ಬೆಂಗಳೂರು ಸ್ಕೂಲ್ ನಲ್ಲಿ ವಾರ್ಷಿಕೋತ್ಸವ ಸಂಭ್ರಮ
ಬೆಂಗಳೂರು, ಏಪ್ರಿಲ್ 2 , 2014: ದಿ ಬೆಂಗಳೂರು ಸ್ಕೂಲ್ ವಾರ್ಷಿಕ ದಿನಾಚರಣೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈಸ್ಟ್ ಮೀಟ್ಸ್ ವೆಸ್ಟ್ ಹೆಸರಿನ ಈ ಕಾರ್ಯಕ್ರಮ ಮಕ್ಕಳು, ಹೆತ್ತವರ ಮನಸೆಳೆಯಿತು.
ಪುಟ್ಟ ಪುಟ್ಟ ಮಕ್ಕಳು ಬಾಲಿವುಡ್ ಹಾಡಿಗೆ ತಮ್ಮದೇ ಶೈಲಿಯಲ್ಲಿ ಡ್ಯಾನ್ಸ್ ಮಾಡಿ ಬಂದ ಅತಿಥಿಗಳನ್ನು ಖುಷಿಪಡಿಸಿದರು. ಭಾರತ ಎಷ್ಟು ವಿಭಿನ್ನವಾದ ದೇಶ ಮತ್ತು ಇದನ್ನು ಎಷ್ಟು ಕೆಟ್ಟದಾಗಿ ಉಳಿದ ದೇಶದವರು ಬಿಂಬಿಸುತ್ತಿದ್ದಾರೆ ಎಂಬ ವಿಷಯಗಳನ್ನು ನೃತ್ಯದ ಮೂಲಕ ಮಕ್ಕಳು ತೋರಿಸಿದರು. ಇನ್ನು ಕಾರ್ಯಕ್ರಮದ ಕೊನೆಗೆ ಭಾರತದ ಬಾವುಟದೊಂದಿಗೆ ನಡೆದುಬಂದ ಮಹಾತ್ಮ ಗಾಂಧಿಜಿಗೆ ಚಪ್ಪಾಳೆಯ ಸ್ವಾಗತ ಸಿಕ್ಕಿತು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದಿ ಬೆಂಗಳೂರು ಸ್ಕೂಲ್ ಟೀಚರ್ ಗಳೂ ಮಿಲೆ ಸುರ್ ಮೇರಾ ತುಮ್ಹಾರ ಹಾಡಿಗೆ ಹೆಜ್ಜೆ ಹಾಕಿದರು. ಅವರು ಧರಿಸಿದ್ದ ಕಾಮನಬಿಲ್ಲಿನ ಬಣ್ಣದ ಬಟ್ಟೆ ವಿವಿಧತೆಯಲ್ಲಿ ಏಕತೆಯನ್ನು ಸಾರುವಲ್ಲಿ ಯಶಸ್ವಿಯಾಯಿತು.

ಶಾಂತಿ ಮೆನನ್, ಪ್ರಿನ್ಸಿಪಾಲ್, ಡೀನ್ಸ್ ಅಕಾಡೆಮಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಶ್ರೀಮತಿ ಅನಾಬೆಲ್ಲಾ ಮ್ಯಾನ್‍ವಾರಿಂಗ್, ಡಿಪಿಸ್ ಡೈರೆಕ್ಟರ್ ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದಿ ಬೆಂಗಳೂರು ಸ್ಕೂಲ್ ಡೈರೆಕ್ಟರ್ ಉಷಾ ಮೋಹನ್ ತಮ್ಮ ತಂಡದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. (ಒನ್ಇಂಡಿಯಾ ಕನ್ನಡ)












Click it and Unblock the Notifications