕಾಲಿಕ ಗೇಟ್ ಕೂರಿಸುವ ಪ್ರಯತ್ನ ವಿಫಲವಾಗಿದೆ. ಗೇಟ್ ಎಲಿಮೆಂಟ್‌ನಲ್ಲಿ ಏರುಪೇರು ಕಂಡ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿತ್ತು.

ಇನ್ನು ಇಂದು (ಆಗಸ್ಟ್‌ 16) ಮತ್ತೆ ಪ್ರಯತ್ನ ಮಾಡಲಾಗುತ್ತದೆ. ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿ ಆದರೆ, 25 ಟಿಎಂಸಿ ನೀರು ಜಲಾಶಯದಿಂದ ಹೊರಹೋಗುವುದನ್ನು ತಪ್ಪಿಸಿದಂತೆ ಆಗುತ್ತದೆ. ಭಾರೀ ಮಳೆಯಿಂದ ತುಂಗಾಭದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದ್ದು, ಕ್ರಸ್ಟ್‌ ಗೇಟ್‌ ಹಾನಿಯಾದ ಬಳಿಕ ನೀರಿನ ಪ್ರಮಾಣ ತುಸು ಕಡಿಮೆಯಾಗಿದೆ ಎಂದು ತಿಳುದಬಂದಿದೆ.

ಜಲಾಶಯದ ನೀರಿನ ಮಟ್ಟ ಎಷ್ಟಿದೆ.?: ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಮಳೆರಾಯನ ಆರ್ಭಟ ಮುಂದುವರೆದ ಹಿನ್ನೆಲೆ ನದಿ, ಹಳ್ಳ-ಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಅಲ್ಲದೆ ಪ್ರಖು ಜಲಾಶಯಗಳು ಮೈದುಂಬಿ ಹರಿಯುತ್ತಿವೆ. ಹಾಗೆಯೇ ಇದೀಗ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆ ಇಲ್ಲದ ಕಾರಣ ಡ್ಯಾಂಗೆ ನೀರು ಹರಿದು ಬರುತ್ತಿಲ್ಲ. ವಾಣಿವಿಲಾಸ ಜಲಾಶಯದ ಪ್ರಸ್ತುತ ನೀರಿನ ಮಟ್ಟ 115.60 ಅಡಿ ತಲುಪಿದೆ. ಜಲಾಶಯ ಕೊಡಿ ಬೀಳಲು ಇನ್ನು 15 ಅಡಿ ನೀರು ಬರಬೇಕಿದೆ. ಪ್ರತಿದಿನ ಭದ್ರಾ ಜಲಾಶಯದಿಂದ ವಿವಿ ಸಾಗರ ಡ್ಯಾಂಗೆ 700 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಡ್ಯಾಂ. ಇನ್ನೂ ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. 1906ರಲ್ಲಿ ಮೈಸೂರು ಒಡೆಯರ ಕಾಲದಲ್ಲಿ ಹಿರಿಯೂರು ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಅನುಕೂಲ ಆಗುವಂತೆ ವಾಣಿವಿಲಾಸಪುರ ಬಳಿ ವಾಣಿ ವಿಲಾಸ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+