ಬೈಯಪ್ಪನಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದ ನಾಗಲ್ಯಾಂಡ್ ಡಿಫರೆಂಟ್ ಕಳ್ಳ
ಬೆಂಗಳೂರು, ಮಾ. 07: ಸಂಚಾರ ನಿರ್ವಹಣಾ ಕೇಂದ್ರದಲ್ಲಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಕಚೇರಿಯ ಜೆನರೇಟರ್‌ನಲ್ಲಿ ಬ್ಯಾಟರಿ ಕದ್ದಿರುವ ಘಟನೆ ನಡೆದಿದೆ.
ಟಿಎಂಸಿ ಕಚೇರಿಯಲ್ಲಿಟ್ಟಿದ್ದ ಜನರೇಟರ್ ನಲ್ಲಿಟ್ಟಿದ್ದ ಸುಮಾರು 20 ಸಾವಿರ ರೂ. ಮೌಲ್ಯದ ಎರಡು ಬ್ಯಾಟರಿ ಕಳುವು ಆಗಿದೆ. ಫೆ. 21 ರಂದು ರಾತ್ರಿ ಕಳ್ಳನೊಬ್ಬ ಎಂಟ್ರಿ ಕೊಟ್ಟು ಬ್ಯಾಟರಿ ಕದ್ದಿದ್ದಾನೆ. ಘಟನೆ ಸಂಬಂಧ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಲ್ಯಾಪ್‌ಟಾಪ್ ಕಳ್ಳ ಸೆರೆ:
ಅವನು ಏಕಾಂಗಿಯಾಗಿ ಮನೆ ಲಾಕ್ ಮುರಿದು ದೋಚುವ ಕಳ್ಳ. ಚಿನ್ನಾಭರಣ ಕಣ್ಣು ಮುಂದೆ ಕಾಣಿಸಿದರೂ ಮುಟ್ಟಲ್ಲ ! ಆದ್ರೆ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಕಂಡ್ರೆ ಬಿಡಲ್ಲ. ಒಂಟಿ ಮನೆಗಳಲ್ಲಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಕದ್ದು ಎಸ್ಕೇಪ್ ಆಗುತ್ತಿದ್ದ ಚೋರನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನಾಗಲ್ಯಾಂಡ್ ಮೂಲದ ತಾಂಗ್ ಸೈನ್ ಬಂಧಿತ ಆರೋಪಿ. ಈತನಿಂದ ಸುಮಾರು 09 ಲಕ್ಷ ರೂ.ಮೌಲ್ಯದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಯಾರೂ ಇಲ್ಲದ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಾನೆ. ಆದರೆ ಚಿನ್ನಾಭರಣ ಮುಟ್ಟುವುದಿಲ್ಲ. ಕೇವಲ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅಷ್ಟೇ ಕದ್ದು ಎಸ್ಕೇಪ್ ಆಗ್ತಾನೆ. ಈ ಕುರಿತು ಅನೇಕ ದೂರುಗಳು ದಾಖಲಾಗಿದ್ದವು. ಬಯ್ಯಪ್ಪನಹಳ್ಳಿ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಬಂಧಿನಿಂದ ಲಕ್ಷಾಂತರ ಮೌಲ್ಯದ ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯ ಚರಣೆಯನ್ನು ಪೂರ್ವ ವಿಭಾಗದ ಡಿಸಿಪಿ ಭೀಮಾ ಶಂಕರ್ ಗುಳೇದ್ ಶ್ಲಾಘಿಸಿದ್ದಾರೆ.

ಚಿನ್ನಾಭರಣ ಕದ್ದಿದ್ದ ಆರೋಪಿ ಅಂದರ್ :
ಚಿನ್ನದ ಅಂಗಡಿಯಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಸಂಗಮೇಶ್ ಬಂಧಿತ ಆರೋಪಿ. ಫೆ. 12 ರಂದು ಜಯನಗರ ಬಳಿಯಿರುವ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಮಾಲೀಕ ಇಲ್ಲದ ವೇಳೆ ಎರಡು ಲಕ್ಷ ರೂ. ಮೌಲ್ಯದ ಆಭರಣ ಕದ್ದು ಎಸ್ಕೇಪ್ ಆಗಿದ್ದ. ಈ ಕುರಿತು ಮಾಲೀಕ ಅವಿನಾಶ್ ಜಯನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಜಯನಗರ ಪೊಲೀಸರು ಆರೋಪಿ ಸಂಗಮೇಶ್ ನನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.












Click it and Unblock the Notifications