ತಾವರೆಕೆರೆ: ಸರಣಿ ಅಪಘಾತದಲ್ಲಿ ಮೂವರು ಸಾವು, ಇಬ್ಬರಿಗೆ ಗಾಯ
ತಾವರೆಕೆರೆ, ಡಿಸೆಂಬರ್ 15: ಟಿಪ್ಪರ್, ಆಟೋ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ತಾವರೆಕೆರೆಯ ಹೊನ್ನಗನಹಟ್ಟಿ ಗ್ರಾಮದ ಬೆಂಗಳೂರು-ಮಾಗಡಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಬೆಂಗಳೂರಿನ ಕೊಟ್ಟಿಗೆಪಾಳ್ಯದ ನಿವಾಸಿಗಳಾದ ಚೆನ್ನಮ್ಮ, ಜ್ಯೋತಿ ಹಾಗೂ ಪುಷ್ಪಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾರು ಚಾಲಕ ಹಾಗೂ ಆಟೋದಲ್ಲಿದ್ದ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಕಾಚೋಹಳ್ಳಿ ಕ್ರಾಸ್ ನ ಕೆಂಗನಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ಹೊನ್ನಗನಹಟ್ಟಿ ಸಮೀಪ ಆಟೋ ಚಾಲಕ ಬಸಂತ್ ಮುಂದೆ ತೆರಳುತ್ತಿದ್ದ ಆಲ್ಟೊ ಕಾರನ್ನು ಹಿಂದಿಕ್ಕಿ ಹೋಗಲು ಪ್ರಯತ್ನ ನಡೆಸಿದ್ದ ವೇಳೆ ಎದುಗಡೆಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ.
ಈ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications