Get Updates
Get notified of breaking news, exclusive insights, and must-see stories!

''ಸಾರಿಗೆ ಮುಷ್ಕರ' ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ: ಕಸ ವಿಲೇವಾರಿ ಟೆಂಡರ್‌ನಲ್ಲಿ 21% ಕಮಿಷನ್ ಆರೋಪ''

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಪರ್ ಮುಖ್ಯಮಂತ್ರಿ ಆಗಿದ್ದಾರೆ. ಸರ್ಕಾರ ದಿವಾಳಿಯಾಗಿದ್ದರೂ ಶಾಸಕರ ಫಾರಿನ್ ಟೂರ್ ಮಾಡುತ್ತಿದ್ದಾರೆ. ಸರ್ಕಾರ ಅನಾಥ ಮಕ್ಕಳ ಊಟದ ಕೋಟಿ ಕೋಟಿ ಹಣವನ್ನು ನುಂಗಿದೆ. ಮತ್ತೊಂದೆಡೆ ಸಾರಿಗೆ ನೌಕರರು ಮುಷ್ಕರ ನಡೆಸಲು ತಯಾರಾಗಿದ್ದಾರೆ. ನಾಯಿಗಳ ಕಿತ್ತಾಟ ಎಂಬಂತೆ ಸ್ವಪಕ್ಷದವರೇ ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ಆಡಳಿತ ವಿರುದ್ಧ ಕಿಡಿ ಕಾರಿದ್ದಾರೆ. ಮುಖ್ಯವಾಗಿ ಬೆಂಗಳೂರು ಕಸ ವಿಲೇವಾರಿ ಟೆಂಡರ್ ನೀಡಲು 21% ಕಮಿಷನ್ ಪಡೆಯತ್ತಿದ್ದಾರೆ ಎಂದು ಅವರು ಅರೋಪಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಜೆಟ್‌ನಲ್ಲಿ ಮೀಸಲಾದ ಹಣವನ್ನೇ ಯೋಜನೆಗಳಿಗೆ ನೀಡುತ್ತಿಲ್ಲ. ಈಗ ಹೊಸ ಬಜೆಟ್ ಮಾಡಲು ತಯಾರಿ ನಡೆಸಿದ್ದಾರೆ. ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ನೌಕರರು 38 ತಿಂಗಳ ಹಿಂಬಾಕಿ ನೀಡಿಲ್ಲವೆಂದು ಹೋರಾಟ ಮಾಡುತ್ತಿದ್ದಾರೆ. ಮುಷ್ಕರಕ್ಕೆ ತಯಾರಿ ನಡೆಸಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದೊಂದು ಸಾಕ್ಷಿ. ಇನ್ನೂ ನಾನು ರಾಜ್ಯದ ಸಾರಿಗೆ ಸಚಿವನಾಗಿದ್ದಾಗ ನಷ್ಟವಿತ್ತೋ, ಲಾಭವಿತ್ತೋ ಎಂಬ ಮಾಹಿತಿ ಬಿಡುಗಡೆ ಮಾಡಲಿ ಎಂದು ಅವರು ಸವಾಲು ಹಾಕಿದರು.

Transport Strike

ಶಾಲಾ ಮಕ್ಕಳಿಗೆ ಬಸ್‌ ಸಿಗದೆ ಟಿಪ್ಪರ್‌ನಲ್ಲಿ ಹೋಗುತ್ತಿದ್ದಾರೆ. ಹಣ ಇಲ್ಲವಾದರೆ ಪಾಪರ್‌ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿಕೊಳ್ಳಲಿ. ನೌಕರರನ್ನು ಕೆಲಸದಿಂದ ವಜಾ ಮಾಡಲಾಗುವುದೆಂದು ಎಸ್ಮಾ ಜಾರಿ ಮಾಡಲಾಗಿದೆ. ನೌಕರರು ಇದಕ್ಕೆ ಬೆಲೆ ನೀಡಿಲ್ಲ ಎಂದು ದೂರಿದರು.

ಕಸ ವಿಲೇವಾರಿಯ ಟೆಂಡರ್: 21% ಕಮಿಷನ್, ಆಂಧ್ರ ಮಾಫಿಯಾ

ಉದ್ಯಾನ ನಗರಿ, ಐಟಿ ಬಿಟಿ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಿಂದ ಕಸ ವಿಲೇವಾರಿಯಾಗುತ್ತಿಲ್ಲ. ಲಾರಿಗಳಲ್ಲಿ ಕಸ ತುಂಬಿ ಹೋಗಿದೆ. ಬೆಂಗಳೂರನ್ನು ಸರ್ಕಾರ ಗಾರ್ಬೇಜ್ ಸಿಟಿ ಮಾಡಿದೆ. ಗುತ್ತಿಗೆದಾರರ ಸಂಘ ಎಲ್ಲ ಕಾಮಗಾರಿ ಸ್ಥಗಿತಗೊಳಿಸಲು ಸಿದ್ಧತೆ ಮಾಡಿದೆ. ಆದ್ದರಿಂದ ಕೂಡಲೇ ಹಣ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.

ಗುತ್ತಿಗೆದಾರರ ಸಂಘದವರು ಬಿಲ್‌ ಕೇಳಿದರೆ ನೀಡದೇ ನಾಳೆ ಬಾ ಎಂದು ಸಿಎಂ ಹೇಳುತ್ತಾರೆ. ಸಚಿವರು ದೊಡ್ಡ ಪ್ಯಾಕೇಜ್‌ ಮಾಡಿ ಆಂಧ್ರ ಪ್ರದೇಶದ ಗುತ್ತಿಗೆದಾರರಿಗೆ ನೀಡಿ ಕಮಿಶನ್‌ ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಕಾಮಗಾರಿಗಳನ್ನು ತೆಲಂಗಾಣಕ್ಕೆ ನೀಡಿದ್ದಾರೆ. ಇದರಿಂದಾಗಿ ಸ್ಥಳೀಯ ಗುತ್ತಿಗೆದಾರರು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಾಮಗಾರಿಗಳಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆಯುತ್ತಿದೆ.

ಕಸ ವಿಲೇವಾರಿಯ ಟೆಂಡರ್ ಪಡೆಯಲು 7%, ಬಿಲ್‌ ಪಡೆಯಲು 7%, ಎನ್‌ಒಸಿಗೆ 7% ಕಮಿಶನ್‌ ಕೊಡಬೇಕಿದೆ. ಒಟ್ಟು 21% ಕಮಿಶನ್‌ ನೀಡಿದರೆ ಮಾತ್ರ ಕೆಲಸ ಸಾಧ್ಯವಾಗುತ್ತದೆ. ಬೆಂಗಳೂರಿನ ಕಸದಲ್ಲಿ ಆಂಧ್ರದ ಮಾಫಿಯಾ ಇದೆ ಜೊತೆಗೆ ಕಾಂಗ್ರೆಸ್‌ ಸರ್ಕಾರದ ಮಾಫಿಯಾ ಇದೆ. ನಮಗೆ ಕಸದ ಟೆಂಡರ್‌ ಸಿಕ್ಕಿಲ್ಲ ಎಂದು ಗುತ್ತಿಗೆದಾರ ಸಂಘ ಹೇಳಿದೆ ಎಂದು ಅವರು ವಿವರಿಸಿದರು.

Transport Strike

ನಾಯಕತ್ವ ಬದಲಾವಣೆ: ನಾಯಿಗಳ ಕಿತ್ತಾಟ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕುರ್ಚಿ ಕಚ್ಚಾಟವನ್ನು ನಾಯಿಗಳ ಕಿತ್ತಾಟ ಎಂದು ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ನಿಯತ್ತಿನ ನಾಯಿಗಳು ಎಂದಿದ್ದಾರೆ. ಅಂದಮೇಲೆ ಬೀದಿ ನಾಯಿಗಳು ಯಾರು ಎಂದು ಉತ್ತರ ಕೊಡಬೇಕಿದೆ. ಕಾಂಗ್ರೆಸ್‌ನಲ್ಲಿ ಬೀದಿ ನಾಯಿ ಮತ್ತು ನಿಯತ್ತಿನ ನಾಯಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮಗೆ ಗೊತ್ತಿಲ್ಲ ಎನ್ನುತ್ತಾರೆ ಎಂದು ಕಾಂಗ್ರೆಸ್ ಬೆಳವಣಿಗೆ ಕುರಿತು ಲೇವಡಿ ಮಾಡಿದರು.

ಅನಾಥ ಮಕ್ಕಳ ಕೋಟಿ ಕೋಟಿ ಹಣ ಗುಳಂ

ಕೋವಿಡ್ ಸಮಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ಸಲಹಲು ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಸಹಯೋಗದಲ್ಲಿ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯಡಿ 26,334 ಮಕ್ಕಳನ್ನು ಊಟ ನೀಡಿ ಸಲಹಲಾಗುತ್ತಿತ್ತು. ಪ್ರತಿ ತಿಂಗಳು ರಾಜ್ಯ ಸರ್ಕಾರದಿಂದ ಸಿಗುವ 4,000 ರೂ.ನಿಂದ ಮಕ್ಕಳು ಊಟ ಮಾಡುತ್ತಾರೆ. ಅಂದರೆ ಒಬ್ಬರಿಗೆ 10-15 ರೂ. ಸಿಗುತ್ತದೆ.

ಕೊಪ್ಪಳದಲ್ಲಿ 2,220, ಬಳ್ಳಾರಿಯಲ್ಲಿ 1059, ಧಾರವಾಡದಲ್ಲಿ 2650 ಅನಾಥ ಮಕ್ಕಳಿದ್ದಾರೆ. ಒಂದೆಡೆ ಕಾಂಗ್ರೆಸ್‌ ಶಾಸಕರು ಫಾರಿನ್ ಟ್ರಿಪ್ ಮಾಡುತ್ತಿದ್ದಾರೆ. ಜಾಸ್ತಿಯಾಗಿ ಫಾರಿನ್‌ ಟೂರ್‌ ಮಾಡುತ್ತಿದ್ದಾರೆ. ಆದರೆ ಈ ಬಡ ಮಕ್ಕಳಿಗೆ 7 ತಿಂಗಳಿಂದ ಒಟ್ಟು 75 ಕೋಟಿ ರೂ. ನೀಡಿಲ್ಲ. ಬಡ ಮಕ್ಕಳು ಉಪವಾಸದಿಂದ ಸಾಯುವ ಸ್ಥಿತಿ ಬಂದಿದೆ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ.ಗೆ, ಅನ್ನಭಾಗ್ಯದ 750 ಕೋಟಿ ರೂ.ಗೆ ನಾಮ ಹಾಕಿದ್ದಾರೆ. ಈಗ ಅನಾಥ ಮಕ್ಕಳ ಹಣವನ್ನೂ ನುಂಗಿ ಹಾಕಿದ್ದಾರೆ ಎಂದು ಆರೋಪಿಸಿದರು.

ವಿಧಾನಸೌಧಕ್ಕೆ ಮಾಧ್ಯಮ ನಿರ್ಬಂಧ

ವಿಧಾನಸೌಧಕ್ಕೆ ಮಾಧ್ಯಮ ನಿರ್ಬಂಧದ ಆದೇಶ ಕುರಿತು ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳು ಸಚಿವರ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂದು ವರದಿ ಮಾಡಿದ್ದರಿಂದ ನಿರ್ಬಂಧ ಹೇರಲಾಗಿದೆ. ಸರ್ಕಾರ ಕಳ್ಳತನ ಮಾಡುತ್ತಿದೆ ಎಂದು ಜನರು ಮಾತಾಡುತ್ತಿದ್ದಾರೆ. ಲೂಟಿ ಮಾಡುತ್ತಿರುವುದನ್ನು ಮಾಧ್ಯಮಗಳು ತಡೆಯಲು ಹೋಗಿರುವುದರಿಂದ ಡಿಪಿಎಆರ್‌ ಈ ಆದೇಶ ಹೊರಡಿಸಿದ್ದು, ಅದನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+