Meetoo in politics: ರಾಜಕಾರಣಿಗಳಿಗೂ ಕಾದಿದ್ಯಾ ಮೀಟೂ ಸಂಕಟ?
Meetoo in politics: ಕನ್ನಡ ಚಿತ್ರರಂಗದ ನಂತರ, ರಾಜಕೀಯ ವಲಯದಲ್ಲೂ ಮೀಟೂ ಸದ್ದು ಪ್ರಾರಂಭವಾಗುವ ಎಲ್ಲಾ ಮುನ್ಸೂಚನೆಗಳೂ ಕಾಣಿಸುತ್ತಿವೆ. ಅಮೆರಿಕಾದಲ್ಲಿ (United States) ಪ್ರಾರಂಭವಾದ ಈ ಅಭಿಯಾನ ವಿಶ್ವದಾದ್ಯಂತ ಇಂದಿಗೂ ಮುಂದುವರಿದಿದೆ. ಈಚೆಗೆ ನೆರೆಯ ಕೇರಳದಲ್ಲಿ ಮೀಟೂ, ಲೈಂಗಿಕ ಶೋಷಣೆಯ ಆರೋಪಗಳು ಹೆಚ್ಚಾಗಿವೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ಹೇಮಾ ಕಮಿಟಿ ಮಾದರಿಯ ಕಮಿಟಿಯನ್ನು ರಚನೆ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಇನ್ನು ಈ ಮೀಟೂ ಅಭಿಯಾನ ಇದೀಗ ಚಿತ್ರರಂಗದಿಂದ ರಾಜಕೀಯ ರಂಗಕ್ಕೂ ವ್ಯಾಪಿಸುವ ಲಕ್ಷಣಗಳು ಕಾಣಿಸುತ್ತಿದೆ.
ರಾಜಕೀಯದಲ್ಲೂ ಸದ್ದು ಮಾಡಲಿದೆಯೇ ಮೀಟೂ ?
ಸಿನಿಮಾ ರಂಗದಲ್ಲಿ ಮೀಟೂ ಸದ್ದು ಜೋರಾಗಿದೆ. ನೆರೆಯ ಕೇರಳದಲ್ಲಿ ಸ್ಟಾರ್ ನಟರ ಮೇಲೆಯೇ ಆರೋಪ ಕೇಳಿ ಬಂದಿದ್ದು. ಅಲ್ಲಿನ ಜನ ಬೆಚ್ಚಿಬಿದಿದ್ದಾರೆ. ಕೆಲವು ಸ್ಟಾರ್ ನಟರ ಮೇಲೆ ಆರೋಪ ಕೇಳಿ ಬಂದಿದ್ದು. ಈ ನಟರನ್ನೇ ಬೆಂಬಲಿಸುತ್ತಿದ್ದ ಅಭಿಮಾನಿಗಳಿಗೆ ಆಘಾತವಾಗಿದೆ. ಕನ್ನಡ ಚಿತ್ರರಂಗದಲ್ಲೂ ಈ ಹಿಂದೆಯೇ ಮೀಟೂ ಆರೋಪಗಳು ಕೇಳಿ ಬಂದಿದ್ದವು. ಆದರೆ, ರಾಜಕೀಯದಲ್ಲಿ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ ಮೇಲ್‌ನಂತಹ ಪ್ರಕರಣಗಳು ಮಾತ್ರ ಹೆಚ್ಚು ವರದಿಯಾಗುತ್ತಿತ್ತು. ರಾಜಕೀಯದಲ್ಲಿ ಮೀಟೂ ಪ್ರಕರಣಗಳ ಬಗ್ಗೆ ಯಾರಾದರು ಮಾತನಾಡಿದ್ದಾರೆ ಎನ್ನುವುದು ತೀರ ವಿರಳಾತಿ ವಿರಳ.

ಸಿನಿಮಾರಂಗದಂತೆಯೇ ರಾಜಕೀಯದಲ್ಲೂ ಹಲವು ಒಳಸುಳಿಗಳು ಇವೆ. ಮುಖ್ಯವಾಗಿ ಅಧಿಕಾರ ಹಾಗೂ ಹಣ ಬಲ ಕೇಂದ್ರವಾಗಿರುವ ಕ್ಷೇತ್ರ ರಾಜಕೀಯ. ರಾಜಕೀಯವಾಗಿ ಗುರುತಿಸಿಕೊಳ್ಳಲು (ಬೆಳೆಯಲು) ಹಾಗೂ ಟಿಕೆಟ್ ನೀಡುವುದು ಸೇರುವಂತೆ ಹಲವು ಅಡೆತಡೆಗಳು ರಾಜಕೀಯದಲ್ಲಿ ಇದೆ. ಈ ಹಂತಗಳಲ್ಲಿ ತೆರೆಯ ಹಿಂದೆ ಮಹಿಳೆಯರಿಗೆ ಸಮಸ್ಯೆ ಆಗುತ್ತಿದೆಯೇ ಎನ್ನುವುದು ಇಂದಿಗೂ ಗೌಪ್ಯವಾಗಿಯೇ ಉಳಿದಿದೆ. ಇದಕ್ಕೆ ಸೂಕ್ತ ವೇದಿಕೆ ಅಥವಾ ಆತಂರಿಕ ಸಮಿತಿಗಳು ಇಲ್ಲದೆ ಇರುವುದು. ಇಲ್ಲವೇ ಆತಂರಿಕ ಸಮಿತಿ ಇದ್ದರೂ ಅದು ತನ್ನ ಮಿತಿಯಲ್ಲಿ ಕೆಲಸ ಮಾಡುವುದು ಸಹ ಕಾರಣವಾಗಿರಬಹುದು. ಇದೀಗ ರಾಜಕೀಯ ಪಕ್ಷಗಳಲ್ಲೂ ಆತಂರಿಕ ಸಮಿತಿ ರಚನೆಯಾಗಬೇಕು. ಮಹಿಳೆಯರು ಶೋಷಣೆಗೆ ಒಳಗಾದರೆ ಯಾವುದೇ ಕ್ಷೇತ್ರವಾದರೂ ಅಲ್ಲಿ ಮಹಿಳೆಯರು ವಿರೋಧಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ಹೇಳಿಕೆ ಪರೋಕ್ಷವಾಗಿ ರಾಜಕೀಯದ ಮೀಟೂ ಪ್ರಕರಣಗಳು ಹೊರ ಬರುವುದುಕ್ಕೆ ವೇದಿಕೆ ಕಲ್ಪಿಸುತ್ತಿದೆ.
ರಾಜಕೀಯ ಪಕ್ಷಗಳೂ ದೂರು ಸಮಿತಿ ರಚಿಸಲಿ
ಸಿನಿಮಾ ರಂಗದಲ್ಲಿ ಮಾತ್ರವಲ್ಲ ರಾಜಕೀಯ ಪಕ್ಷಗಳಲ್ಲೂ ಆಂತರಿಕ ದೂರು ಸಮಿತಿಯನ್ನು ರಚಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ಸಿ. ಮಂಜುಳಾ ಆಗ್ರಹಿಸಿದ್ದಾರೆ. ರಾಜಕೀಯಕ್ಕೆ ಬರುವ ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾದರೆ, ಯಾವುದೇ ಮುಲಾಜಿಲ್ಲದೆ ಬಹಿರಂಗವಾಗಿ ವಿರೋಧಿಸಬೇಕು. ರಾಜಕೀಯ ಪಕ್ಷಗಳು ಬೆಳೆಯುತ್ತಾ ಹೋದಂತೆ ರಾಜಕೀಯ ಪಕ್ಷಗಳಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಆಗ ಎಲ್ಲಾ ರೀತಿಯ ಜನರೂ ಬರುತ್ತಾರೆ. ಆದರೆ, ಶೋಷಣೆಯಾದರೆ ಮಹಿಳೆಯರು ಪ್ರತಿರೋಧವೊಡ್ಡಬೇಕು. ಇಲ್ಲದಿದ್ದರೆ, ತಮಗೆ ತಾವೇ ಅನ್ಯಾಯ ಮಾಡಿಕೊಂಡಂತಾಗುತ್ತದೆ. ಸಿನಿಮಾ ರಂಗದಲ್ಲೂ ಮಹಿಳೆಯರ ಲೈಂಗಿಕ ಕಿರುಕುಳ ತಡೆ ಸಮಿತಿಯನ್ನು ರಚನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಮೂಲಕ ಮೀಟೂ ಪ್ರಕರಣ ಅಥವಾ ಶೋಷಣೆಗೆ ಒಳಗಾದ ಮಹಿಳೆಯರು ಇನ್ನು ಮುಂದೆ ಬಹಿರಂಗವಾಗಿ ಮಾತನಾಡುವಂತೆ ಧೈರ್ಯ ತುಂಬಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ರಾಜಕೀಯ ರಂಗದಿಂದಲೂ ಮೀಟೂ ಪ್ರಕರಣಗಳು ಹೊರ ಬರುವ ಎಲ್ಲಾ ಸಾಧ್ಯತೆ ಗೋಚರಿಸುತ್ತಿದೆ.












Click it and Unblock the Notifications