• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ ವಿಶ್ವದ ಬೃಹತ್‌ ವಿಮಾನ!

|
Google Oneindia Kannada News

ಬೆಂಗಳೂರು, ಆಗಸ್ಟ್‌ 17: ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕ ವಿಮಾನವು ನಮ್ಮ ಬೆಂಗಳೂರಿಗೆ ಶೀಘ್ರದಲ್ಲೇ ಬರಲಿದೆ. ಎಮಿರೇಟ್ಸ್ ಏರ್‌ಲೈನ್ಸ್ ಅಕ್ಟೋಬರ್ 30ರಿಂದ ಬೆಂಗಳೂರು- ದುಬೈ ಮಾರ್ಗದಲ್ಲಿ ಈ ಜಂಬೋ ವಿಮಾನವನ್ನು ಹಾರಾಟಕ್ಕೆ ನಿಯೋಜಿಸಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ರನ್‌ವೇಗೆ ಎ380 ವಿಮಾನವನ್ನು ಇಳಿಸಲು ಕೋಡ್ ಎಫ್‌ಗೆ ಅನುಗುಣವಾಗಿ ಹಲವಾರು ವರ್ಷಗಳ ಪ್ರಯತ್ನದ ನಂತರ ಇದು ಸಾಧ್ಯವಾಗಲಿದೆ. ಕೋಡ್ ಎಫ್ ವಿಮಾನಗಳು 65 ಮೀಟರ್‌ಗಿಂತ ಹೆಚ್ಚು ಉದ್ದವಿದೆ. ಆದರೆ 80 ಮೀಟರ್‌ಗಿಂತ ಕಡಿಮೆ ರೆಕ್ಕೆಗಳನ್ನು ಹೊಂದಿರುವ ವಿಮಾನಗಳಾಗಿವೆ. ಈಗ ಬರುತ್ತಿರುವ ಎ380 ವಿಮಾನದ ರೆಕ್ಕೆಗಳು 79.8 ಮೀಟರ್ ಉದ್ದವಾಗಿದೆ. ಕೋಡ್ ಎಫ್ ಅಡಿಯಲ್ಲಿ ಬೋಯಿಂಗ್ 747 ಏಕೈಕ ಪ್ರಯಾಣಿಕ ವಿಮಾನವಾಗಿದೆ.

ಎ 380 ಎಂಬುದು ವಿಶ್ವದ ಉದ್ದವಾದ ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ಬೆಂಗಳೂರು ದೆಹಲಿ ಮತ್ತು ಮುಂಬೈ ನಂತರ ಜಂಬೋ ಜೆಟ್ ಅನ್ನು ಇಳಿಸುವ ಮೂರನೇ ಭಾರತೀಯ ನಗರವಾಗಲಿದೆ. ಎಮಿರೇಟ್ಸ್ ಏರ್‌ಲೈನ್ಸ್‌ಗೆ ಬೆಂಗಳೂರು ಎ 380 ವಿಮಾನವನ್ನು ದೈನಂದಿನ ಸೇವೆಯಾಗಿ ನಿಯೋಜಿಸುವ ಎರಡನೇ ಭಾರತೀಯ ನಗರವಾಗಿದೆ. ಇದಕ್ಕೂ ಮೊದಲು ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯು 2014 ರಿಂದ ಮುಂಬೈ- ದುಬೈ ಮಾರ್ಗದಲ್ಲಿ ಎ 380 ಅನ್ನು ಹಾರಿಸುತ್ತಿದೆ.

ಬೆಂಗಳೂರು: ಇಂಡಿಗೋ ವಿಮಾನದ ಶೌಚಾಲಯದಲ್ಲಿ ಬಾಂಬ್‌ ಬೆದರಿಕೆ ಪತ್ರಬೆಂಗಳೂರು: ಇಂಡಿಗೋ ವಿಮಾನದ ಶೌಚಾಲಯದಲ್ಲಿ ಬಾಂಬ್‌ ಬೆದರಿಕೆ ಪತ್ರ

ಬೆಂಗಳೂರು- ದುಬೈ ಮಾರ್ಗದಲ್ಲಿ ದೈನಂದಿನವಾಗಿ ಎ 380 ವಿಮಾನಗಳು ಮೂರು ವರ್ಗದ ಮಾದರಿಯಲ್ಲಿ ಹಾರಾಟ ನಡೆಸಲಿವೆ. ಅವುಗಳೆಂದರೆ ಎಕಾನಮಿ, ಬಿಸಿನೆಸ್‌ ಮತ್ತು ಫಸ್ಟ್‌ ಕ್ಲಾಸ್‌ ತರಗತಿಗಳಲ್ಲಿ ಆಸನಗಳು ವಿಮಾನದಲ್ಲಿ ಇರಲಿವೆ. ಇಕೆ 568 ಅಕ್ಟೋಬರ್ 30 ರಂದು ಸ್ಥಳೀಯ ಕಾಲಮಾನ ರಾತ್ರಿ 9.25ಕ್ಕೆ ದುಬೈನಿಂದ ಟೇಕ್ ಆಫ್ ಆಗಲಿದ್ದು, ಮರುದಿನ ಮುಂಜಾನೆ 2.30ಕ್ಕೆ ಬೆಂಗಳೂರನ್ನು ತಲುಪಲಿದೆ. ರಿಟರ್ನ್ ಫ್ಲೈಟ್ ಇಕೆ 569 ಅಕ್ಟೋಬರ್ 31 ರಂದು ಬೆಳಿಗ್ಗೆ 4.30ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 7.10ಕ್ಕೆ (ಸ್ಥಳೀಯ ಸಮಯ) ದುಬೈಗೆ ಇಳಿಯುತ್ತದೆ.

ಎ380 ಆಸನಗಳು ಎಕಾನಮಿ ಕ್ಲಾಸ್‌ನಲ್ಲಿ ಹೆಚ್ಚುವರಿ ಲೆಗ್‌ರೂಮ್‌ನೊಂದಿಗೆ ವಿಶಾಲವಾಗಿರುತ್ತವೆ. ಬಿಸಿನೆಸ್ ಕ್ಲಾಸ್ ಸಂಪೂರ್ಣವಾಗಿ ಫ್ಲಾಟ್ ಸೀಟ್‌ಗಳನ್ನು ಹೊಂದಿರುತ್ತದೆ. ಫಸ್ಟ್‌ ಕ್ಲಾಸ್‌ ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿರುತ್ತದೆ ಎಂದು ಎಮಿರೇಟ್ಸ್‌ ಏರ್‌ಲೈನ್ಸ್ ತಿಳಿಸಿದೆ. ಎ 380 ಅನ್ನು ಮೊದಲು ಅಕ್ಟೋಬರ್ 25, 2007 ರಂದು ಸಿಂಗಪುರ್ ಏರ್‌ಲೈನ್ಸ್‌ನೊಂದಿಗೆ ವಾಣಿಜ್ಯ ಸೇವೆಗೆ ಸೇರಿಸಲಾಯಿತು. ಆದರೆ ತಯಾರಕರಾದ ಏರ್‌ಬಸ್ ಕಳೆದ ವರ್ಷ ಮೇ ತಿಂಗಳಲ್ಲಿ ತನ್ನ ಉತ್ಪಾದನೆಯನ್ನು ನಿಲ್ಲಿಸಿದೆ.

Recommended Video

   ಟೀಂ ಇಂಡಿಯಾ ಆಟಗಾರರು ಸ್ನಾನ ಮಾಡೋಕೂ ಕಂಡಿಷನ್ ಹಾಕಿದ BCCI | *Cricket | Oneindia Kannada
   English summary
   The world's biggest and most spacious passenger plane is coming to our Kempegowda International Airport,Bengaluru soon.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X