ಬಡವರಿಗೆ ಕಮಿಷನ್‌ ಆಸೆ ತೋರಿಸಿ ಅಕ್ರಮ ಖಾತೆ ತೆರೆಯುತ್ತಿದ್ದ ಮ್ಯಾನೇಜರ್‌: 175 ಕೋಟಿ ವಂಚನೆ!

ಪ್ರತಿ‍ಷ್ಠಿತ ಹಾಗೂ ಸರ್ಕಾರಿ ಬ್ಯಾಂಕ್‌ವೊಂದರ ಮ್ಯಾನೇಜರೇ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಮೋಸದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.

ಈ ಬಾರಿ ಅಕ್ರಮದ ಬೆನ್ನಲ್ಲೇ ಆ ನಿರ್ದಿಷ್ಟ ಖಾತೆಗೆ ಸಂಬಂಧಿಸಿದಂತೆ 600ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

The manager was opening a fake account saying that he would give commission to the poor 175 crore illegal

ಏನಿದು ಅಕ್ರಮ, 175 ಕೋಟಿ ಅವ್ಯವಹಾರವಾಗಿದ್ದು ಹೇಗೆ ?

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಈ ರೀತಿ ಭಾರೀ ಅಕ್ರಮ ನಡೆದಿರುವುದು ವರದಿಯಾಗಿದೆ. ಅಲ್ಲಿನ ಭಾರತೀಯ ಸ್ಟೇಟ್‌ ಬ್ಯಾಂಕ್‌ ಶಾಖೆಯೊಂದರ ಮ್ಯಾನೇಜರ್‌ ಈ ರೀತಿ ಭಾರೀ ಅಕ್ರಮದಲ್ಲಿ ಶಾಮೀಲಾಗಿರುವ ಬೆಳಕಿಗೆ ಬಂದಿದ್ದು, ಅಲ್ಲಿನ ಪೊಲೀಸರು ಬ್ಯಾಂಕ್‌ ಮ್ಯಾನೇಜರ್‌ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬೇನಾಮಿ ಖಾತೆಗಳ ಮೂಲಕ ವಂಚನೆ

ಎಸ್‌ಬಿಐನ ಬ್ಯಾಂಕ್‌ನ ಮ್ಯಾನೇಜರ್‌ ಮಧು ಬಾಬು ಗಾಲಿ ಮತ್ತು ಜಿಮ್‌ ಟ್ರೇನರ್ ಉಪಾಧ್ಯ ಸಂದೀಪ್‌ ಶರ್ಮ್‌ ಎನ್ನುವ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ ಈ ಇಬ್ಬರು ಕೋಟ್ಯಾಂತರ ರೂಪಾಯಿ ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

The manager was opening a fake account saying that he would give commission to the poor 175 crore illegal

ಬ್ಯಾಂಕ್‌ನ ಮ್ಯಾನೇಜರ್‌ ಅಕ್ರಮವಾಗಿ ಚಾಲ್ತಿ ಖಾತೆಗಳನ್ನು ತೆಗೆಯುವ ಮೂಲಕ ವಂಚಕರೊಂದಿಗೆ ಶಾಮೀಲಾಗಿದ್ದ ಎನ್ನುವ ವಿಷಯವು ಇದೀಗ ಅಲ್ಲಿನ ಪೊಲೀಸರು ಪತ್ತೆ ಮಾಡಿದ್ದಾರೆ. ಎಸ್‌ಬಿಐನ ಬ್ಯಾಂಕ್‌ನ ಮ್ಯಾನೇಜರ್‌ ಮಧು ಬಾಬು ಗಾಲಿ ಕರೆಂಟ್‌ ಅಕೌಂಟ್ ಗಳನ್ನು ತೆಗೆದು ಅದರಲ್ಲಿ ಹಣ ಹಾಕುವುದು ಹಾಗೂ ವಿಡ್ರಾ ಮಾಡುವುದು ಸೇರಿದಂತೆ ಅಕ್ರಮ ವಹಿವಾಟಿನಲ್ಲಿ ಭಾಗಿಯಾಗಿದ್ದ.

ಈ ಅಕ್ರಮಗಳನ್ನು ಎಸಗಿ ಸಹಕಾರ ನೀಡಿದ್ದಕ್ಕಾಗಿ ಆತ ಈ ಅಕ್ರಮವನ್ನು ನಡೆಸುತ್ತಿದ್ದವರಿಂದ ಭಾರೀ ಮೊತ್ತದಲ್ಲಿ ಕಮಿಷನ್‌ ಪಡೆದುಕೊಳ್ಳುತ್ತಿದ್ದ ಎನ್ನುವ ವಿಷಯ ಸಹ ಇದೀಗ ಬಹಿರಂಗವಾಗಿದೆ. ಭಾರೀ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇದೀಗ ಎಸ್‌ಬಿಐನ ಬ್ಯಾಂಕ್‌ನ ಮ್ಯಾನೇಜರ್‌ ಮಧು ಬಾಬು ಗಾಲಿ ಮತ್ತು ಜಿಮ್‌ ಟ್ರೇನರ್ ಉಪಾಧ್ಯ ಸಂದೀಪ್‌ ಶರ್ಮ್‌ ಎನ್ನುವ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಭಾರೀ ಅಕ್ರಮ ಬೆಳಕಿಗೆ ಬಂದಿದ್ದು ಹೇಗೆ ?

ಕರೆಂಟ್‌ ಖಾತೆಗಳಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿರುವ ಅನುಮಾನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸೈಬರ್ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಈ ಅಕ್ರಮ ಬೆಳಕಿಗೆ ಬಂದಿರುವುದು ವರದಿಯಾಗಿದೆ.

ಹೈದರಾಬಾದ್‌ನ ಶಂಶೀಗಂಜ್ ವ್ಯಾಪ್ತಿಯಲ್ಲಿರು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಖಾಶೆಯ ವಹಿವಾಟಿಗೆ ಸಂಬಂಧಿಸಿದಂತೆ ನೂರಾರು ದೂರುಗಳು ದಾಖಲಾಗಿದ್ದವು. ಈ ಬ್ಯಾಂಕ್‌ನಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಎನ್‌ಸಿಆರ್‌ ಪಿ ಪೋರ್ಟ್‌ನಲ್ಲಿ ನೂರಾರು ದೂರುಗಳು ದಾಖಲಾಗಿದ್ದವು.

ಈ ರೀತಿ ಸಾಲು ಸಾಲು ದೂರುಗಳು ದಾಖಲಾದ ಬೆನ್ನಲ್ಲೇ ಸೈಬರ್ ಸೆಕ್ಯೂರಿಟಿ ಬ್ಯೂರೋ ಅಲರ್ಟ್ ಆಗಿದ್ದು, ಈ ಬ್ಯಾಂಕ್‌ನಲ್ಲಿ ಯಾವೆಲ್ಲ ದೂರುಗಳು ದಾಖಲಾಗಿದೆ. ಇಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ. ಅಲ್ಲದೇ ಈ ಬ್ಯಾಂಕ್‌ನ ನಿರ್ದಿಷ್ಟ ಖಾತೆಗಳಿಗೆ ಸಂಬಂಧಿಸಿದಂತೆ 600ಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ವರದಿಯಾಗಿದೆ.

ವಿದೇಶದಿಂದ ಕಾರ್ಯಾಚರಣೆ

ಈ ಬೃಹತ್‌ ಮೊತ್ತದ ಅಕ್ರಮ ಬ್ಯಾಂಕ್‌ ವಹಿವಾಟಿನ ಹಿಂದೆ ವಿದೇಶಿ ಕೈವಾಡ ಸಹ ಇದೆ ಎನ್ನುವ ಅನುಮಾನ ಮೂಡಿತ್ತು ಅದನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ವಂಚನೆಯಲ್ಲಿ ಭಾಗಿಯಾದವರು ದುಬೈನಿಂದ ಕಾರ್ಯಾಚರಣೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಬಡವರಿಗೆ ಕಮಿಷನ್‌ ನೀಡುವ ಆಸೆ ತೋರಿಸಿ ಅವರ ಖಾತೆಗಳ ಮೂಲಕವೂ ಅಕ್ರಮ ಹಣ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+