PM Modi Bengaluru Visit : ಬೆಂಗಳೂರಿಗರೇ ಗಮನಿಸಿ, ನವೆಂಬರ್ 11 ರಂದು ಈ ರಸ್ತೆಗಳಿಗೆ ಇಳಿಯಬೇಡಿ
ಬೆಂಗಳೂರು, ನ.10 : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ನವೆಂಬರ್ 11 ) ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಲವು ರಸ್ತೆಗಳು ಬಂದ್ ಆಗಲಿವೆ. ಹೀಗಾಗಿ ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಳಗಿನ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ನಗರದಲ್ಲಿ ನವೆಂಬರ್ 11ರಂದು ನಡೆಯಲಿರುವ ವಿವಿಧ ಸಮಾರಂಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

"ದಿನಾಂಕ 11.11.2022 ರಂದು ಮಾನ್ಯ ಪ್ರಧಾನ ಮಂತ್ರಿಗಳು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರ, ಮಾನ್ಯ ಪ್ರಧಾನ ಮಂತ್ರಿಗಳ ಸಂಚಾರ ಹಾಗೂ ಭದ್ರತಾ ದೃಷ್ಟಿಯಿಂದ ಈ ಕೆಳಕಂಡ ಮಾರ್ಗಗಳಲ್ಲಿ ಬೆಳ್ಳಗೆ 08:00 ಗಂಟೆಯಿಂದ ಮದ್ಯಾಹ್ನ 02:00 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಕೆಳಕಂಡ ರಸ್ತೆಗಳನ್ನು ಬಳಸದೇ ಸಂಚಾರ ಪೊಲೀಸರೊಂದಿಗೆ ಸಹಕರಿಸಲು ಕೋರಿದೆ" ಎಂದು ಇಲಾಖೆ ಸೂಚನೆ ಹೊರಡಿಸಿದೆ.
*ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ*
ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲಿವೇಟೆಡ್ ಕಾರಿಡಾರ್ ರಸ್ತೆ ಬಂದ್ ಆಗಲಿದೆ.
ಶೇಷಾದ್ರಿ ರಸ್ತೆ (ಮಹಾರಾಣಿ ಕಾಲೇಜು ಸೇತುವೆಯಿಂದ ರೈಲು ನಿಲ್ದಾಣದವರೆಗೆ), ಕೆ.ಜಿ. ರಸ್ತೆಯಲ್ಲಿ ಶಾಂತಲಾ ಜಂಕ್ಷನ್‌ನಿಂದ ಮೈಸೂರು ಬ್ಯಾಂಕ್ ವೃತ್ತದ ವರೆಗೆ, ವಾಟಾಳ್ ನಾಗರಾಜ್ ರಸ್ತೆಯಲ್ಲಿ ಖೋಡೆ ಅಂಡರ್‌ಪಾಸ್‌ನಿಂದ ಪಿಎಫ್ ವರೆಗೆ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ರಸ್ತೆಗಳು ಬಂದ್ ಇರಲಿವೆ.
ಬೆಳಗ್ಗೆ 7 ರಿಂದ ಮಧ್ಯಾಹ್ನ 3ರ ವರೆಗೆ ಭಾರಿ ವಾಹನಗಳು ನಗರದೊಳಗೆ ಪ್ರವೇಶ ಮಾಡುವಂತಿಲ್ಲ.

*ಪರ್ಯಾಯ ಮಾರ್ಗಗಳು ಇಂತಿವೆ*
ಏರ್‌ಪೋಟ್ ತಲುಪಲು ಕೆಆರ್ ಪುರಂ, ರಿಂಗ್ ರಸ್ತೆ ಕಡೆಯಿಂದ ಬರುವವರು ಟಿನ್ ಫ್ಯಾಕ್ಟರಿ, ರಾಮಮೂರ್ತಿ ನಗರ, ಹೆಣ್ಣೂರು ಮುಖ್ಯರಸ್ತೆ, ಬೈರತಿ ಕ್ರಾಸ್, ಹೊಸೂರು ಬಂಡೆ, ಬಾಗಲೂರು ಬಸ್ ನಿಲ್ದಾಣ, ಮೈಲನಹಳ್ಳಿ ಕ್ರಾಸ್ ಮೂಲಕ ಬೇಗೂರು ಹಿಂಭಾಗದ ಗೇಟ್ ಮೂಲಕ ತಲುಪಬಹುದು.
ಕಂಟೋನ್ಮೆಂಟ್ ಪ್ರದೇಶದಿಂದ ಏರ್‌ಪೋಟ್ ತಲುಪುವವರು ಜೆ.ಸಿ.ನಗರ, ಆರ್.ಟಿ.ನಗರದ ಕಡೆಯಿಂದ ಜಯಮಹಲ್ ರಸ್ತೆ, ಸಿಕ್ಯೂಎಎಲ್ ಕ್ರಾಸ್, ವಾಟರ್ ಟ್ಯಾಂಕ್ ಜಂಕ್ಷನ್, ಪಿಆರ್‌ಟಿಸಿ ಜಂಕ್ಷನ್, ದೇವೇಗೌಡ ರಸ್ತೆ, ದಿನ್ನೂರು ಜಂಕ್ಷನ್, ಕಾವಲ್ ಬೈರಸಂದ್ರ ರಸ್ತೆ, ನಾಗವಾರ ಜಂಕ್ಷನ್, ಹೆಣ್ಣೂರು ಕ್ರಾಸ್, ಕೊತ್ತನೂರು, ಕಣ್ಣೂರು, ಬಾಗಲೂರು ವೃತ್ತ, ಹೂವಿನನಾಯಕನಹಳ್ಳಿ ಕ್ರಾಸ್, ಬಂಡಿನಾಯಕನಹಳ್ಳಿ ಕ್ರಾಸ್, ಬಂಡಿನಹಳ್ಳಿ ರಸ್ತೆ ಮೈಲನಹಳ್ಳಿ ಕ್ರಾಸ್, ಬೇಗೂರು ಹಿಂದಿನ ಗೇಟ್ ಮೂಲಕ ಹೋಗಬಹುದು.
ಇನ್ನು ತುಮಕೂರು ರಸ್ತೆಯಿಂದ ಹೋಗುವವರು, ರಿಂಗ್ ರೋಡ್‌ನಿಂದ ಗೊರಗುಂಟೆಪಾಳ್ಯ, ಬಿಇಎಲ್ ಜಂಕ್ಷನ್, ಗಂಗಮ್ಮನಗುಡಿ ವೃತ್ತ, ಎಂಎಸ್ ಪಾಳ್ಯ, ಯಲಹಂಕ ಮದರ್ ಡೈರಿ ಜಂಕ್ಷನ್, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್, ನಾಗೇನಹಳ್ಳಿ ಗೇಟ್, ಸಿಂಗನಾಯನಕನಹಳ್ಳಿ, ರಾಜಾನುಕುಂಟೆ, ಎಂವಿಐಟಿ ಜಂಕ್ಷನ್, ವಿದ್ಯಾನಗರ ಅಂಡರ್‌ಪಾಸ್, ಉತ್ತನಹಳ್ಳಿ, ಕನ್ನಯನಹಳ್ಳಿ, ಬಗಲನಹಳ್ಳಿ, ರಜಕ್ನಹಳ್ಳಿ , ಬಂಡಿಕೊಡಿಗೆಹಳ್ಳಿ, ಮೈಲನಹಳ್ಳಿ, ಗಾಲಮ್ಮ ಕ್ರಾಸ್, ವಿಮಾನ ನಿಲ್ದಾಣದ ಹಿಂದಿನ ಗೇಟ್‌್ ತಲುಪಬಹುದು.
ಮೈಸೂರು ಬ್ಯಾಂಕ್ ವೃತ್ತದಿಂದ ಪ್ಯಾಲೇಸ್ ರಸ್ತೆ- ಕೆ.ಜಿ. ರಸ್ತೆಯ ಮೂಲಕ ಎಲ್.ಆರ್.ಡಿ.ಇ ವೃತ್ತದಿಂದ ಬಸವೇಶ್ವರ ವೃತ್ತದ ಕಡೆಗೆ ಸಂಚರಿಸುವವರು ರಾಜಭವನ ರಸ್ತೆ ಮೂಲಕ ಹೋಗಬಹುದು. ಭಾಷ್ಯಂ ಸರ್ಕಲ್‌ನಿಂದ ಕಾವೇರಿ ಜಂಕ್ಷನ್‌ಗೆ ಮಲ್ಲೇಶ್ವರಂ 18ನೇ ಕ್ರಾಸ್ - ಮಾರ್ಗೋಸ ರಸ್ತೆ ಬಳಸಬಹುದು.
ಬಿಹೆಚ್ ಇಎಲ್ ಸರ್ಕಲ್‌ನಿಂದ ಮೇಕ್ರಿ ಸರ್ಕಲ್‌ಗೆ ಸದಾಶಿವನಗರ ಪೊಲೀಸ್ ಠಾಣೆ - ಮಾರಮ್ಮ ಸರ್ಕಲ್ - ಮಾರ್ಗೋಸ ರಸ್ತೆ ಬಳಸಬಹುದು. ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಕಡೆ ಪ್ರಯಾಣಿಸುವವರು ರೇಸ್ ವ್ಯೂವ್ ಸರ್ಕಲ್‌ನಲ್ಲಿ - ಶಿವಾನಂದ ಸರ್ಕಲ್‌ನಲ್ಲಿ ಎಡತಿರುವು ಪಡೆದು ನೆಹರು ಸರ್ಕಲ್ ಮೂಲಕ ಸಾಗಬಹುದಾಗಿದೆ.
ಕ್ವೀನ್ಸ್ ಸರ್ಕಲ್‌ನಿಂದ ಸಿಟಿಒ ಜಂಕ್ಷನ್ ಕಡೆಗೆ ತೆರಳುವವರು, ಸಿದ್ದಲಿಂಗಯ್ಯ ವೃತ್ತ - ಆರ್.ಆರ್.ಎಂ.ಆರ್. ರಸ್ತೆ ಬಳಸಬಹುದು, ಬಾಳೇಕುಂದ್ರಿ ಜಂಕ್ಷನ್‌ನಿಂದ ಮೆಜೆಸ್ಟಿಕ್ ಕಡೆಗೆ ತೆರಳುವ ವಾಹನಗಳು ಕನ್ನಿಂಗ್ ಹ್ಯಾಮ್ ರಸ್ತೆಯನ್ನು ಬಳಸಲು ಸೂಚಿಸಲಾಗಿದೆ.












Click it and Unblock the Notifications