ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ಇಲ್ಲ: ಆಯುಕ್ತ ಸುನೀಲ್ ಕುಮಾರ್
ಬೆಂಗಳೂರು, ಸೆಪ್ಟೆಂಬರ್ 10: ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ನಗರದ ಬಹುತೇಕ ಕಡೆ ಪ್ರತಿಭಟನೆ ನಡೆಸಿದ್ದಾರೆ ಆದರೆ ಎಲ್ಲೂ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಬಂದ್ ಈಗ ಮುಗಿದಿದ್ದರೂ ಸಹ ಸಂಜೆ ವರೆಗೂ ಪೊಲೀಸ್ ಭದ್ರತೆ ಇರಲಿದೆ ಎಂದು ಮಾಹಿತಿಮ ನೀಡಿದ ಅವರು, ಸಂಪೂರ್ಣ ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಕಾರಣ ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಮಾಹಿತಿ ನೀಡಿದರು.
ಚಾಲುಕ್ಯ ವೃತ್ತದ ಬಳಿ ಕೆಲವು ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಆ ಕಾರಣ ಕೆಲವರನ್ನು ವಶಕ್ಕೆ ಪಡೆದಿದ್ದೇವೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೀಡಿದ್ದ ಬಂದ್ 3 ಗಂಟೆಗೆ ಮುಗಿದಿದ್ದು, ನಗರದಲ್ಲಿ ಸಾರಿಗೆ ವಾಹನಗಳು ಪುನರ್ ಸಂಚಾರ ಆರಂಭಿಸಿವೆ. ಟ್ಯಾಕ್ಸಿಗಳು ಸೇವೆ ಪುನರ್ ಆರಂಭಿಸಿವೆ.












Click it and Unblock the Notifications