ಬೆಂಗಳೂರು: ಕಂಟೇನ್ಮೆಂಟ್ ಜೋನ್ ಮತ್ತೆ ಮತ್ತೆ ಏರಿಕೆ, ಎಸ್ ಪಿ ರೋಡ್ ಸೀಲ್ಡ್ ಡೌನ್
ಬೆಂಗಳೂರು, ಜೂನ್ 3: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ - 19 ಸೋಂಕು ಪ್ರಕರಣ ಏರುತ್ತಲೇ ಇದ್ದು, ಕಂಟೇನ್ಮೆಂಟ್ ಜೋನ್ ಗಳ ಸಂಖ್ಯೆ 32 ರಿಂದ 39ಕ್ಕೆ ಏರಿಕೆಯಾಗಿದೆ.
ಹೊರ ರಾಜ್ಯಗಳಿಂದ ಬರುವವರ ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಕಳುಹಿಸುತ್ತಿರುವ ಘಟನೆಯೂ ವರದಿಯಾಗುತ್ತಿದೆ. ಹೀಗಾಗಿ ಮನೆಗೆ ತೆರಳಿದ ಮೇಲೆ ಸೋಂಕು ಪತ್ತೆಯಾಗಿ ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತನೆಯಾಗುತ್ತಿದೆ.
ಇವೆಲ್ಲದರ ನಡುವೆ ಜೂನ್ ಎಂಟರಿಂದ ನಗರದ ಹೃದಯ ಭಾಗದಲ್ಲಿರುವ ಕೃಷ್ಣರಾಜೇಂದ್ರ ಮತ್ತು ರಸೆಲ್ ಮಾರುಕಟ್ಟೆಯನ್ನು ತೆರೆಯಲು ಬಿಬಿಎಂಪಿ ನಿರ್ಧರಿಸಿದೆ.
ಪ್ರಮುಖವಾಗಿ ಶಿವಾಜಿನಗರ ಮತ್ತು ಪಾದರಾಯನಪುರದಲ್ಲಿ ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ, ಪರಿಸ್ಥಿತಿಯಲ್ಲಿ ಅಷ್ಟೇನೂ ಸುಧಾರಣೆ ಕಂಡು ಬರುತ್ತಿಲ್ಲ. ನಗರದ 39 ಕಂಟೇನ್ಮೆಂಟ್ ಜೋನ್ ಗಳ ಪಟ್ಟಿ, ಎಸ್ ಪಿ ರಸ್ತೆ, ಸೀಲ್ ಡೌನ್..

ಎಸ್ ಪಿ ರೋಡ್ ಸೀಲ್ಡ್ ಡೌನ್
ಧರ್ಮರಾಯಸ್ವಾಮಿ ದೇವಾಲಯ ವಾರ್ಡ್ ವ್ಯಾಪ್ತಿಗೆ ಬರುವ ಎಸ್ ಪಿ ರಸ್ತೆ ಸದಾ ಜನಜಂಗುಳಿಯಿಂದ ಕೂಡಿರುವ ಪ್ರದೇಶ. ಇಲ್ಲಿ ವ್ಯಾಪಾರ ಯಥಾಸ್ಥಿತಿಗೆ ಬರುತ್ತಿದೆ. ಆದರೆ, ಇಲ್ಲಿನ ಅಪಾರ್ಟ್ಮೆಂಟ್ ನಿವಾಸಿಯೊಬ್ಬರಿಗೆ ಸೋಂಕು ತಗಲಿರುವುದರಿಂದ ಇಡೀ ಎಸ್ ಪಿ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಬೆಂಗಳೂರಿನ ಕಂಟೇನ್ಮೆಂಟ್ ಜೋನ್ ಗಳು ಹೀಗಿವೆ
ಬೆಳ್ಳಂದೂರು, ಸಿಂಗಸಂದ್ರ, ಪಾದರಾಯನಪುರ, ಬೊಮ್ಮನಹಳ್ಳಿ, ಹೊಂಗಸಂದ್ರ, ಬೇಗೂರು, ಶಿವಾಜಿನಗರ, ಬಿಟಿಎಂ ಲೇಔಟ್, ಮಲ್ಲೇಶ್ವರ, ಎಚ್ ಬಿ ಆರ್ ಲೇಔಟ್, ಹೇರೋಹಳ್ಳಿ, ಮಂಗಮ್ಮನಪಾಳ್ಯ, ಹೂಡಿ, ನಾಗವಾರ, ಜ್ಞಾನಭಾರತಿ ನಗರ.

ಬಿಬಿಎಂಪಿ
ಎಸ್ ಕೆ ಗಾರ್ಡನ್(ಡಿ.ಜೆ ಹಳ್ಳಿ), ಲಕ್ಕಸಂದ್ರ, ಥಣಿಸಂದ್ರ, ಅಗರ, ಪುಟ್ಟೇನಹಳ್ಳಿ, ಮಾರಪ್ಪನಪಾಳ್ಯ, ಹಗದೂರು, ವರ್ತೂರು, ರಾಮಮೂರ್ತಿ ನಗರ, ಅಗ್ರಹಾರ ದಾಸರಹಳ್ಳಿ, ಹೊನ್ನಾರುಪೇಟೆ, ಮಾರತ್ ಹಳ್ಳಿ,ಸಿದ್ದಾಪುರ, ಹೊಸ ಹಳ್ಳಿ.

ಕಾಡುಗೋಡಿ, ಚೊಕ್ಕಸಂದ್ರ
ಎಚ್. ಎಸ್ ಆರ್ ಲೇ ಔಟ್, ಕಾಡುಗೋಡಿ, ಚೊಕ್ಕಸಂದ್ರ, ಅಗ್ರಹಾರ, ಜಯಮಹಲ್, ಜೆ ಜೆ ನಗರ, ಚಲವಾದಿ ಪಾಳ್ಯ, ಆಜಾದ್ ನಗರ, ನಾಯಿಂಡಹಳ್ಳಿ, ಕೆ. ಆರ್ ಮಾರುಕಟ್ಟೆ.












Click it and Unblock the Notifications