ಈ ವಿಚಾರಕ್ಕೆ ಮುನ್ನಲೆಗೆ ಬಂದ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ

Mangaluru-Kasaragod National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿವೆ. ಈ ನಡುವೆಯೇ ಕೆಲ ಹೆದ್ದಾರಿಗಳು ಟೋಲ್‌ ಶುಲ್ಕ ವಿಚಾರವಾಗಿ ಸುದ್ದಿಯಲ್ಲಿರುತ್ತವೆ. ಹಾಗೆಯೇ ಇದೀಗ ಮಂಗಳೂರು-ಕಾಸರಗೋಡು NH ಮುನ್ನಲೆಗೆ ಬಂದಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಜ್ಯದಲ್ಲಿ ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಟೋಲ್‌ ಕೂಡ ಸಂಗ್ರಹ ಮಾಡಲಾಗುತ್ತಿದೆ. ಇನ್ನೂ ಇದು ಉದ್ಘಾಟನೆಯಾದ ಆರಂಭದಿಂದಲೂ ಟೋಲ್‌ ವಿಚಾರಕ್ಕೆ ವಾಹನ ಸವಾರರು ಹಾಗೂ ಅಲ್ಲಿನ ಸಿಬ್ಬಂದಿ ನಡುವೆ ಮಾರಾಮಾರಿ ಘಟನೆಗಳು ನಡೆದಿವೆ. ಅಲ್ಲದೆ, ಇದೀಗ ಸುರಕ್ಷತೆಯಿಲ್ಲ ಎಂಬ ವಿಚಾರಕ್ಕೂ ಆಗಾಗ ಈ ಎಕ್ಸ್‌ಪ್ರೆಸ್‌ ವೇ ಸುದ್ದಿಯಾಗುತ್ತಲಿದೆ.

Toll Collection at Kumbla Arikkadi Plaza on Mangaluru Kasaragod Highway Temporarily Suspended

ಅಲ್ಲದೆ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕರ್ನಾಟಕ ಭಾಗದಲ್ಲಿ ಕಾಮಗಾರಿ ಮುಕ್ತಾಯವಾಗಿದ್ದು, ವಾಹನ ಸಂಚಾರಕ್ಕೂ ಅವಕಾಶ ಕಲ್ಪಿಸಿಕೊಡಲಾಗಿದೆ. ಈಗಾಗಲೇ ಟೋಲ್‌ ಶುಲ್ಕವನ್ನು ಕೂಡ ರಿವೀಲ್ ಮಾಡಲಾಗಿದೆ. ಈ ಎಕ್ಸ್‌ಪ್ರೆಸ್‌ ವೇ ಇನ್ನೂ ಉದ್ಘಾಟನೆ ಆಗಿಲ್ಲ. ಇದಕ್ಕೂ ಕಾರಣ ಇದೆ. ಕರ್ನಾಟಕ ಭಾಗದಲ್ಲಿ ಮಾತ್ರ ಮುಕ್ತಾಯವಾಗಿದೆ. ಆದರೆ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಕಾಮಗಾರಿ ಬಾಕಿ ಉಳಿದ ಕಾರಣ ಉದ್ಘಾಟನೆ ದಿನಾಂಕ ಮುಂದೂಡಿಕೆ ಆಗುತ್ತಲಿದ್ದು, ಮುಂದಿನ ವರ್ಷದ ಮಧ್ಯದಲ್ಲಿ ಲೋಕಾರ್ಪಣೆ ಆಗಲಿದೆ ಎಂದು ಎನ್‌ಎಚ್‌ಎಐ ತಿಳಿಸಿದೆ.

ಅದರಲ್ಲೂ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆಯಾದ ಆರಂಭದಿಂದಲೂ ಟೋಲ್‌ ವಿಚಾರಕ್ಕೆ ಆಗಾಗ ಮುನ್ನಲೆಗೆ ಬರುತ್ತಿತ್ತು. ಇದೇ ವಿಚಾರವಾಗಿ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವೆ ಮಾರಾಮಾರಿ ನಡೆದ ಉದಾಹರಣೆಗಳಿವೆ. ಇದೀಗ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಸಹ ಮುನ್ನಲೆಗೆ ಬಂದಿದೆ. ಕಾರಣ ಏನು ಪ್ರಶ್ನಗೆ ಉತ್ತರ ಇಲ್ಲಿದೆ ನೋಡಿ.

ಮಂಗಳೂರು - ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಮಾರ್ಗದ ಕುಂಬಳೆಯ ಆರಿಕ್ಕಾಡಿ ಟೋಲ್ ಪ್ಲಾಝಾದಲ್ಲಿ ಶುಲ್ಕ ಸಂಗ್ರಹ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಹೈಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಕೆ.ಇಂಪಾಶೇಖರ್ ಮಾಹಿತಿ ನೀಡಿದ್ದಾರೆ.

ಪ್ರತಿಭಟನೆಗಳ ಹಿನ್ನೆಲೆ ಬುಧವಾರದಿಂದ ಆರಂಭ ಆಗಬೇಕಿದ್ದ ಟೋಲ್ ಶುಲ್ಕ ವಸೂಲಿಯನ್ನ ತಾತ್ಕಾಲಿಕವಾಗಿ ನಿಲ್ಲಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದ್ದಾರೆ. ಟೋಲ್ ಗೇಟ್ ವಿರುದ್ಧ ಹೋರಾಟ ಸಮಿತಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ನವೆಂಬರ್ 14ರಂದು ನಡೆಯಲಿದೆ. ಆದ್ದರಿಂದ ಅಂತಿಮ ತೀರ್ಪು ಬರುವವರೆಗೆ ಶುಲ್ಕ ವಸೂಲು ಮಾಡಬಾರದೆಂದು ಸೂಚನೆ ನೀಡಲಾಗಿದೆ ಎಂದು ಶಾಸಕರು ಹೇಳಿದರು.

ಶುಲ್ಕ ವಸೂಲು ಕ್ರಮದ ವಿರುದ್ಧ ಸ್ಥಳೀಯರು ಕಳೆದ ಕೆಲ ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರು. ಮಂಗಳವಾರ ಸಂಜೆ ಹೋರಾಟ ಸಮಿತಿ ತುರ್ತು ಸಭೆ ಸೇರಿ ಮುಂದಿನ ಹೋರಾಟದ ತಂತ್ರ ರೂಪಿಸಿತ್ತು. ಈ ಬೆಳವಣಿಗೆಯ ಹಿನ್ನೆಲೆ ಹೈಕೋರ್ಟ್ ತೀರ್ಪು ಬರುವವರೆಗೆ ಟೋಲ್ ಸಂಗ್ರಹವನ್ನು ಮುಂದೂಡಿಕೆ ಮಾಡಲು ಜಿಲ್ಲಾಡಳಿತ ತೀರ್ಮಾನ ಮಾಡಿದೆ. ಬುಧವಾರ ಬೆಳಗ್ಗೆ 8 ಗಂಟೆ ಬಳಿಕ ಟೋಲ್ ದರ ಸಂಗ್ರಹ ಮಾಡಲಾಗುವುದು ಎಂದು ಈ ಹಿಂದೆ ಮಾಹಿತಿ ನೀಡಲಾಗಿತ್ತು. ಆದರೆ, ಇದೀಗ ಕೋರ್ಟ್‌ ತೀರ್ಪಿಗಾಗಿ ಕಾಯಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+