Get Updates
Get notified of breaking news, exclusive insights, and must-see stories!

ಸಂಚಾರ ನಿಯಮ ಉಲ್ಲಂಘನೆಯಲ್ಲಿ ರವಿಕಾಂತೇಗೌಡರ ಅಭಿಮಾನಿ ದಾಖಲೆ ನಿರ್ಮಾಣ

ಬೆಂಗಳೂರು, ಸೆ. 11: ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರ ಅಭಿಮಾನಿಯೊಬ್ಬ ಇದ್ದಾನೆ. ರವಿಕಾಂತೇಗೌಡರ ಹೆಸರನ್ನು ತನ್ನ ಬೈಕ್ ಮೇಲೆ ಹಾಕಿಸಿಕೊಂಡಿದ್ದಾನೆ. ಮಾತ್ರವಲ್ಲ ಅವರ ಡೆಸಿಗ್ನೇಷನ್ ಕೂಡ ಹಾಕಿಸಿಕೊಂಡಿದ್ದಾರೆ. ಇದರಲ್ಲೇನಿದೆ ಅಂತ ಅಚ್ಚರಿಯಾಗಬೇಡಿ. ಬರೋಬ್ಬರಿ ನಲವತ್ತೆರಡು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾನೆ. ಸುಮಾರು 20 ಸಾವಿರ ದಂಡ ಬಾಕಿ ಇಟ್ಟುಕೊಂಡಿದ್ದಾನೆ. ದಂಡ ಕೇಳಿದ್ರೆ ರವಿಕಾಂತೇಗೌಡರ ಹೆಸರು ಹೇಳಿಕೊಂಡು ಎಸ್ಕೇಪ್ ಆಗುತ್ತಾನೆ!

ರವಿಕಾಂತೇಗೌಡರ ಅಭಿಮಾನಿ ಅಂತೆ : ಈ ಪುಣ್ಯಾತ್ಮನ ಹೆಸರು ಗೊತ್ತಿಲ್ಲ. ಆದರೆ ಇರುವ ಆಕ್ವೀವಾ ಬೈಕ್ ಇಟ್ಟುಕೊಂಡಿರುವ ಈತ ಬೆಂಗಳೂರಿನಲ್ಲಿ ಎಲ್ಲಿ ಓಡಾಡಿದ್ರೂ ಹೆಲ್ಮೆಟ್ ಹಾಕಲ್ಲ. ಈತನನ್ನು ಅನೇಕ ಸಲ ಪೊಲೀಸರು ಅಡ್ಡ ಹಾಕಿದ್ದಾರೆ.

ಹೆಲ್ಮೆಟ್ ಹಾಕಿಲ್ಲ ದಂಡ ಕಟ್ಟು ಎಂದು ಕೇಳಿದರೆ, ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರ ಹೆಸರು ಹೇಳುತ್ತಾರೆ. ಜಾಸ್ತಿ ಮಾತನಾಡಿದ್ರೆ ರವಿಕಾಂತೇಗೌಡರ ಹೆಸರು ತನ್ನ ಬೈಕ್ ಮೇಲೆ ಹಾಕಿಸಿಕೊಂಡಿರುವ ಚಿತ್ರ ತೋರಿಸಿ ಎಸ್ಕೇಪ್ ಆಗುತ್ತಾನೆ. ಇನ್ನು ಈತ ಸಂಚಾರ ನಿಯಮ ಉಲ್ಲಂಘನೆ, ಹೆಲ್ಮೆಟ್ ಇಲ್ಲದೇ ಸಂಚಾರ ಮಾಡಿದ ಬಗ್ಗೆ ಅನೇಕ ಪೋಟೋ ತೆಗೆದು ಸಂಚಾರ ಪೊಲೀಸರು ಅಪ್‌ಲೋಡ್ ಮಾಡಿದ್ದಾರೆ. ಆ ಬೈಕ್ ಮಾರಿದರೂ ಅಷ್ಟು ಹಣ ಬರಲ್ಲ, ದಂಡದ ಮೊತ್ತವೇ 20200 ರೂ. ಆಗಿದೆ. ಇನ್ನೂ ದಂಡ ಪಾವತಿ ಮಾಡುವ ಮನಸು ಮಾಡಿಲ್ಲ!

Traffic Joint Police commissioner Ravikanthe gowd Fan violated traffic rules 42 times

ಬೈಕ್ ಯಾರದ್ದು? KA 05 JS 2581 ಆಕ್ಟೀವಾ ಬೈಕ್ ಸವಾರರನ ಅಸಲಿ ಕಥೆಯಿದು. ಬೈಕ್ ಸವಾರನ ಹೆಸರು ಪರಮೇಶ್. ಇಲ್ಲಿಯವರೆಗೂ ಸುಮಾರು 42 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಎಎಸ್ಐ ಇತ್ತೀಚೆಗೆ ನಿಯಮ ಉಲ್ಲಂಘನೆ ಬಗ್ಗೆ ಬೈಕ್ ತಡೆ ಮಾಡಿದಾಗ ರವಿಕಾಂತೇಗೌಡರ ಹೆಸರು ಹೇಳಿದ್ದಾರಂತೆ. ಜಂಟಿ ಪೊಲೀಸ್ ಆಯುಕ್ತರು ಪರಿಚಯ ಇರಬಹುದು ಎಂಬ ನಂಬಿಕೆಯಿಂದ ನಿಯಮ ಉಲ್ಲಂಘನೆ ಮಾಡಿದರೂ ಬೈಕ್ ಸವಾರನನ್ನು ಸಂಚಾರ ಪೊಲೀಸರು ಅನೇಕ ಸಲ ಬಿಟ್ಟು ಕಳಿಸಿದ್ದಾರೆ. ಹೆಲ್ಮೆಟ್ ಹಾಕದೇ ಬೈಕ್ ಚಾಲನೆ, ಸಿಗ್ನಲ್ ಜಂಪ್ ಮಾಡಿರುವ ಪೋಟೋಗಳು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ.

ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರ ಹೆಸರನ್ನು ತನ್ನ ಆಕ್ಟೀವ ಬೈಕ್ ನ ಮೇಲೆ ಅಚ್ಚು ಹಾಕಿಸಿದ್ದಾನೆ. ಅಲ್ಲದೇ ಜಂಟಿ ಪೊಲೀಸ್ ಆಯುಕ್ತರು ಎಂದು ಡಿಸಿಗ್ನೇಷನ್ ಕೂಡ ಹಾಕಿದ್ದಾರೆ.

Traffic Joint Police commissioner Ravikanthe gowd Fan violated traffic rules 42 times

ಒಂದೆರಡು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದರೂ ಪೊಲೀಸರು ಒಂದು ಕೇಸಿನ ದಂಡ ಪಾವತಿಸಿಕೊಂಡು ಬಿಡುವುದು ವಾಡಿಕೆ. ಆದರೆ, ಈ ಪರಮೇಶ್ ಬರೊಬ್ಬರಿ 42 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೂ ಒಂದು ಕೇಸಿನ ದಂಡ ಪಾವತಿ ಮಾಡಿಲ್ಲ. ಈಗಲಾದರೂ ದಂಡ ಕಟ್ಟಿಸಿಕೊಳ್ಳುತ್ತಾರಾ ಕಾದು ನೋಡಬೇಕು.

ಇತ್ತೀಚೆಗೆ ಬೈಕ್ ಸವಾರನೊಬ್ಬ ಬರೋಬ್ಬರಿ 50 ಕ್ಕಿಂತಲೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ. ಸುಮಾರು 20 ಸಾವಿರಕ್ಕೂ ಅಧಿಕ ದಂಡದ ಮೊತ್ತ ಪಾವತಿ ಮಾಡಿದ್ದ.

ಆದರೆ ಪರಮೇಶ್ ಹೆಸರಿನಲ್ಲಿರುವ ಈ ಆಕ್ಟೀವಾ ಬೈಕ್ ಖಾತೆಯಲ್ಲಿ 42 ದಂಡದ ಪ್ರಕರಣ ಬಾಕಿ ಇವೆ. ರವಿಕಾಂತೇಗೌಡರ ಹೆಸರು ಹಾಕಿಕೊಂಡು ಚಾಲನೆ ಮಾಡುತ್ತಿರುವ ಬೈಕ್ ಯಾವತ್ತು ಪೊಲೀಸರ ಕೈಯಲ್ಲಿ ಜಪ್ತಿಯಾಗುತ್ತೋ ಗೊತ್ತಿಲ್ಲ. ಇನ್ನೂ ಕೆಲವು ದಿನ ಹೋದರೆ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಈತ ಮಾಡುವ ದಾಖಲೆ ಸರಿಗಟ್ಟುವರೇ ಇಲ್ಲದಂತಾಗಬಹುದು.

Recommended Video

      ಅಮೆರಿಕ ಧ್ವಜ ಬಳಸಿ ಬೀಳುತ್ತಿದ್ದ ಬೆಕ್ಕನ್ನ ರಕ್ಷಿಸಿದ ಫುಟ್ಬಾಲ್ ವೀಕ್ಷಕರು ! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+