ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಟ್ರಾಫಿಕ್ ನಿಯಮ ಮುಂದಿನ 3 ದಿನ ಬೆಂಗಳೂರಿಗೆ ಅನ್ವಯಿಸೋದಿಲ್ಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 1: ಇನ್ನು ಮೂರು ದಿನ ಟ್ರಾಫಿಕ್ ಪೊಲೀಸರಿಗೆ ದುಬಾರಿ ದಂಡ ಕಟ್ಟುವ ತಲೆನೋವಿಲ್ಲ.

ಮೋಟಾರು ಕಾಯ್ದೆ ಅಧಿಸೂಚನೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಇನ್ನೂ ತಲುಪಿಲ್ಲದ ಕಾರಣ ಮುಂದಿನ ಮೂರು ದಿನ ಈ ದಂಡ ಯಾವುದೂ ಅನ್ವಯವಾಗುವುದಿಲ್ಲ.

ಬೆಂಗಳೂರು ಸಂಚಾರ ದಟ್ಟಣೆ ಬಗ್ಗೆ ಬಂತು ಹೊಸ ವರದಿಬೆಂಗಳೂರು ಸಂಚಾರ ದಟ್ಟಣೆ ಬಗ್ಗೆ ಬಂತು ಹೊಸ ವರದಿ

ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಪ್ರಕಾರ ಕುಡಿದು ವಾಹನ ಚಲಾಯಿಸುವವರಿಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸಿದರೆ 5 ಸಾವಿರ ರೂ, ಲೈಸೆನ್ಸ್​ ಇಲ್ಲದೆ ಗಾಡಿ ಓಡಿಸಿದರೆ 5 ಸಾವಿರ ರೂ, ಕಾರಿನಲ್ಲಿ ಸೀಟ್ ಬೆಲ್ಟ್​ ಅಥವಾ ಬೈಕ್​ನಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದರೆ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ.

The New Traffic Rules Will Not Apply To Bengaluru For The Next 3 Days

ಶನಿವಾರ ರಾತ್ರಿಯಿಂದಲೇ ಟ್ರಾಫಿಕ್ ಬೆಂಗಳೂರು ಟ್ರಾಫಿಕ್ ಪೊಲೀಸರು ಚುರುಕಾಗಿದ್ದು, ಕುಡಿದು ವಾಹನ ಚಲಾಯಿಸಿ ಸಿಕ್ಕಿ ಬಿದ್ದವರಿಗೆ ಕೋರ್ಟ್​ನಲ್ಲಿ ದಂಡ ಕಟ್ಟಿಸಲು ಸೂಚನೆ ನೀಡಲಾಗಿದೆ.

ಸಧ್ಯಕ್ಕೆ ಕೇಂದ್ರ ಸರ್ಕಾರದ ಯಾವ ಸೂಚನೆಗಳೂ ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ತಲುಪದ ಕಾರಣ ಇನ್ನೂ ಮೂರು ದಿನಗಳ ಕಾಲ ಹಳೆಯ ದಂಡ ವಿಧಾನವೇ ಮುಂದುವರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸರ್ಕಾರ ಇದಕ್ಕೆ 10 ಸಾವಿರ ರೂ. ದಂಡ ನಿಗದಿಪಡಿಸಿರುವ ಅಧಿಸೂಚನೆ ಕೈಸೇರದ ಹಿನ್ನೆಲೆಯಲ್ಲಿ ಪೊಲೀಸರು ದಂಡದ ಮೊತ್ತವನ್ನು ನಮೂದಿಸುತ್ತಿಲ್ಲ. ದಂಡವನ್ನು ಕೋರ್ಟ್​ನಲ್ಲಿ ಕಟ್ಟಿ ಎಂದು ಸೂಚನೆ ನೀಡಿ ಕಳುಹಿಸುತ್ತಿದ್ದಾರೆ.

English summary
The Three-days Traffic Rules violators no headache to pay Huge amount of Fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X