ಬೆಂಗಳೂರು : ವಾಕಿಂಗ್ ಹೋಗಿದ್ದ ಟೆಕ್ಕಿಗೆ ಕಿರುಕುಳ, ಸೈಕೋ ಬಂಧನ

ಬೆಂಗಳೂರು, ಜೂನ್ 02 : 'ನನ್ನ ಪ್ಯಾಂಟ್‌ ನೊಳಗೆ ಕೈ ಹಾಕು' ಎಂದು ಟೆಕ್ಕಿಗೆ ಕಿರುಕುಳ ಕೊಟ್ಟಿದ್ದ ಸೈಕೋವನ್ನು ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತದ ಯುವತಿಯನ್ನು ಸೈಕೋ ಟಾರ್ಗೆಟ್ ಮಾಡಿದ್ದ.

ಶ್ರೀನಿವಾಸ ರೆಡ್ಡಿ ಎಂಬ ವ್ಯಕ್ತಿಯನ್ನು ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ. ಪಾರ್ಕ್‌ನಲ್ಲಿ ಒಂಟಿಯಾಗಿ ಓಡಾಡುವ ಯುವತಿಯನ್ನು ಟಾರ್ಗೆಟ್ ಮಾಡುತ್ತಿದ್ದ ಈತ, ತನ್ನ ಪ್ಯಾಂಟ್ ನೊಳಗೆ ಕೈ ಹಾಕು ಎಂದು ಕಿರುಕುಳ ನೀಡುತ್ತಿದ್ದ, ಜೀವ ಬೆದರಿಕೆ ಹಾಕುತ್ತಿದ್ದ.

ಜೀವನ್ ಭೀಮಾ ನಗರ, ದೊಮ್ಮಲೂರು, ಹಲಸೂರು, ಇಂದಿರಾ ನಗರದ ಪಾರ್ಕ್‌ಗಳಲ್ಲಿ ಬೆಳಗ್ಗೆ ಕಾಣಿಸಿಕೊಳ್ಳುತ್ತಿದ್ದ ಈಗ ಯುವತಿಯನ್ನು ಟಾರ್ಗೆಟ್ ಮಾಡುತ್ತಿದ್ದ. ಮಾತನಾಡಿರುವ ನೆಪದಲ್ಲಿ ಹತ್ತಿರ ಹೋಗುತ್ತಿದ್ದ ಈಗ ಅವರಿಗೆ ಕಿರುಕುಳ ಕೊಟ್ಟಿದ್ದ.

Techie harassed by psycho arrested

ಕನ್ನಡ ಮಾತನಾಡಲು ಬಾರದ ಉತ್ತರ ಭಾರತದ ಯುವತಿಯನ್ನು ಟಾರ್ಗೆಟ್ ಮಾಡುತ್ತಿದ್ದ ಈತ ಅವರಿಗೆ ಕಿರುಕುಳ ನೀಡುತ್ತಿದ್ದ. ಕೆಲವು ದಿನಗಳ ಹಿಂದೆ ಟೆಕ್ಕಿಗೆ ಕಿರುಕುಳ ಕೊಟ್ಟಿದ್ದ, ಅವರು ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಟೆಕ್ಕಿ ನೀಡಿದ ದೂರಿನ ಅನ್ವಯ ಪೊಲೀಸರು ಶ್ರೀನಿವಾಸ ರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್ 354, 506 ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಈಗ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+