ಕೊನೆಗೂ ಸಿಕ್ಕಿಬಿದ್ದ ದೇವರ ತಾಳಿ ಕದಿಯುವ ಕಳ್ಳ!
ಬೆಂಗಳೂರು, ಜು. 09: ದೇವರನ್ನು ನಂಬಿಕೊಂಡು ಕಳುವು ಮಾಡುವ ಕಳ್ಳರೇ ಜಾಸ್ತಿ. ಆದ್ರೆ ಇಲ್ಲೊಬ್ಬ ಕಳ್ಳನಿಗೆ ದೇವರ ತಾಳಿ ಅಂದ್ರೆ ಇಷ್ಟ. ದೇವರ ಹುಂಡಿ ಕದಿಯಲು ಹೋಗುತ್ತಾನೆ. ದೇವರ ಹುಂಡಿಯಲ್ಲಿ ಕಾಸು ಸಿಗದಿದ್ದರೆ ದೇವರ ಆಭರಣ ಕದ್ದು ಎಸ್ಕೇಪ್ ಆಗ್ತಾನೆ. ದೇವರ ಆಭರಣ ಪ್ರಿಯ ಕಳ್ಳನನ್ನು ಆರ್.ಎಂ.ಸಿ. ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ರವಿಕುಮಾರ್ ಬಂಧಿತ ಆರೋಪಿ. ಯಶವಂತಪುರದ ನಾಗಮ್ಮದೇವಿ ಹಾಗೂ ಅಂಗಾಳ ಪರಮೇಶ್ವರಿ ದೇವಾಲಯಕ್ಕೆ ನುಗ್ಗಿ ಹುಂಡಿ ಹೊಡೆದಿದ್ದ. ಲಾಕ್ ಡೌನ್ ನಿಂದಾಗಿ ದೇಗುಲ ಅನೇಕ ತಿಂಗಳಿನಿಂದ ಮುಚ್ಚಲಾಗಿತ್ತು. ಹಿಗಾಗಿ ಹುಂಡಿಯಲ್ಲಿ ನಿರೀಕ್ಷಿತ ಹಣ ಇರಲಿಲ್ಲ. ಹುಂಡಿಯಲ್ಲ ಹಣ ಸಿಗದ ಕಾರಣ ದೇವರ ವಿಗ್ರಹದಲ್ಲಿನ ತಾಳಿಗಳನ್ನೇ ಹೊತ್ತೊಯ್ದು ಮಾರಾಟ ಮಾಡಿದ್ದ. ಈ ಕುರಿತು ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Recommended Video
ನಾಗಮ್ಮದೇವಿ ಹಾಗೂ ಅಂಗಾಳ ಪರಮೇಶ್ವರ ದೇಗುಲದಲ್ಲಿ ಕಳ್ಳತನ ಬಗ್ಗೆ ದೇವಾಲಯದ ಸಿಸಿಟಿವಿ ಪರಿಶೀಲನೆ ನಡೆಸಿ ಸುಳಿವು ಪಡೆದಿದ್ದ ಪೊಲೀಸರು ಆರೋಪಿ ರವಿಕುಮಾರ್ ನನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಂದೂವರೆ ಲಕ್ಷ ಮೌಲ್ಯದ ಎರಡು ದೇವರ ವಿಗ್ರಹ ತಾಳಿಯನ್ನು ವಶಪಡಿಸಿಕೊಂಡಿದ್ದಾರೆ.












Click it and Unblock the Notifications