ಟೆಕ್ಕಿಯ ಜೀವ ಬಲಿಪಡೆದ ಹೊಸಮನೆಯ ಕನಸು: ಮಾನಸಿಕ ಕಿರಕುಳ ಸಹಿಸದೇ ಡೆತ್‌ನೋಟ್ ಬರೆದಿಟ್ಟು ಸಾವು!
ಬೆಂಗಳೂರು, ಡಿಸೆಂಬರ್ 04: ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಬೇಕು ಎಂದುಕೊಳ್ಳುವುದು ಅದೆಷ್ಟೋ ಜನರು, ಉದ್ಯೋಗಿಗಳ ಕನಸಾಗಿರುತ್ತದೆ. ಅದೇ ರೀತಿ ಇಲ್ಲೊಬ್ಬ ಟೆಕ್ಕಿ ಮನೆ ಕಟ್ಟುವ ಕನಸು ನನಸಾಗುವ ಮೊದಲೇ ಇಹಲೋಕ ತ್ಯೆಜಿಸಿದ್ದಾನೆ. ಸಾವಿಗೆ ನೆರೆಹೊರೆಯವರು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಕೆಲ ಅಧಿಕಾರಿಗಳು ಕಾರಣವೆಂದು ಮೃತ ಟೆಕ್ಕಿ ವಿವರವಾದ ಡೆತ್‌ನೋಟ್ ಬರೆದಿಟ್ಟಿದ್ದಾರೆ.
ನೆರೆಹೊರೆಯವರ ನಿರಂತರ ಒತ್ತಡದಿಂದ ಮಾನಸಿಕವಾಗಿ ಜರ್ಜರಿತವಾಗಿದ್ದ ಟೆಕ್ಕಿ ಜಿಬಿಎ ಅಧಿಕಾರಿಗಳಿಂದ ಬರಲಿದ್ದ ನೋಟಿಸ್ ಗೆ ಹೆದರಿ ತಾನು ಕಟ್ಟುತ್ತಿದ್ದ ಮನೆಯ ಎರಡನೇ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ನಲ್ಲೂರಹಳ್ಳಿಯಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ 10 ಪುಟಗಳ ಡೆತ್‌ನೋಟ್ ಬರೆದಿಟ್ಟು ಸಾವಿಗೀಡಾಗಿದ್ದಾರೆ ಎಂದು ವರದಿ ಆಗಿದೆ.

ಟೆಕ್ಕಿಯ ಜೀವ ತೆಗೆದ ಹೊಸಮನೆಯ ಕನಸು, ಆಗಿದ್ದೇನು?
ಮುರಳಿ ಗೋವಿಂದರಾಜು ಮೃತ 45 ವರ್ಷದ ಟೆಕ್ಕಿ. ನೆರೆ ಹೊರೆಯವರ ಕಿರುಕುಳ, ಅಧಿಕಾರಿಗಳ ಹಣದ ಬೇಡಿಕೆ ಕಾರಣದಿಂದ ಆತನ ಮಾನಸಿಕವಾಗಿ, ಆರ್ಥಿಕವಾಗಿ ಕುಗ್ಗಿದ್ದಾನೆ. ಆತನ ಆಂತರಿಕ ಬಲ ಕುಗ್ಗಿಸಲಾಗಿದೆ. ಆತನ ಸಾವಿಗೆ ಇದೇ ಪ್ರೇರಣೆ ಎಂದು ಮೃತ ಟೆಕ್ಕಿ ಮುರಳಿ ತಾಯಿ ಕ್ರಿಮಿನಲ್ ದೂರು ನೀಡಿದ್ದಾರೆ. ನೆರೆಹೊರೆಯವರು ವಿರುದ್ಧ ದೂರು ದಾಖಲಾಗಿದೆ.
ಮುರಳಿ ಗೋವಿಂದರಾಜು ಅವರಿಗೆ ಅಪ್ರಾಪ್ತ ಮಕ್ಕಳಿದ್ದಾರೆ. ಅವರು ಐಟಿಪಿಎಲ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು, ವೈಟ್‌ಫೀಲ್ಡ್‌ನ ಬ್ರೂಕ್‌ಬಾಂಗ್ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. ದೂರಿನ ಪ್ರಕಾರ, ಪೊಲೀಸರು ಟೆಕ್ಕಿ ಹೊಸ ಮನೆಯ ನೆರೆಹೊರೆಯವರಾದ ಶಶಿ ನಂಬಿಯಾರ್ (64) ಮತ್ತು ಉಷಾ (57) ಅವರನ್ನು ಸಾವಿಗೆ ಪ್ರಚೋದನೆ ಆರೋಪದ ಮೇಲೆ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಶಶಿಯವರ ಮಗ ವರುಣ್‌ಗಾಗಿ ಶೋಧ ನಡೆಸಲಾಗಿದೆ. ಈ ನಂಬಿಯಾರ್ ದಂಪತಿಯನ್ನು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಅಧಿಕಾರಿಗಳಿಂದ 20ಲಕ್ಷ ರೂ.ಗೆ ಬೇಡಿಕೆ?
ನಲ್ಲೂರಹಳ್ಳಿಯಲ್ಲಿ ಹೊಸ ಮನೆ ಕಟ್ಟುತ್ತಿದ್ದ ಟೆಕ್ಕಿಯ ಮನೆ ನಿರ್ಮಾಣಕ್ಕೆ ಅಕ್ಕಪಕ್ಕದವರ ಪೈಕಿ ಈ ನಂಬಿಯಾರ್ ಅವರ ಕುಟುಂಬ ಕಿರಕುಳ ನೀಡಿದೆ. ನೆರೆಹೊರೆಯವರ ನಿರಂತರ ಕಿರುಕುಳಕ್ಕೆ ಅವರು ಬೇಸತ್ತಿದ್ದರು. ಈ ಮಧ್ಯೆ ಜಿಬಿಎ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಈ ಸಂಬಂಧ ಪಾಲಿಕೆಯಿಂದ ನೋಟಿಸ್ ಬರುವುದರಲ್ಲಿತ್ತು. ಅದಕ್ಕೆ ಹೆದರಿದ್ದ ಟೆಕ್ಕಿಗೆ ನಾಗರಿಕ ಸಂಸ್ಥೆಯ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದೀರಿ ಎಂದು 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಜಿಬಿಎ ಅಧಿಕಾರಿಗಳ ಮುಂದೆ ಹಾಜರಾಗುವ ಕೆಲವು ಗಂಟೆಗಳ ಮೊದಲೇ ತನ್ನ ನಿರ್ಮಾಣ ಹಂತದ ಹೊಸ ಮನೆಯಲ್ಲಿಯೇ ಟೆಕ್ಕಿ ನೇಣಿಗೆ ಕೊರಳೊಡಿದ್ದಾರೆ.
ಪೊಲೀಸರು ಡೆತ್ ನೋಟ್ ನಲ್ಲಿರುವ ಮಾಹಿತಿ ಹಾಗೂ ಮೃತ ತಾಯಿಯು ನೀಡಿರುವ ದೂರಿನ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ನಂಬಿಯಾರ್‌ಗಳ ಹತ್ತಿರದ ಸಂಬಂಧಿಯಾಗಿರುವ ಟೆಕ್ಕಿ 2018 ರಲ್ಲಿ ಅವರ ಮನೆ ಪಕ್ಕದಲ್ಲಿ 40x60 ಚದರ ಅಡಿ ಜಾಗ ಖರೀದಿಸಿದ್ದರು. ನಿರ್ಮಾಣ ಪ್ರಾರಂಭವಾದ ಕೂಡಲೇ ಸಂಬಂಧ ಹದಗೆಟ್ಟಿತ್ತು. ಅವರ ಮನೆ ನಿರ್ಮಾಣ ಕಂಡು ಉಷಾ ಮತ್ತು ಶಶಿ ವಿಚಲಿತರಾಗಿದ್ದರು. ಬಿಬಿಎಂಪಿ ಅಧಿಕಾರಿಗಳಿಗೆ ಕ್ಲುಲ್ಲಕ ಕಾರಣಕ್ಕೆ ದೂರು ನೀಡಿದ್ದರು. ಅಧಿಕಾರಿಗಳು ಆಗಾಗ ಹೊಸ ಮನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಿರುಕುಳ ನೀಡುತ್ತಿದ್ದರು ಎಂದು ಟೆಕ್ಕೆ ತಾಯಿ ಆರೋಪಿಸಿದ್ದಾರೆ.
ಸಾವಿನ ದಿನ ವಾಸಸ್ಥಳದ ಮನೆಯಿಂದ ಹೊರಡುವಾಗ ತನಗೆ ಹಿಂಸೆ ನೀಡುತ್ತಿದ್ದಾರೆ. ತಾನು ಒತ್ತಡದಲ್ಲಿರುವುದಾಗಿ ತಿಳಿಸಿದ್ದರು. ಅಧಿಕಾರಿಗಳು ಹಾಗೂ ನೆರೆ ಮನೆಯವ ಬಗ್ಗೆ ತಾಯಿ ಬಳಿ ಟೆಕ್ಕಿ ಪ್ರಸ್ತಾಪಿಸಿದ್ದರು. ಬಳಿಕ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
-
ಬೆಂಗಳೂರು ಉತ್ತರ: ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ, ರಸ್ತೆ ಅಗಲೀಕರಣ, ಟಿ.ಡಿ.ಆರ್ ಬಗ್ಗೆ ಮಹತ್ವದ ಚರ್ಚೆ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications