• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro: 2023ಕ್ಕೆ ಸಂಚಾರ ಸಂಪರ್ಕ ಇನ್ನೂ ಸರಳ, ಈ ಮೆಟ್ರೋ ವಿಸ್ತರಣೆ ಮಾರ್ಗಗಳು ಪೂರ್ಣ

|
Google Oneindia Kannada News

ಬೆಂಗಳೂರು, ನವೆಂಬರ್ 06: ಬೆಂಗಳೂರಿನಲ್ಲಿ ಮುಂದಿನ ವರ್ಷ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ (ಬಿಎಂಆರ್‌ಸಿಎಲ್)ನ ವಿಸ್ತರಣೆಗೊಂಡ ಮೂರು ಮೆಟ್ರೋ ಮಾರ್ಗಗಳಲ್ಲಿ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಲಕ್ಷಾಂತರ ಜನರು ಈ ಮೆಟ್ರೋ ಸಾರಿಗೆ ಪ್ರಯೋಜನ ಪಡೆಯಲಿದ್ದಾರೆ. ಹೀಗಾಗಿ 2023ನೇ ವರ್ಷ ಸಿಲಿಕಾನ್ ಸಿಟಿ, ಉದ್ಯಾನ ನಗರಿಗೆ ಸಾರಿಗೆ ಸಂಪರ್ಕ ವಿಚಾರದಲ್ಲಿ ಮಹತ್ವದ ವರ್ಷವಾಗಲಿದೆ.

ನಮ್ಮ ಮೆಟ್ರೋದ ವೈಟ್‌ಫೀಲ್ಡ್‌- ಬೈಯಪ್ಪನಹಳ್ಳಿವರೆಗಿನ ವಿಸ್ತರಿತ ಮೆಟ್ರೋ ಮಾರ್ಗ 2023ರ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭಕ್ಕೆ ವಾಣಿಜ್ಯ ಕಾರ್ಯಾಚರಣೆ ಮಾಡಲಿದೆ. ಇದು 15.2 ಕಿಲೋ ಮೀಟರ್ ಈ ಮಾರ್ಗದಲ್ಲಿ ಈಗಾಗಲೇ ಪ್ರಾಯೋಗಿಕ ಸಂಚಾರ ಪರೀಕ್ಷೆ ಪೂರ್ಣಗೊಂಡಿವೆ.

ಒಂದು ಮೆಟ್ರೋ ಕ್ಯೂಆರ್‌ ಕೋಡ್ ಬಳಸಿ ಆರು ಮಂದಿ ಪ್ರಯಾಣಿಸಿ ಒಂದು ಮೆಟ್ರೋ ಕ್ಯೂಆರ್‌ ಕೋಡ್ ಬಳಸಿ ಆರು ಮಂದಿ ಪ್ರಯಾಣಿಸಿ

ಐಟಿ ಹಬ್ ಅನ್ನು ನಗರದ ಪೂರ್ವ ಭಾಗಗಳಿಗೆ ಸಂಪರ್ಕಿಸುವ ಈ ಪ್ರಮುಖ ಕಾರಿಡಾರ್‌ನಲ್ಲಿ 13 ನಿಲ್ದಾಣಗಳನ್ನು ಹೊಂದಿದೆ. ನೇರಳೆ (ಪರ್ಪಲ್) ರೇಖೆಯ ಈ ಮಾರ್ಗದಿಂದ ಸುಮಾರು 2.5 ಲಕ್ಷದಿಂದ 3 ಲಕ್ಷದವರೆಗೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಬಿಐಇಸಿ ಮೆಟ್ರೋ ಮಾರ್ಗ 2023ರಲ್ಲಿ ಪೂರ್ಣ

ಬಿಐಇಸಿ ಮೆಟ್ರೋ ಮಾರ್ಗ 2023ರಲ್ಲಿ ಪೂರ್ಣ

ನಾಗಸಂದ್ರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ) ವರೆಗೆ ಹಸಿರು ಮಾರ್ಗ ವಿಸ್ತರಣೆ ಆಗಿದೆ. ಅದರ ಕಾಮಗಾರಿಯೂ ಮುಂದಿನ ವರ್ಷ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಾಮಗಾರಿಯು ಹೆಚ್ಚಿನ ವೇಗದಲ್ಲಿ ಸಾಗುತ್ತಿದೆ. ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. 5.6 ಕಿ.ಮೀ ಉದ್ದದ ಈ ಮಾರ್ಗವು ಬಿಐಇಸಿ ಜೊತೆಗೆ ಮಂಜುನಾಥ್ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರದಲ್ಲಿ ನಿಲ್ದಾಣಗಳನ್ನು ಹೊಂದಿದೆ. ಭೂಸ್ವಾಧೀನ ಅಡೆತಡೆಗಳಿಂದಾಗಿ ಯೋಜನೆಗೆ ಸಾಕಷ್ಟು ವಿಳಂಬ ಆಗಿತ್ತು.

ಜೂನ್‌ಗೆ ಹಳದಿ ರೇಖೆ ಮೆಟ್ರೋ ಮಾರ್ಗ ಆರಂಭ

ಜೂನ್‌ಗೆ ಹಳದಿ ರೇಖೆ ಮೆಟ್ರೋ ಮಾರ್ಗ ಆರಂಭ

ಬೊಮ್ಮಸಂದ್ರ-ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ ಹಳದಿ ರೇಖೆ 19.1 ಕಿಲೋ ಮೀಟರ್ ಉದ್ದವಿದೆ. ಇದು ಮುಂದಿನ ಜೋನ್‌ ವೇಳೆಗೆ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಈ ಮೆಟ್ರೋ ವಿಸ್ತರಣೆಯಲ್ಲಿ ಆರ್‌ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್‌ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಹೊಸರಸ್ತೆ, ಬೆರತನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಹುಸೂರು ರಸ್ತೆ, ಹೆಬ್ಬಗೋಡಿ ನಿಲ್ದಾಣಗಳು ಬರಲಿವೆ.

2025ಕ್ಕೆ ಮೆಟ್ರೋ ನೀಲಿ ರೇಖೆ ಪೂರ್ಣ ಸಾಧ್ಯತೆ

2025ಕ್ಕೆ ಮೆಟ್ರೋ ನೀಲಿ ರೇಖೆ ಪೂರ್ಣ ಸಾಧ್ಯತೆ

ಇನ್ನು ಬೆಂಗಳೂರು ನಗರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ವರೆಗಿನ 37 ಕಿಮೀ ಉದ್ದದ ನೀಲಿ ರೇಖೆಯು ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ. ಈ ಮಾರ್ಗ 2025ರ ವೇಳೆಗೆ ಪೂರ್ಣಗೊಳ್ಳಲಿದೆ. ಮೆಟ್ರೋ ಹಂತ 2ಬಿ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದು, ಇದರ ವ್ಯಾಪ್ತಿಯಗೆ ಒಟ್ಟು 19 ನಿಲ್ದಾಣಗಳು ಬರುತ್ತವೆ.

ಎಲೆಕ್ಟ್ರಾನಿಕ್ಸ್ ಸಿಟಿ ಕಾರಿಡಾರ್ ಯೋಜನೆಯನ ಉದ್ಘಾಟನೆಯನ್ನು 2023ರ ಜೂನ್ ನಲ್ಲಿ ನಿಗದಿಪಡಿಸಲಾಗಿದೆ. ಶೇ.95 ಕ್ಕೂ ಹೆಚ್ಚು ಕೆಲಸ ಪೂರ್ಣಗೊಂಡಿದೆ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (BMRCL) ಅಧಿಕಾರಿಗಳು ಗಡುವಿಗೂ ಮೊದಲು ಕಾರ್ಯಾಚರಣೆ ನಡೆಸಲು ಯೋಜಿಸಿದೆ.

ಮೆಟ್ರೋ 3ನೇ ಹಂತಕ್ಕೆ ಕೇಂದ್ರದ ಒಪ್ಪಿಗೆ ಬಾಕಿ

ಮೆಟ್ರೋ 3ನೇ ಹಂತಕ್ಕೆ ಕೇಂದ್ರದ ಒಪ್ಪಿಗೆ ಬಾಕಿ

ಇತ್ತೀಚೆಗಷ್ಟೇ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 16,328 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹಂತ-3 ಯೋಜನೆಗೆ ಅನುಮೋದನೆ ನೀಡಿದ್ದಾರೆ. ಇನ್ನೇನು ಈ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದು ಮಾತ್ರ ಬಾಕಿ ಇದೆ.

ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, 2025ರ ಜೂನ್ ತಿಂಗಳ ಹೊತ್ತಿಗೆ ಬೆಂಗಳೂರಿನಲ್ಲಿ ಒಟ್ಟು 175 ಕಿ.ಮೀ. ಮೆಟ್ರೋ ವಿಸ್ತರಣೆಯಲ್ಲಿ ರೈಲು ಕಾರ್ಯಾರಂಭಗೊಳ್ಳಲಿವೆ. ಜೊತೆಗೆ 2041ರ ವೇಳೆಗೆ ನಗರದಲ್ಲಿ ಒಟ್ಟು 314 ಕಿ.ಮೀ. ಮೆಟ್ರೋ ರೈಲು ಸಂಪರ್ಕವನ್ನು ಸಾಧ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

English summary
Namma Metro: Traffic connectivity in Bengaluru is still simple Metro extension lines are completed 2023 year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X