• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೂವರು ಸಂಚರಿಸುತ್ತಿದ್ದ ಬೈಕ್ ಗೆ ಝಾಡಿಸಿ ಒದ್ದ ಪೇದೆ: ಹಿಂಬದಿ ಸವಾರ ಸಾವು

|

ಬೆಂಗಳೂರು, ಸೆ.29: ಮೂವರು ಸಂಚರಿಸುತ್ತಿದ್ದ ಬೈಕ್ ಗೆ ಸಂಚಾರಿ ಪೊಲೀಸರು ಕಾಲಿನಿಂದ ಒದ್ದ ಪರಿಣಾಮ ಓರ್ವ ಬೈಕ್ ಸವಾರ ಮೃತಪಟ್ಟಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಟ್ರಾಫಿಕ್ ಪೊಲೀಸರಿಂದ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ: ಪ್ರತಿಭಟನೆ

ನಿಯಮವನ್ನು ಉಲ್ಲಂಘಿಸಿ ಮೂವರು ಒಂದೇ ಬೈಕ್ ನಲ್ಲಿ ತೆರಳುತ್ತಿದ್ದಾರೆ ಎನ್ನುವ ಕೋಪಕ್ಕೆ ಬೈಕ್ ಗೆ ಪೊಲೀಸ್ ಒದ್ದಿದ್ದಾರೆ, ಆಗ ಬೈಕ್ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದು ಆ ದುರ್ಘಟನೆಯಲ್ಲಿ ಹಿಂಬದಿ ಸವಾರ ಮೃತಪಟ್ಟಿದ್ದಾನೆ.

ವ್ಹೀಲಿಂಗ್‌ ವೀರರನ್ನು ಬೆಂಡೆತ್ತಿದ ಬೆಂಗಳೂರು ಟ್ರಾಫಿಕ್‌ ಪೊಲೀಸರು

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಬೈಕ್ ಸವಾರ ಚೇತನ್ (25)ನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೈಕಿನಲ್ಲಿದ್ದ ಮತ್ತೊಬ್ಬ ಯುವಕ ಕಿರಣ್(22) ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿನಯ್(21) ಎಂಬ ಯುವಕ ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ.

ಈ ಸಂಬಂಧ ಅಪಘಾತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿನಯ್, ಟಾಟಾ ಏಸ್ ಚಾಲಕ ಕೃಷ್ಣ ಕುಮಾರ್ ಅವರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ. ಟಾಟಾ ಏಸ್ ನಲ್ಲಿದ್ದ ಟೆಕ್ನಿಶಿಯನ್ ಮಂಜುನಾಥ್ ಅವರನ್ನೇ ದೂರುದಾರನನ್ನಾಗಿ ಮಾಡಿದ್ದಾರೆ.

ಟ್ರಾಫಿಕ್ ಪೊಲೀಸರಿಗೇ ಡೋಂಟ್‌ ಕೇರ್‌ ಅಂತಿವೆ ಪಾಲಿಕೆ, ಜಲಮಂಡಳಿ

ಪೊಲೀಸರು ಬೈಕ್ ಚೇಸ್ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೇರೆಯಾಗಿದೆ. ಆದರೂ ಬಾಣಸವಾಡಿ ಪೊಲೀಸರು ಮಾತ್ರ ನಾವು ಬೈಕ್ ಚೇಸ್ ಮಾಡಿಲ್ಲ. ಯೂ ಟರ್ನ್ ತೆಗೆದುಕೊಳ್ಳುವಾಗ ಅವರೇ ಟಾಟಾ ಏಸ್ ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳುತ್ತಿದ್ದಾರೆ.

English summary
After kicked a bike by Banasawadi traffic police constable, the bike which three were riding was hit another vehicle. Following this, a Pelion of the bike was died in the accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X