ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಕೊರೊನಾಘಾತ!, 484 ಡೇಂಜರ್ ಜೋನ್ಸ್!

|
Google Oneindia Kannada News

ಬೆಂಗಳೂರು, ಜೂನ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಕಂಟೇನ್ಮೆಂಟ್ ಜೋನ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಬಿಎಂಪಿ ವಾರ್ ರೂಮ್ ಮಾಹಿತಿಯಂತೆ ಸೋಮವಾರದ ಎಣಿಕೆಯಂತೆ 484 ಕಂಟೇನ್ಮೆಂಟ್ ಜೋನ್ ಗಳನ್ನು ಗುರುತಿಸಲಾಗಿದೆ.

Recommended Video

Karnataka Lockdown? ಲಾಕ್ ಡೌನ್ ಎದುರಿಸಲು ಕರ್ನಾಟಕ ರಾಜ್ಯ ಎಲ್ಲಾ ರೀತಿಯಲ್ಲೂ ರೆಡಿ | Oneindia Kannada

ಕೊವಿಡ್ 19 ರೋಗ ಲಕ್ಷಣಗಳಿಲ್ಲದವರಿಗೂ ಸೋಂಕು ತಗುಲಿರುವುದು ಆತಂಕ ಹೆಚ್ಚಿಸಿದೆ. ILI, SARI ಲಕ್ಷಣಗಳಿರುವವರಿಗೆ (ಶೇ 32) ಕೊರೊನಾಸೋಂಕು ತಗುಲುತ್ತಿದೆ.

ಭಾರತದಲ್ಲಿ ಕೊರೊನಾವೈರಸ್ ನಿಂದ ಒಟ್ಟು 14,011 ಮಂದಿ ಸಾವುಭಾರತದಲ್ಲಿ ಕೊರೊನಾವೈರಸ್ ನಿಂದ ಒಟ್ಟು 14,011 ಮಂದಿ ಸಾವು

ಬೆಂಗಳೂರು ನಗರ ಸೇರಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸೀಲ್ ಡೌನ್ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮುಂದಿನ 15 ದಿನಗಳು ಈ ನಿಟ್ಟಿನಲ್ಲಿ ಮಹತ್ವದಾಗಿವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ.

The List Of Containment Zones In Bengaluru Now Rises To 484 With 126 New Cases

ಬೆಂಗಳೂರು ನಗರದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 1405ಕ್ಕೆ ಏರಿಕೆಯಾಗಿದೆ. 965 ಸಕ್ರಿಯ ಪ್ರಕರಣಗಳಿವೆ, 378 ಮಂದಿ ಗುಣಮುಖರಾಗಿದ್ದು, ಒಟ್ಟಾರೆ 65 ಮಂದಿ ಮೃತರಾಗಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿನಿಂದ ಮೃತಪಡುವ ಪ್ರಮಾಣ ಶೇ 5ಕ್ಕೇರಿರುವುದು ಈಗ ಅತ್ಯಂತ ಆಘಾತಕಾರಿಯಾಗಿದೆ.

ಕಳೆದ 24 ಗಂಟೆಗಳು
ಒಟ್ಟು ಸೋಂಕಿತ ಪ್ರಕರಣಗಳು : 126
ಗುಣಮುಖರಾದವರು : 00
ಒಟ್ಟು ಸಾವಿನ ಪ್ರಕರಣಗಳು : 01

ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿ ಹೆಚ್ಚಾಗುತ್ತಿರುವುದರಿಂದ ಪ್ರತ್ಯೇಕ ಐಸೋಲೇಷನ್ ವಾರ್ಡ್, ಸಂಪರ್ಕಿತರ ಕ್ವಾರಂಟೈನ್ ಘಟಕ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸೋಂಕಿತರಿಗೆ ಅವರ ಮನೆಯಲ್ಲೇ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡರೆ ಮನೆಯಲ್ಲೇ ಚಿಕಿತ್ಸೆ ಪಡೆಯಿರಿ, ರೋಗ ಲಕ್ಷಣವಿಲ್ಲದವರಿಗೂ ಸೋಂಕು ಕಾಣಿಸಿಕೊಂಡರೂ ಒಂದು ವಾರದ ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ ಎಂದು ಬಿಬಿಎಂಪಿ ಹೇಳಿದೆ.

English summary
The number of COVID-19 containment zones in Bengaluru rose to 484 as on Monday(June 22) according to statistics shared by the BBMP Covid-19 War Room.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X