Toll Fee: ಬೆಂಗಳೂರು ನೈಸ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ, ಹೈವೇ ಸವಾರರೇ ಗಮನಿಸಿ..
ಬೆಂಗಳೂರು, ಜುಲೈ 03: ಬೆಂಗಳೂರು ನೈಸ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ್ ಪರಿಷ್ಕರಣೆ ಮಾಡಲಾಗಿದೆ. ಇದರಿಂದ ವಾಹನ ಸವಾರರು ಹೆಚ್ಚಿನ ಶುಲ್ಕ ಭರಿಸಬೇಕು ಎಂದು ಹೇಳಲಾಗಿತ್ತು. ಈ ಪೈಕಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಂದಿನಂತೆ ಪ್ರವೇಶ ಟೋಲ್ ಶುಲ್ಕ ಇದೆ.
ಜುಲೈ 1ರಿಂದ ಸಾರಿಗೆ ವ್ಯಾಪ್ತಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ರೈಲ್ವೆ ಪ್ರಯಾಣ ಟಿಕೆಟ್ ದರ ಹೆಚ್ಚಳ ಇತರ ದರ ನಿಯಮಗಳು ಜಾರಿಗೆ ಬಂದಿವೆ. ಅದರಲ್ಲಿ ಕೆಲವು ರಸ್ತೆ ಟೋಲ್ ಶುಲ್ಕ ಏರಿಕೆ ಆಗಿದೆ. ಅದರಲ್ಲಿ ಬೆಂಗಳೂರು NICE (ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್) ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಮತ್ತು ಅತ್ತಿಬೆಲೆ ರಸ್ತೆ ಮೂಲಕ ಸಾಗುವ ವಾಹನ ಸವಾರರು ಹೆಚ್ಚಿನ ಟೋಲ್ ಶುಲ್ಕ ಪಾವತಿಸಬೇಕಿದೆ.

ಟೋಲ್ ಶುಲ್ಕದಲ್ಲಿ ಬದಲಾವಣೆ ಆಗಿಲ್ಲ..!
ಇದರದಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಮೇಲೆ ಓಡಾಡುವ ಬೈಕ್ ಸವಾರರಿಗೆ ಟೋಲ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಂದಿನಂತೆ ಅವರು ಒಂದು ಬದಿಯ ಪ್ರವೇಶಕ್ಕೆ 25 ರೂಪಾಯಿ ಹಾಗೂ ಎರಡು ಕಡೆಗಿನ ಸಂಚಾರಕ್ಕೆ ಟ್ರಿಪ್‌ಗಳಿಗೆ 40 ರೂಪಾಯಿ ನೀಡಬೇಕು. ಕಾರಿಗೆ ಮಾತ್ರ ಟೋಲ್ ಶುಲ್ಕ 5 ರೂಪಾಯಿ ಏರಿಕೆ ಮಾಡಲಾಗಿದೆ. ಇಲ್ಲಿ ಜೀಪ್, ಕಾರುಗಳಿಗೆ ಒಂದು ಬದಿ ಸಂಚಾರಕ್ಕೆ 65 ರೂಪಾಯಿ ಇದ್ದರೆ, ಎರಡು ಬದಿಯ ಸಂಚಾರಕ್ಕೆ 95 ರೂಪಾಯಿ ನೀಡಬೇಕು. ಇನ್ನು ಮಾಸಿಕ ಪಾಸ್ ಶುಲ್ಕವು 1,885 ರೂ.ಗೆ ಹೆಚ್ಚಳವಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಮುಂದೆ ಸಾಗಿದ ನಂತರ ಸಿಗುವ ಅತ್ತಿಬೆಲೆ ರಸ್ತೆ ಬಳಸುವ ನಾಲ್ಕು ಚಕ್ರದ ಕಾರು, ಜೀಪ್‌ಗಳು ಹಾಗೂ ಇತರ ವ್ಯಾನಗಳಿಗೆ ಒಂದು ಬದಿ ಓಡಾಟಕ್ಕೆ 40 ರೂ., ಎರಡು ಕಡೆಗಿನ ಸಂಚಾರಕ್ಕೆ 55 ರೂಪಾಯಿ ವಸೂಲಿ ಮಾಡಲಾಗುತ್ತದೆ. ಮಾಸಿಕ ಬೇಕಾದರೆ ಸದ್ಯ 1,130 ರೂಪಾಯಿ ನೀಡಬೇಕು ಎಂದು ಟೋಲ್ ನಿರ್ವಃಹಣಾ ಸಂಸ್ಥೆ ಮಾಹಿತಿ ನೀಡಿದೆ.
ನೈಸ್ ರಸ್ತೆ ಟೋಲ್ ಶುಲ್ಕ ರಸ್ತೆ ಎಷ್ಟಿದೆ?
ಇನ್ನೂ ಬೆಂಗಳೂರಿನ NICE ರಸ್ತೆ ಮೂಲಕ ನಿತ್ಯ ಸಂಚರಿಸುವ ಬೈಕ್ ಸವಾರರಿಗೆ ಪ್ರಯಾಣದ ದೂರು ಆಧರಿಸಿ 5 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದೇ ರಸ್ತೆಯ ಕೆಲವು ಭಾಗಗಳಲ್ಲಿ ಟೋಲ್ ಶುಲ್ಕದಲ್ಲಿ ಬದಲಾವಣೆ ಆಗಿಲ್ಲ. ಕಡಿಮೆ ದೂರದ ಪ್ರಯಾಣಕ್ಕೆ ಹಳೇಯ ಶುಲ್ಕವೇ ಮುಂದುವರಿದಿದೆ.
ಸಗಟು ಬೆಲೆ ಸೂಚ್ಯಂಕಕ್ಕೆ ತಕ್ಕಂತೆ ಟೋಲ್ ಶುಲ್ಕ ದರ ಪರಿಷ್ಕರಣೆ ಮಾಡಲಾಗುತ್ತದೆ. ಟೋಲ್ ಪ್ಲಾಜಾ ಯೋಜನೆ ವೆಚ್ಚ ಹಾಗೂ ಸಂಗ್ರಹಿಸಿದ ಟೋಲ್ ಶುಲ್ಕಪ್ರದರ್ಶಿಸಬೇಕು ಎಂಬ ನಿಯಮವಿದ್ದರೂ ಈವರೆಗೆ ಯಾವುದೇ ಪ್ರದರ್ಶನ, ಅಂಕಿಸಂಖ್ಯೆ ವಿವರ ಪ್ರದರ್ಶನವಾಗಿಲ್ಲ. ಇಂತಹ ಹಗಲು ದರೋಡೆ ಬಗ್ಗೆ ಸರ್ಕಾರ, ಅಧಿಕಾರಿಗಳು, ತಜ್ಞರು ಎಚ್ಚೆತ್ತುಕೊಳ್ಳಬೇಕು.












Click it and Unblock the Notifications