ಬೆಂಗಳೂರಿನ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ: ಡಿ.ಕೆ ಶಿವಕುಮಾರ್ ಹೇಳಿಕೆ ಕಾರಣ!

ಬೆಂಗಳೂರಿನ ಇತಿಹಾಸದಲ್ಲಿ ಕೇಳದಷ್ಟು ಬದಲಾವಣೆಗಳು ಆಗುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಮೇಲೆ ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿಯ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಈ ಹಿಂದೆ ಎರಡು ವಿಧವಿತ್ತು. ಒಂದು ಹಳೆಯ ಬೆಂಗಳೂರು ಮತ್ತೊಂದು ಹೊಸ ಬೆಂಗಳೂರು. ಇದೀಗ ಬೆಂಗಳೂರಿನ ಆಡಳಿತ ಯಂತ್ರ ಬದಲಾದ ಮೇಲೆ ಬೆಂಗಳೂರಿನಲ್ಲಿ ಹಳೆಯ ಬೆಂಗಳೂರು, ಹೊಸ ಬೆಂಗಳೂರು ಹಾಗೂ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಎಂದು ವಿಭಜನೆ ಆಗಿದೆ.

ಬೆಂಗಳೂರು ಮಹಾನಗರ ಪಾಲಿಕೆಯ / ಈಗಿನ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 5 ಮಹಾನಗರ ಪಾಲಿಕೆಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಬೆಂಗಳೂರು ಅಭಿವೃದ್ಧಿಯಾಗಿದ್ದು, ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ಗೆ ಭಾರೀ ಬೇಡಿಕೆ ಇದೆ. ಅಲ್ಲದೇ ಬೆಂಗಳೂರಿನಲ್ಲಿ ಐದು ಹೊಸ ಮಹಾನಗರ ಪಾಲಿಕೆಗಳು ರಚನೆಯಾದ ಮೇಲೆ ರಿಯಲ್ ಎಸ್ಟೇಟ್‌ಗೆ ಹೊಸ ಬೂಸ್ಟ್‌ ಸಿಕ್ಕಂತೆ ಆಗಿದೆ. ಬೆಂಗಳೂರಿನಲ್ಲಿ ಇಲ್ಲಿಯ ವರೆಗೆ ಆಸ್ತಿ ತೆರಿಗೆ ಸಂಗ್ರಹ ಹಾಗೂ ಆದಾಯವೆಲ್ಲವೂ ಕೇಂದ್ರೀಕೃತವಾಗುತ್ತಿತ್ತು.

This Part of Bengaluru Has Land Worth Gold D K Shivakumar Explains Why

ಆದರೆ, ಇದೀಗ ಮುಂದುವರಿದ ಭಾಗವಾಗಿ ಎಲ್ಲಾ ಪಾಲಿಕೆಗಳಿಗೂ ಹಣ ಹಂಚಿಕೆಯಾಗಲಿದೆ. ಅಲ್ಲದೇ ವಿವಿಧ ಪ್ರದೇಶಗಳಲ್ಲಿ ಭಿನ್ನವಾದ ಪರಿಸ್ಥಿತಿ ಇದೆ. ಮೆಟ್ರೋ ಕನೆಕ್ಟಿವಿಟಿ / ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಸಂಚಾರ ಸಾರಿಗೆ ವ್ಯವಸ್ಥೆ. ಸೇರಿದಂತೆ ಹಲವು ವಿಚಾರಗಳು ಭೂಮಿ ಖರೀದಿ ಮತ್ತು ಮಾರಾಟದ ಸಮಯದಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದೀಗ ಬೆಂಗಳೂರಿನ ಮಹಾನಗರ ಪಾಲಿಕೆಗಳ ಒಟ್ಟಾರೆ ವ್ಯಾಪ್ತಿ 712 ಚದರ ಕಿ.ಮೀನಿಂದ 720.9 ಚದರ ಕಿ.ಮೀ ವ್ಯಾಪ್ತಿಗೆ ಹೆಚ್ಚಳವಾಗಿದೆ. ಇದರಿಂದ ಸಹಜವಾಗಿಯೇ ಬೆಂಗಳೂರಿನ ಹೊಸ ಪಾಲಿಕೆಗಳ ಗಡಿ ಭಾಗದಲ್ಲಿ ಭೂಮಿಗೆ ಬೇಡಿಕೆ ಹೆಚ್ಚಾಗಿದ್ದು, ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ.

ಬೆಂಗಳೂರಿನ ಐದು ಪಾಲಿಕೆಗಳಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಪ್ರದೇಶ ಸೇರ್ಪಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿರುವುದರಿಂದ ಭೂಮಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಬೆಂಗಳೂರಿನ ಹಳೆಯ ಪ್ರದೇಶಗಳ ವ್ಯಾಪ್ತಿಯಲ್ಲಿ ಮೂರು ಪಾಲಿಕೆಗಳು ಇವೆ. ಇನ್ನೆರಡು ಹೊಸ ಪಾಲಿಕೆಗಳು ಬೆಂಗಳೂರಿನ ಹೊರ ವಲಯದಲ್ಲಿವೆ. ಆದರೆ, ಬೇರೆ ಬೇರೆ ಕಾರಣಗಳಿಗೆ ಬೆಂಗಳೂರಿನ ಐದು ಪಾಲಿಕೆಗಳ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಬೆಂಗಳೂರಿನ ಹೊರ ವಲಯಗಳಲ್ಲಿ ಐಟಿ - ಬಿಟಿ ಹಾಗೂ ಒಳಭಾಗದಲ್ಲಿ ಸುಸ್ಥಿರ (ಮಳೆ ಅನಾಹುತಗಳು ಕಡಿಮೆ) ಇದೆ. ಈ ಹಿಂದೆ ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ ಭೂಮಿಯ ಬೆಲೆ ಹೆಚ್ಚಳವಾಗಿತ್ತು. ಇದೀಗ ಹೊಸ ಹೊಸ ಪ್ರದೇಶಗಳ ಸೇರ್ಪಡೆ ಆಗುತ್ತಿರುವುದು ಭೂಮಿ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿ.

ಇದಕ್ಕೆ ಪೂರಕವಾಗಿ ಬೆಂಗಳೂರಿನ ಹೊರ ವಲಯಗಳಾದ ಬಿಡದಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳ ಅಭಿವೃದ್ಧಿಯೂ ರಿಯಲ್ ಎಸ್ಟೇಟ್‌ಗೆ ಬೂಸ್ಟ್‌ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+