ಬೆಂಗಳೂರಿನ ಈಜೀಪುರ ಮೇಲ್ಸೇತುವೆ ಬಗ್ಗೆ ವ್ಯಂಗ್ಯವಾಡಿದ ತೆಲಂಗಾಣ ಶಾಸಕ ಕೆಟಿಆರ್!
ಕಳೆದ ಕೆಲವು ತಿಂಗಳುಗಳಿಂದ ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ಬೆಂಗಳೂರು ಅಭಿವೃದ್ಧಿ ಹಾಗೂ ಬೆಂಗಳೂರು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಬೆಂಗಳೂರಿನ ವಿಚಾರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿತ್ತು. ಈ ಅವಕಾಶವನ್ನು ಆಂಧ್ರಪ್ರದೇಶ ಸರ್ಕಾರವು ಸಮರ್ಥಕವಾಗಿ ಬಳಸಿಕೊಂಡಿತ್ತು. ಆದರೆ ಕರ್ನಾಟಕ ಸರ್ಕಾರವು ಸಹ ತೀಕ್ಷ್ಣವಾಣ ಪ್ರತಿಕ್ರಿಯೆಗಳನ್ನೇ ನೀಡಿತ್ತು. ಇದೀಗ ಆಂಧ್ರಪ್ರದೇಶದ ನಂತರ ತೆಲಂಗಾಣ ರಾಜಕಾರಣಿಗಳ ಸರದಿ ಎನ್ನುವಂತಿದೆ.
ದಶಕಗಳಿಂದ ಬೆಂಗಳೂರು ಹಾಗೂ ಹೈದರಾಬಾದ್‌ನ ನಡುವೆ ತೀವ್ರ ಪೈಪೋಟಿ ಇದೆ. ಅದರಲ್ಲೂ ಐಟಿ - ಬಿಟಿ ವಿಚಾರವಾಗಿ ಎರಡೂ ರಾಜ್ಯಗಳ ಪ್ರಮುಖ ನಗರಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಆಂಧ್ರಪ್ರದೇಶದಲ್ಲಿ ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷಕ್ಕೆ ಹಿನ್ನಡೆ ಆಗಿತ್ತು. ತೆಲಂಗಾಣದಲ್ಲಿ ಈಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಇದೀಗ ಬಿಆರ್ಎಸ್ ಕಾರ್ಯಾಧ್ಯಕ್ಷ ಮತ್ತು ಶಾಸಕ ಕೆ.ಟಿ. ರಾಮರಾವ್ ಅವರು ಬೆಂಗಳೂರಿನ ಈಜೀಪುರ ಮೇಲ್ಸೇತುವೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಯು ಬರೋಬ್ಬರಿ 8 ವರ್ಷಗಳಿಂದ ನಡೆಯುತ್ತಿದೆ. ಈ ಯೋಜನೆಯ ವಿಳಂಬಕ್ಕೆ ಬೆಂಗಳೂರಿಗರು ಆಕ್ರೋಶ ವ್ಯಕ್ತಪಡಿಸಿರುವುದು ಇದೆ. ಈ ಯೋಜನೆಯ ಕಾರಣಕ್ಕೆ ಬೆಂಗಳೂರು ರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿರುವುದು ಸಹ ಇದೆ ಕೆ.ಟಿ. ರಾಮರಾವ್ (ಕೆಟಿಆರ್) ಬೆಂಗಳೂರು - ಹೈದರಾಬಾದ್ ನಡುವಿನ ಅಭಿವೃದ್ಧಿ ವಿಚಾರವಾಗಿ ಟಾಂಗ್ ಕೊಡುವ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಈಜೀಪುರ ಮೇಲ್ಸೇತುವೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕೆಟಿಆರ್, ಹೈದರಾಬಾದ್‌ನಲ್ಲಿ ಇದೇ (8 ವರ್ಷದಲ್ಲಿ) ಅವಧಿಯಲ್ಲಿ ನಾವು 32 ಫ್ಲೈಓವರ್‌ಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ಹೇಳಲು ಹೆಮ್ಮೆಪಡುತ್ತೇವೆ. SRDP (Special Rate Disability Pension) ಕಾರ್ಯತಂತ್ರದ ರಸ್ತೆ ಅಭಿವೃದ್ಧಿ ಕಾರ್ಯಕ್ರಮವು ಮೂಲಸೌಕರ್ಯವನ್ನು ಹೆಚ್ಚಿಸಲು ಕೆಸಿಆರ್ ಸರ್ಕಾರದ ಪ್ರಮುಖ ಯೋಜನೆಯಾಗಿತ್ತು. ಅಲ್ಲದೇ COVID-19ರ ನಡುವೆಯೂ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
Proud to say that in Hyderabad in the same timeframe, we have completed 32 Flyovers
— KTR (@KTRBRS) October 28, 2025
SRDP; Strategic Road Development Program was a flagship project of KCR Govt to ramp up infrastructure and it was executed even in the midst of COVID-19 with great success https://t.co/a5phvF05M7
ಸೋಷಿಯಲ್ ಮೀಡಿಯಾದಲ್ಲಿ THE SKIN DOCTOR ಎನ್ನುವ ಖಾತೆಯಿಂದ ಮಾಡಲಾಗಿದ್ದ ಟ್ವೀಟ್‌ಗೆ ಅವರು ರಿಯಾಕ್ಟ್ ಮಾಡಿದ್ದಾರೆ. ಇನ್ನು ಈ ಖಾತೆಯಿಂದ "ಇದು ಬೆಂಗಳೂರಿನಲ್ಲಿರುವ ಈಜಿಪುರ ಫ್ಲೈಓವರ್ 2017 ರಿಂದ ನಿರ್ಮಾಣ ಹಂತದಲ್ಲಿದೆ, 8 ವರ್ಷಗಳ ನಂತರವೂ ಅಪೂರ್ಣವಾಗಿದೆ. ಯುಎಇ ಬುರ್ಜ್ ಖಲೀಫಾವನ್ನು 5 ವರ್ಷಗಳಲ್ಲಿ ನಿರ್ಮಿಸಲಾಯಿತು. ಯುಎಸ್ 7 ವರ್ಷಗಳಲ್ಲಿ ವಿಶ್ವ ವ್ಯಾಪಾರ ಕೇಂದ್ರವನ್ನು ಪುನರ್ನಿರ್ಮಿಸಿತು. ಚೀನಾ ಮೀನುಗಾರಿಕಾ ಹಳ್ಳಿಯಿಂದ ಶೆನ್ಜೆನ್ ಅನ್ನು 7 ವರ್ಷಗಳಲ್ಲಿ ಕೈಗಾರಿಕಾ ನಗರವನ್ನಾಗಿ ಪರಿವರ್ತಿಸಿತು. ಇಲ್ಲಿ ನಾವು ಸುಮಾರು ಒಂದು ದಶಕದಲ್ಲಿ ಒಂದು ಫ್ಲೈಓವರ್ ಅನ್ನು ಸಹ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ವಿಪರ್ಯಾಸವೆಂದರೆ ಇಷ್ಟೆಲ್ಲಾ ವಿಳಂಬದ ನಂತರ, ಅಂತಿಮವಾಗಿ ನಿರ್ಮಿಸಲಾದ ಎಲ್ಲವೂ ಕೆಲವೇ ವರ್ಷಗಳವರೆಗೆ ಇರುತ್ತದೆ" ಎಂದು ಹೇಳಲಾಗಿದೆ.












Click it and Unblock the Notifications