ಬೀದಿ ನಾಯಿ ರಕ್ಷಣೆಗೆ ಪ್ರಸಾದ್ ಬಿದ್ದಪ್ಪ ಫ್ಯಾಷನ್ ಶೋ

ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಜನಪ್ರಿಯ ಪ್ರಾಣಿ ದಯಾ ಸಂಘವಾದ ಕಂಪ್ಯಾಶನ್ ಅನ್ ಲಿಮಿಟೆಡ್ ಪ್ಲಸ್ ಆಕ್ಷನ್(Compassion Unlimited Plus Action) ಸಂಘಟನೆಗೆ ದೇಣಿಗೆ ಸಂಗ್ರಹಿಸುವ ಸಲುವಾಗಿ ಅಕ್ಟೋಬರ್ 22 ರಂದು ದಿ ರೆಸ್ಕ್ಯೂ ರಿವೊಲ್ಯೂಶನ್ ಎಂಬ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ.

ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನ ಲಲಿತ್ ಅಶೋಕ್ ಹೊಟೇಲ್ ನಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಫ್ಯಾಶನ್ ಶೋ ನಡೆಯಲಿದ್ದು, ಇದರಲ್ಲಿ ನಾಯಿಗಳೂ ಭಾಗವಹಿಸಲಿರುವುದು ವಿಶೇಷ. ಭಾರತದ ಪ್ರಖ್ಯಾತ ಗಾಯಕ ಬೆಹ್ರಾಮ್ ಸಿಂಗಪೂರಿಯಾ ಅವರು ತಮ್ಮ ಗಾಯನದ ಮೂಲಕ ವೇದಿಕೆಗೆ ಮತ್ತಷ್ಟು ಕಳೆ ನೀಡಲಿದ್ದಾರೆ.

The Rescue Revolution programme to collect donation to save animals on Oct 22nd

ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದ ಈ ಪ್ರಾಣಿ ದಯಾ ಸಂಘ ಬೆಂಗಳೂರಿನಲ್ಲಿ ಸುರಿದ ಭೀಕರ ಮಳೆಗೆ ಜಲಾವೃತಗೊಂಡು ಇದರಲ್ಲಿದ್ದ ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಮತ್ತೆ ಮೊದಲಿನಂತೆಯೇ ಈ ಪ್ರಾಣಿ ದತ್ತು ಕೇಂದ್ರವನ್ನು ತೆರೆಯಲು ದೇಣಿಗೆ ಅಗತ್ಯವಿದೆ.

ನೂರಾರು ಪ್ರಾಣಿಗಳ ಜೀವ ಉಳಿಸಿ ಮಾನವೀಯತೆ ಮೆರೆದ CUPA ಸಂಘಟನೆಗಾಗಿ ದೇಣಿಗೆ ಸಂಗ್ರಹಿಸುವ ಉದ್ದೇಶವನ್ನು ಹೊಂದಿರುವ ಈ ಕಾರ್ಯಕ್ರಮಕ್ಕೆ ಪ್ರಾಣಿಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+