Kannada: ಬೆಂಗಳೂರಲ್ಲಿ ಕನ್ನಡಮ್ಮನ ಮೇಲೆ ದಾಳಿ, ಏನಾಗ್ತಿದೆ ಕನ್ನಡಿಗರ ರಾಜಧಾನಿಯಲ್ಲಿ?
ಕನ್ನಡಿಗರ ಮೇಲೆ ಬೆಂಗಳೂರಿನಲ್ಲಿ ದಾಳಿ ಆಗುವುದು, ಹಲ್ಲೆ ಮಾಡುವುದು ಇವತ್ತು ಅಥವಾ ನಿನ್ನೆಯ ವಿಚಾರ ಅಲ್ಲ. ಈ ಮೊದಲಿನಿಂದ ಕೂಡ ಕನ್ನಡಿಗರ ಮೇಲೆ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಹಲ್ಲೆಗಳು ನಡೆಯುತ್ತಾ ಬಂದಿವೆ. ಅದರಲ್ಲೂ, ಕೆಲವು ಏರಿಯಾಗಳಲ್ಲಿ ಕನ್ನಡಿಗರ ಮೇಲೆ ಪದೇ ಪದೇ ಹಲ್ಲೆಗಳು ಆಗಿವೆ. ಹೀಗಿದ್ದಾಗಲೇ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಇದೀಗ ಕನ್ನಡಮ್ಮನ ಮೇಲೆಯೇ ದಾಳಿ....
ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಆಗುತ್ತಿದೆ, ಪರಭಾಷಿಕರ ಹಾವಳಿಯೂ ಹೆಚ್ಚಾಗಿ ಹೋಗಿದೆ ಎಂಬ ಗಂಭೀರ ಆರೋಪ ಇದೆ. ಹೀಗಾಗಿ, ಕನ್ನಡಿಗರು & ಪರಭಾಷಿಕರ ನಡುವೆ ಆಗಾಗ ದೊಡ್ಡ ಜಗಳವೇ ನಡೆಯುತ್ತದೆ. ಇಷ್ಟೆಲ್ಲದರ ನಡುವೆ ಇದೀಗ ಕನ್ನಡಿಗರ ದೇವತೆ, ಕನ್ನಡ ಭಾಷೆಯ ದೇವಿ ಅಂತಾ ಕರೆಯಲಾಗುವ ಭುವನೇಶ್ವರಿ ದೇವಿಯ ಮೇಲೆಯೇ ಅಟ್ಯಾಕ್ ನಡೆದಿರುವ ಆರೋಪ ಕೇಳಿ ಬಂದಿದೆ.

ಭುವನೇಶ್ವರಿ ದೇವಿ ಮೇಲೆ ದಾಳಿ
ಬೆಂಗಳೂರಿನ ನ್ಯೂ ತಿಪ್ಪಸಂದ್ರ ಮುಖ್ಯರಸ್ತೆಯಲ್ಲಿ ಕನ್ನಡದ ತಾಯಿ ಅಂತಾ ಪೂಜಿಸಲಾಗುವ, ಭುವನೇಶ್ವರಿ ದೇವಿ ಮೇಲೆ ದಾಳಿ ನಡೆದಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ಘಟನೆ ಸಂಬಂಧ ಫೋಟೋ & ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಘಟನೆಗೆ ಕಾರಣ ಯಾರು? ಅಂತಾ ಬೆಂಗಳೂರಿನ ಜನ ಪ್ರಶ್ನೆ ಕೇಳುತ್ತಿದ್ದಾರೆ.
ಕನ್ನಡಿಗರಿಂದ ಭಾರಿ ಆಕ್ರೋಶ!
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿಯ ಮೂರ್ತಿಯ ಮೇಲೆ ನಡೆದಿರುವ ದಾಳಿಯ ವಿಡಿಯೋ & ಫೋಟೋ ವೈರಲ್ ಆಗುತ್ತಿದೆ. ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಕನ್ನಡಿಗರಿಗೆ ಬೆಂಗಳೂರಿನಲ್ಲಿ ಸೂಕ್ತ ರಕ್ಷಣೆಯೇ ಇಲ್ವಾ? ಅಂತಾ ಕೂಡ ಕನ್ನಡಿಗರು ಪ್ರಶ್ನೆ ಕೇಳುತ್ತಿದ್ದಾರೆ. ಮತ್ತೊಂದು ಕಡೆ ತಪ್ಪು ಮಾಡಿದವರನ್ನ ಬಿಡಬೇಡಿ ಎಂಬ ಆಗ್ರಹ ಕೂಡ ಕೇಳಿ ಬಂದಿದೆ.
ಕಿಡಿಗೇಡಿಗಳು ತಾಯಿ ಭುವನೇಶ್ವರಿ ವಿಗ್ರಹವನ್ನು ಹೊಡೆದು ಹಾಕಿದ್ದಾರೆ 😡
— ಕನ್ನಡಿಗ ದೇವರಾಜ್ (@sgowda79) November 15, 2024
ಇಂದಿರಾನಗರ ತಿಪ್ಪಸಂದ್ರ ಬೆಂಗಳೂರು @BlrCityPolice pic.twitter.com/PPLdK50drr
ವಿಷಯ ಬಯಲಾಗಿದ್ದು ಯಾವಾಗ?
ನ್ಯೂ ತಿಪ್ಪಸಂದ್ರ ಮುಖ್ಯರಸ್ತೆ ಆರ್ಚ್ ಬಳಿ ಇರುವ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಬೇಕು, ಹಾಗೇ ಈ ಸಿಸಿ ಕ್ಯಾಮೆರಾ ಪರಿಶೀಲನೆ ಬಳಿಕ ತಪ್ಪು ಮಾಡಿದ್ದು ಯಾರು? ಅನ್ನೋದನ್ನ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ನಿನ್ನೆ ರಾತ್ರಿಯೇ ಹೀಗೆ ಮೂರ್ತಿಯ ಮೇಲೆ ದಾಳಿ ಮಾಡಲಾಗಿದ್ದು, ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ ಎಂದು ಭಾರಿ ಗಂಭೀರ ಆರೋಪ ಮಾಡಲಾಗಿದೆ. ಹೀಗೆ ಮೂರ್ತಿ ಭಗ್ನಗೊಳಿಸಿದ ವಿಚಾರ ಬೆಳಗ್ಗೆ ಬಯಲಿಗೆ ಬಂದಿದೆ. ಬೆಳಗ್ಗೆ ಇದನ್ನ ಕಂಡ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದು, ತನಿಖೆ ನಡೆಸಲು ಆಗ್ರಹಿಸಿದ್ದಾರೆ.
ಪೊಲೀಸರಿಂದ ತನಿಖೆಯು ಆರಂಭ
ಕೆಲವು ದಿನಗಳ ಹಿಂದಷ್ಟೇ ಇಲ್ಲಿ ಭುವನೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಆದ್ರೆ ಇದೀಗ ಹಿಂಗೆ ಮಾಡಲಾಗಿದೆ. ಈ ಬಗ್ಗೆ ಸಂಘಟನೆಗಳು & ಸ್ಥಳೀಯರು ಆಕ್ರೋಶ ಹೊರ ಹಾಕಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಜೀವನ್‌ಭೀಮಾ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮೊದಲಿಗೆ ಪರಿಸ್ಥಿತಿಯನ್ನ ಸಮಾಧಾನಪಡಿಸಿದರು, ನಂತರ ಕೇಸ್ ದಾಖಲಿಸಿಕೊಂಡು ತನಿಖೆಯನ್ನ ನಡೆಸುತ್ತಿದ್ದಾರೆ.












Click it and Unblock the Notifications