ಬೆಂಗಳೂರು ಏರ್‌ಪೋರ್ಟ್‌: ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಾಪಸ್ಸಾದ ವಿಮಾನ

ಬೆಂಗಳೂರು, ಮಾರ್ಚ್‌ 11: ತಾಂತ್ರಿಕ ದೋಷದಿಂದಾಗಿ ಶನಿವಾರ ಬೆಳಿಗ್ಗೆ ವಿಮಾನವು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಮರಳಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಎಐಎಕ್ಸ್‌ ಕನೆಕ್ಟ್ (ಹಿಂದೆ ಏರ್‌ಏಷ್ಯಾ ಇಂಡಿಯಾ) ವಿಮಾನವು ಲಕ್ನೋಗೆ ಹೊರಟಿತ್ತು. ಇದು ಶನಿವಾರ ಬೆಳಿಗ್ಗೆ 6.45ರ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದು, ಬೆಳಿಗ್ಗೆ 9 ಗಂಟೆಗೆ ಲಖನೌಗೆ ಬರಬೇಕಿತ್ತು. ಆದಾಗ್ಯೂ, ಅದು 10 ನಿಮಿಷಗಳ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿತು.

The plane landed at Bengaluru Kempegowda International Airport within a few minutes of take off

ಬೆಂಗಳೂರಿನಿಂದ ಲಕ್ನೋಗೆ ಹೊರಟಿದ್ದ ಎಐಎಕ್ಸ್ ಕನೆಕ್ಟ್ ವಿಮಾನವು ಶನಿವಾರ ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ 10 ನಿಮಿಷಗಳ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಮಾನವು ಶನಿವಾರ ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ 10 ನಿಮಿಷಗಳ ನಂತರ ಕೆಂಪೇಗೌಡ ಅಂತಾರಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಏರ್ ಏಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ಲಕ್ನೋಗೆ ಹಾರಾಟ ನಡೆಸಬೇಕಿದ್ದ ಐ5-2472 ವಿಮಾನವು ಸಣ್ಣ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದ್ದು, ಬೆಂಗಳೂರಿಗೆ ಮರಳಿ ಬಂದಿದೆ ಎಂದು ಎಐಎಕ್ಸ್‌ ಕನೆಕ್ಟ್ ದೃಢಪಡಿಸುತ್ತದೆ ಎಂದು ಎಐಎಕ್ಸ್‌ ಕನೆಕ್ಟ್‌ನ ವಕ್ತಾರರು ತಿಳಿಸಿದ್ದಾರೆ.

ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಖಾಸಗಿ ವಿಮಾನಯಾನ ಸಂಸ್ಥೆ ಭರವಸೆ ನೀಡಿದೆ. ಪರಿಣಾಮಕ್ಕೊಳಗಾದ ಅತಿಥಿಗಳಿಗಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಇತರ ನಿಗದಿತ ಕಾರ್ಯಾಚರಣೆಗಳ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ವಕ್ತಾರರು ಸೇರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+