7 ದಿನದಲ್ಲಿ 3.63 ಕೋಟಿ ದಂಡ ಸಂಗ್ರಹಿಸಿದ ಬೆಂಗಳೂರು ಪೊಲೀಸರು!
ಬೆಂಗಳೂರು, ಅಕ್ಟೋಬರ್ 27: ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ದಂಡ ಪ್ರಯೋಗವನ್ನು ಪೊಲೀಸರು ಮುಂದುವರೆಸಿದ್ದಾರೆ. 7 ದಿನಗಳ ಅವಧಿಯಲ್ಲಿ ಪೊಲೀಸರು 3.63 ಕೋಟಿ ದಂಡವನ್ನು ಸಂಗ್ರಹ ಮಾಡಿದ್ದಾರೆ.
ಬೆಂಗಳೂರು ಸಂಚಾರಿ ಪೊಲೀಸರು ಅಕ್ಟೋಬರ್ 19 ರಿಂದ 25ರ ತನಕ 3.63 ಕೋಟಿ ದಂಡವನ್ನು ಸಂಗ್ರಹ ಮಾಡಿದ್ದಾರೆ. ಅಕ್ಟೋಬರ್ 11 ರಿಂದ 17ರ ತನಕ 4.44 ಕೋಟಿ ಸಂಗ್ರಹ ಮಾಡಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ಇದುವರೆಗೂ 3 ಲಕ್ಷ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಬೆಂಗಳೂರು; ದಂಡ ಸಂಗ್ರಹಕ್ಕೆ ಮನೆಗೆ ಬರ್ತಾರೆ ಸಂಚಾರಿ ಪೊಲೀಸ್
ಹೆಲ್ಮೆಟ್ ರಹಿತ ಪ್ರಯಾಣದಿಂದಲೇ ಹೆಚ್ಚಿನ ದಂಡ ಸಂಗ್ರಹವಾಗಿದೆ. 7 ದಿನದಲ್ಲಿ 86,380 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇವುಗಳಲ್ಲಿ ಹೆಲ್ಮೆಟ್ ರಹಿತ ಪ್ರಯಾಣವೇ 28,201 ಪ್ರಕರಣಗಳಿವೆ.
ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಲೈಸೆನ್ಸ್ ರದ್ದು; ತಕ್ಷಣದಿಂದ ಜಾರಿ
ಹಿಂಬದಿ ಸವಾರರು ಹೆಲ್ಮೆಟ್ ಧರಿಸದ 17,105 ಪ್ರಕರಣ ದಾಖಲು ಮಾಡಲಾಗಿದೆ. 6.23 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಜನರು ಸಂಚಾರಿ ನಿಯಮಗಳನ್ನು ಮರೆತು ಸಂಚಾರ ನಡೆಸುತ್ತಿದ್ದರು.
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನು 90 ದಿನ ಕಾಯಬೇಕು
ನೋ ಪಾರ್ಕಿಂಗ್‌ನ 3526, ಸಿಗ್ನಲ್ ಜಂಪ್‌ನ 10 ಸಾವಿರ, ಮೊಬೈಲ್ ಬಳಕೆ 2448, ಸೀಟ್ ಬೆಲ್ಟ್ ರಹಿತ 4827, ನೋ ಎಂಟ್ರಿಯ ನಿಯಮ ಉಲ್ಲಂಘನೆ ನಿಯಮ ಉಲ್ಲಂಘಿಸಿದ 3790 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಬೆಂಗಳೂರು ಸಂಚಾರಿ ಪೊಲೀಸರು ಈಗ ದಂಡವನ್ನು ಮಾತ್ರ ಹಾಕುವುದಿಲ್ಲ. ಪದೇ ಪದೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ಮನೆಗೆ ಬಂದು ದಂಡ ವಸೂಲಿ ಮಾಡುತ್ತಾರೆ.
ಕಳೆದ ಬುಧವಾರ 5ಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಟನೆ ಮಾಡಿದ ಜನರ ಮನೆಗೆ ಹೋಗಿ ಪೊಲೀಸರು 49,94,600 ರೂ. ದಂಡವನ್ನು ಸಂಗ್ರಹ ಮಾಡಿದ್ದರು. ಗುರುವಾರ 34,82,400 ರೂ. ದಂಡವನ್ನು ಸಂಗ್ರಹಿಸಿದ್ದರು.
ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡಿದರೆ ದಂಡ ಕಟ್ಟುವ ಜೊತೆ ಲೈಸೆನ್ಸ್ ಅನ್ನು ಸಹ ಮೂರು ತಿಂಗಳ ಅವಧಿಗೆ ರದ್ದು ಮಾಡಲಾಗುತ್ತಿದೆ. ಆದ್ದರಿಂದ, ಜನರು ಸಂಚಾರ ಮಾಡುವಾಗ ನಿಯಮ ಪಾಲನೆ ಮಾಡಿದರೆ ಉತ್ತಮ.