ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಮೆಮು ರೈಲಿಗೆ ಪ್ರಯಾಣಿಕರ ಕೊರತೆ

|
Google Oneindia Kannada News

ಬೆಂಗಳೂರು, ಆಗಸ್ಟ್ 18: ಕೆಎಸ್‌ಆರ್ ಸಿಟಿ ರೈಲು ನಿಲ್ದಾಣ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ನಡುವೆ ಸಂಚರಿಸುವ ಮೆಮು ರೈಲುಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೇವೆ ಆರಂಭಿಸಿದ ಮೊದಲ 11 ದಿನಗಳ ಅವಧಿಯಲ್ಲಿ, ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆ 3 ರಿಂದ 20 ನಡುವೆ ಇದ್ದು, ಹಿಂದಿರುಗುವ ಪ್ರಯಾಣಿಕರ ಸಂಖ್ಯೆ 3 ರಿಂದ 13 ನಡುವೆ ಇರುತ್ತದೆ.

ನೈಋತ್ಯ ರೈಲ್ವೆ (SWR) ಬೆಂಗಳೂರು - ಚಿಕ್ಕಬಳ್ಳಾಪುರ ರೈಲ್ವೆ ಕಾರಿಡಾರ್‌ನ ವಿದ್ಯುದ್ದೀಕರಣದ ನಂತರ ಜುಲೈ 29 ರಂದು ಕೆಐಎ ಹಾಲ್ಟ್ ಸ್ಟೇಷನ್‌ಗೆ ಮತ್ತು ಐದು ಜೋಡಿ ಮೆಮು ರೈಲುಗಳನ್ನು ಓಡಿಸಲು ಪ್ರಾರಂಭಿಸಿತು. ನಿಲುಗಡೆ ನಿಲ್ದಾಣ ಮತ್ತು ಟರ್ಮಿನಲ್ ನಡುವೆ 10 ನಿಮಿಷಗಳ ಉಚಿತ ಶಟಲ್ ಬಸ್ ಸೇವೆ ಸೇರಿದಂತೆ ಮೆಮು ರೈಲಿನಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣದ ಸಮಯ 90 ನಿಮಿಷಗಳಾಗಿವೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಮೆಮು ರೈಲು ಸೇವೆ ಆರಂಭಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಮೆಮು ರೈಲು ಸೇವೆ ಆರಂಭ

ನೈಋತ್ಯ ರೈಲ್ವೆ ಕೆಐಎ ನಿಲ್ದಾಣಕ್ಕೆ ಪ್ರತಿದಿನ ಏಳು ಜೋಡಿ ರೈಲುಗಳು ಮಾತ್ರ ಸಂಚರಿಸುತ್ತಿದೆ. ಭಾನುವಾರದಂದು ಮೆಮು ರೈಲು ಸೇವೆಗಳಿಲ್ಲ. ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸದಿರುವುದು ಮತ್ತು ಕಳಪೆ ನಿರ್ವಹಣೆಯಿಂದಾಗಿ ಮೆಮು ರೈಲುಗಳಲ್ಲಿ ಪ್ರಯಾಣಿಸಲು ವಿಮಾನ ನಿಲ್ದಾಣದ ಪ್ರಯಾಣಿಕರು ಹಿಂಜರಿಯುತ್ತಾರೆ ಎಂದು ಹೇಳಲಾಗಿದೆ.

 ಮೆಮು ರೈಲಿನಲ್ಲಿ ಸಂಚರಿಸಲು ನಿರಾಸಕ್ತಿ

ಮೆಮು ರೈಲಿನಲ್ಲಿ ಸಂಚರಿಸಲು ನಿರಾಸಕ್ತಿ

ಕ್ಯಾಬ್ ದರವನ್ನು ಉಳಿಸಲು ಯಾವ ಪ್ರಯಾಣಿಕರು ತಮ್ಮ ವಿಮಾನಗಳನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಹಾಗಾಗಿ, ಪ್ರತಿ 30 ನಿಮಿಷಗಳಿಗೊಮ್ಮೆ ವಿಮಾನ ನಿಲ್ದಾಣಕ್ಕೆ ಕನಿಷ್ಠ ಒಂದು ಮೆಮು ರೈಲು ಬೇಕು. ವಿಮಾನ ನಿಲ್ದಾಣದಲ್ಲಿ ಸುಮಾರು 29,000 ಜನ ಕೆಲಸ ಮಾಡುತ್ತಾರೆ, ಆದರೆ ಅವರಲ್ಲಿ ಹೆಚ್ಚಿನವರು ಕಂಪನಿಯ ಬಸ್‌ ಅಥವಾ ಸ್ವಂತ ವಾಹನಗಳನ್ನು ಅವಲಂಬಿಸಿರುವುದರಿಂದ ಮೆಮು ರೈಲುಗಳಲ್ಲಿ ಸಂಚರಿಸಲು ಆಸಕ್ತಿ ತೋರುತ್ತಿಲ್ಲ.

ಬೇರೆ ವಾಹನಗಳ ಸಂಚಾರ ಅವಧಿಗೆ ಹೋಲಿಕೆ ಮಾಡಿದರೆ, ಮೆಮು ರೈಲಿನಲ್ಲಿ ಸಂಚರಿಸುವ ಅವಧಿ ಕಡಿಮೆ ಇದೆ. ನಗರದ ಬಹುತೇಕ ಮಂದಿಗೆ ಮೆಮು ರೈಲುಗಳ ಸಂಚಾರದ ಬಗ್ಗೆ ಅರಿವು ಇಲ್ಲ. ನೈಋತ್ಯ ರೈಲ್ವೆ ಪ್ರಮುಖ ನಿಲ್ದಾಣಗಳಲ್ಲಿ ಈ ಮೆಮು ರೈಲುಗಳ ಸೇವೆಗಳ ಸಮಯವನ್ನು ಪ್ರದರ್ಶಿಸಬೇಕಿದೆ.

 Super Vasuki: ಭಾರತೀಯ ರೈಲ್ವೇಯ ಅತ್ಯಂತ ಉದ್ದವಾದ ಮತ್ತು ಭಾರವಾದ ಸರಕು ಸಾಗಣೆ ರೈಲು Super Vasuki: ಭಾರತೀಯ ರೈಲ್ವೇಯ ಅತ್ಯಂತ ಉದ್ದವಾದ ಮತ್ತು ಭಾರವಾದ ಸರಕು ಸಾಗಣೆ ರೈಲು

 ಮೆಮು ರೈಲು ಸೇವೆ ಬಗ್ಗೆ ಹೆಚ್ಚಿನ ಪ್ರಚಾರ ಬೇಕು

ಮೆಮು ರೈಲು ಸೇವೆ ಬಗ್ಗೆ ಹೆಚ್ಚಿನ ಪ್ರಚಾರ ಬೇಕು

ಬಿಐಎಎಲ್ ಅಧಿಕಾರಿಗಳು ಈ ಸೇವೆಗಳ ಬಗ್ಗೆ ವಿಮಾನ ನಿಲ್ದಾಣದ ಉದ್ಯೋಗಿಗಳಲ್ಲಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಮತ್ತು ಶೀಘ್ರದಲ್ಲೇ ಟರ್ಮಿನಲ್ ಬಳಿ ಸಮಯದೊಂದಿಗೆ ಪ್ರದರ್ಶನ ಫಲಕಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಪ್ರಯಾಣಿಕರು ರೈಲುಗಳ ಪಟ್ಟಿ ಮತ್ತು ಸಮಯವನ್ನು ಪರಿಶೀಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಮು ಎಕ್ಸ್‌ಪ್ರೆಸ್ ರೈಲುಗಳು ದೊಡ್ಡಜಾಲ, ಬೆಟ್ಟಹಲಸೂರು ಮತ್ತು ಚನ್ನಸಂದ್ರದಂತಹ ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಯಾವುದೇ ನಿಲುಗಡೆ ಹೊಂದಿಲ್ಲ. ಪ್ರೋತ್ಸಾಹ ನೀಡಲು, ಚಿಕ್ಕಬಳ್ಳಾಪುರದವರೆಗೆ ರೈಲುಗಳನ್ನು ವಿಸ್ತರಿಸಬೇಕು ಎಂಬ ಬೇಡಿಕೆಯೂ ಇದೆ.

 ಯಶವಂತಪುರ ನಿಲ್ದಾಣಕ್ಕೆ ವಿಸ್ತರಿಸಲು ಬೇಡಿಕೆ

ಯಶವಂತಪುರ ನಿಲ್ದಾಣಕ್ಕೆ ವಿಸ್ತರಿಸಲು ಬೇಡಿಕೆ

ಐದು ಮೆಮು ಜೋಡಿಗಳಲ್ಲಿ, ಎರಡು ಯಲಹಂಕದಲ್ಲಿ ಶುರುವಾಗುತ್ತವೆ ಅಲ್ಲಿಗೆ ಅಂತ್ಯವಾಗುತ್ತವೆ. ಆದರೆ ಈ ಮೆಮು ರೈಲುಗಳನ್ನು ಉತ್ತಮ ಮೆಟ್ರೋ ಸಂಪರ್ಕವನ್ನು ಹೊಂದಿರುವ ಯಶವಂತಪುರದವರೆಗೆ ವಿಸ್ತರಿಸಬೇಕೆಂದು ಬಯಸುತ್ತಾರೆ. ವಿಮಾಣ ನಿಲ್ದಾಣ ರೈಲ್ವೆ ಸ್ಟೇಷನ್‌ನಿಂದ ವೈಟ್‌ಫೀಲ್ಡ್ ವೈಟ್‌ಫೀಲ್ಡ್/ಬಂಗಾರಪೇಟೆ, ಹೀಲಲಿಗೆ/ಹೊಸೂರು, ತುಮಕೂರು ಮತ್ತು ಮೈಸೂರು ಕಡೆಗೆ ರೈಲು ಸಂಚಾರ ಆರಂಭಿಸಲು ಒತ್ತಾಯ ಕೇಳಿಬಂದಿದೆ.

ಹಲವು ವಿಮಾನ ನಿಲ್ದಾಣದ ಉದ್ಯೋಗಿಗಳು ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕವನ್ನು ಬಯಸುತ್ತಾರೆ. ಉದ್ಯೋಗಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ನಾವು ಈಗ ಬಿಐಎಎಲ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ನೈಋತ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ನಿಗದಿತ ಅವಧಿಯಲ್ಲಿ ಸಂಚರಿಸಲು ತೊಂದರೆ

ನಿಗದಿತ ಅವಧಿಯಲ್ಲಿ ಸಂಚರಿಸಲು ತೊಂದರೆ

ಎಲ್ಲಾ ವಿಮಾನ ನಿಲ್ದಾಣ ರೈಲುಗಳಿಗೆ ನೈಋತ್ಯ ರೈಲ್ವೆ ಸಮಯಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಯಲಹಂಕ ದೇವನಹಳ್ಳಿ ಸಿಂಗಲ್ ಟ್ರ್ಯಾಕ್ ಆಗಿರುವುದರಿಂದ ರೈಲು ವಿಳಂಬವಾಗುವ ಸಾಧ್ಯತೆಗಳಿವೆ. ವಿಮಾನ ನಿಲ್ದಾಣದ ಪ್ರಯಾಣಿಕರು, ಹೆಚ್ಚಿನ ಲಗೇಜ್ ಜೊತೆಗೆ ಪ್ರಯಾಣಿಸುವವರು, ಇವರು ವಿಮಾನ ನಿಲ್ದಾಣದ ಟರ್ಮಿನಲ್‌ಗೆ ನೇರ ಸಂಪರ್ಕ ಬಯಸುತ್ತಾರೆ. ಭಾರವಾದ ಲಗೇಜ್‌ಗಳನ್ನು ಹೊತ್ತು ಓಡಾಡುವುದು ಕಷ್ಟವಾದ ಕಾರಣ ಕೆಐಎ ನಿಲುಗಡೆ ನಿಲ್ದಾಣ ಮತ್ತು ವಿಮಾನ ನಿಲ್ದಾಣದ ಟರ್ಮಿನಲ್ ನಡುವಿನ ಉಚಿತ ಶಟಲ್ ಬಸ್ ಸೇವೆ ಬಳಸಲು ಪ್ರಯಾಣಿಕರು ಇಷ್ಟಪಡುವುದಿಲ್ಲ ಎಂದು ವಿಮಾನ ನಿಲ್ದಾಣದ ರೈಲುಗಳ ಪ್ರಚಾರಕ ರಾಜಕುಮಾರ್ ದುಗರ್ ಅಭಿಪ್ರಾಯಪಟ್ಟಿದ್ದಾರೆ.

ಕೆಎಸ್ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣದ ಟರ್ಮಿನಲ್ ತಲುಪಲು 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. 1,500 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರತಿದಿನ ಈ ಸೇವೆಯನ್ನು ಬಳಸಿದರೆ, ಈ ಸೇವೆ ಜನಪ್ರಿಯವಾಗುತ್ತದೆ ಮತ್ತು ಹೆಚ್ಚಿನ ಸೇವೆಗಳಿಗಾಗಿ ನಾವು ನೈಋತ್ಯ ರೈಲ್ವೆಯವರನ್ನು ಕೇಳಬಹುದು. ಇದು ಪರಿಸರ ಸ್ನೇಹಿ ಮತ್ತು ಅಗ್ಗದ ದರದಲ್ಲಿ ತ್ವರಿತವಾಗಿ ತಲುಪಬಹುದಾಗಿದೆ.

English summary
Memu trains running between KSR City railway station and Kempegowda International Airport (KIA) are seeing poor response. South Western Railway (SWR) began running five pairs of memu trains, in addition to two existing Demu trains, to and from KIA halt station on July 29, post electrification of Bengaluru - Chikkaballapur railway corridor. Travel time to the airport by a Memu train is 90 minutes including 10 minute free shuttle bus service between halt station and terminal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X