ಟ್ರಾಫಿಕ್ ದಂಡದಲ್ಲಿ ಶೇ.50 ರಿಯಾಯಿತಿಗೆ ಇಂದು ಕೊನೆಯ ದಿನ: ಇದುವರೆಗೂ ಸಂಗ್ರಹವಾದ ಹಣವೆಷ್ಟು ಗೊತ್ತಾ
ಬೆಂಗಳೂರು, ಸೆಪ್ಟೆಂಬರ್ 9: ಕರ್ನಾಟಕ ಸರ್ಕಾರವು ಸಂಚಾರ ನಿಯಮ ಉಲ್ಲಂಘಿಸಿದವರಿಗೆ ವಿಧಿಸುವ ದಂಡದ ಮೇಲೆ 50% ರಿಯಾಯಿತಿಯನ್ನು ಘೋಷಿಸಿದ ನಂತರ ಕಳೆದ ಎರಡು ತಿಂಗಳಲ್ಲಿ ನಗರ ಸಂಚಾರ ಪೊಲೀಸರು 8 ಕೋಟಿ ರೂಪಾಯಿ ದಂಡದ ಮೊತ್ತವನ್ನು ಸಂಗ್ರಹಿಸಿದ್ದಾರೆ.
ಫೆಬ್ರವರಿ 11 ಅಥವಾ ಅದಕ್ಕಿಂತ ಮೊದಲು ವರದಿಯಾದ ಪ್ರಕರಣಗಳಿಗೆ ಜುಲೈನಲ್ಲಿ ಮೂರನೇ ಬಾರಿಗೆ ಟ್ರಾಫಿಕ್ ದಂಡದ ಮೇಲೆ 50% ರಿಯಾಯಿತಿಯನ್ನು ಸರ್ಕಾರ ಘೋಷಿಸಿತು. ಸಂಚಾರ ಉಲ್ಲಂಘನೆ ಶುಲ್ಕದ ಮೇಲಿನ ರಿಯಾಯಿತಿಯನ್ನು ಪಡೆಯಲು ಶನಿವಾರ ಕೊನೆಯ ದಿನವಾಗಿದೆ.

ಸಂಚಾರ ಪೊಲೀಸರು ಕಳೆದ 64 ದಿನಗಳಲ್ಲಿ 2,53,519 ಪ್ರಕರಣಗಳಿಂದ 8,07,73,190 ರೂ. ಸಂಚಾರ ವಿಭಾಗದ ಅಂಕಿ ಅಂಶಗಳ ಪ್ರಕಾರ ಜುಲೈನಲ್ಲಿ ರೂ 3.8 ಕೋಟಿ ಮತ್ತು ಆಗಸ್ಟ್‌ನಲ್ಲಿ ರೂ 2.8 ಕೋಟಿ ದಂಡವನ್ನು ಸಂಗ್ರಹಿಸಲಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಾರಿಗೆ ಇಲಾಖೆಯು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಮೊದಲೆರಡು ಬಾರಿ ಘೋಷಿಸಿದಾಗ ಭಾರೀ ಪ್ರತಿಕ್ರಿಯೆಯನ್ನು ಕಂಡು ಬಂದಿತು ನಂತರ ಮೂರನೇ ಬಾರಿಗೆ ಸಂಚಾರದಲ್ಲಿ 50% ರಿಯಾಯಿತಿಯನ್ನು ಘೋಷಿಸಿತು ಇದರಿಂದ ಸಾರಿಗೆ ಇಲಾಖೆಯು ಸುಮಾರು 140 ಕೋಟಿ ರೂಪಾಯಿ ದಂಡ ಸಂಗ್ರಹಿಸಿತು.
ಮೊದಲ ಬಾರಿಗೆ ರಿಯಾಯಿತಿ ಘೋಷಿಸಿದಾಗ 1 ಕೋಟಿಗೂ ಹೆಚ್ಚು ಸಂಚಾರ ಉಲ್ಲಂಘನೆ ಪ್ರಕರಣಗಳು ಬಾಕಿ ಉಳಿದಿವೆ. ಸಂಚಾರ ಪೊಲೀಸರ ಪ್ರಕಾರ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು ಅತಿ ಹೆಚ್ಚು ಸಂಚಾರ ಅಪರಾಧವಾಗಿದೆ.
ದಂಡ ಪಾವತಿಸುವ ಬಗ್ಗೆ ಮಾಹಿತಿ:
ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು. ಪೇಟಿಎಂ ಅಪ್ಲಿಕೇಶನ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ದಂಡ ಕಟ್ಟಬಹುದಾಗಿದೆ. ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್ ಸೈಟ್ ಗೆ ಲಾಗ್ ಇನ್ ಆಗಿ ವಾಹನದ ನೋಂದಣಿ ಸಂಖ್ಯೆ ನಮೂದಿಸುವ ಮೂಲಕ ಬಾಕಿ ಪಾವತಿ ಮಾಡಬಹುದು.
ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ದಂಡ ಪಾವತಿಸಬಹುದಾಗಿದೆ. ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ, ದಂಡದ ಮೊತ್ತವನ್ನು ಪಾವತಿಸಿ ರಶೀದಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 080-22942883 ಅಥವಾ 080-22943381 ಅನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications