ಬೆಂಗಳೂರು : ಟೆಕ್ಕಿಯ ಹೈಡ್ರಾಮ, ಆತ್ಮಹತ್ಯೆ

ಬೆಂಗಳೂರು, ನ.27 : ಬೆಂಗಳೂರಿನಲ್ಲಿ ಸುಮಾರು ಎರಡೂವರೆ ತಾಸು ಹೈಡ್ರಾಮ ನಡೆಸಿದ ಟೆಕ್ಕಿಯೊಬ್ಬರು ಕೊನೆಗೆ ಯಾರ ಮಾತನ್ನು ಕೇಳದೆ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಆತ್ಮಹತ್ಯೆ ಮಾಡಿಕೊಂಡವರನ್ನು ರಾಜೇಶ್ ಭಂಡಾರಿ (26) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಸಿಂಗಸಂದ್ರದಲ್ಲಿನ ನಿರ್ಮಾಣ ಹಂತದ ಕಟ್ಟಡವೇರಿದ್ದ ಟೆಕ್ಕಿ, ನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲು ಮಾಡಿದೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. [ಫೇಕ್ ಫೇಕ್ 169 ಕಂಪನಿ, 25K ಟೆಕ್ಕಿಸ್]

Singhasandra

ಘಟನೆ ವಿವರ : ಇಂದು ಬೆಳಗ್ಗೆ 7.30ರ ಸುಮಾರಿಗೆ ರಾಜೇಶ್ ಸಿಂಗಸಂದ್ರದಲ್ಲಿನ ನಿರ್ಮಾಣ ಹಂತದ ಬಹುಮಹಡಿ ಕಟ್ಟಡವೇರಿದ್ದಾನೆ. ಇದನ್ನು ಗಮನಿಸಿದ ಕಾರ್ಮಿಕರು ಆತನನ್ನು ತಡೆಯಲು ಮುಂದಾದರು. ಆದರೆ, ಆತ ಕಟ್ಟಡದಿಂದ ಜಿಗಿಯುತ್ತೇನೆ ಎಂದು ಎಲ್ಲರನ್ನೂ ಬೆದರಿಸಿ ಐದನೇ ಮಹಡಿಗೆ ತಲುಪಿದ. [ಟಿಸಿಎಸ್ ಟೆಕ್ಕಿ ಕೊಂದು, ಕಾರಿನೊಂದಿಗೆ ಪರಾರಿ]

ಕಾರ್ಮಿಕರು ಪೊಲೀಸರಿಗೆ ವಿಷಯ ಮುಟ್ಟಿಸಿದರು ಸ್ಥಳಕ್ಕೆ 8 ಗಂಟೆಗೆ ಆಗಮಿಸಿದ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳದಂತೆ ರಾಜೇಶ್ ಮನವೊಲಿಸಿದರು. ಪೊಲೀಸರು ಬಂದ ನಂತರ ನಾಲ್ಕನೇ ಮಹಡಿಗೆ ಆಗಮಿಸಿದ ರಾಜೇಶ್ ಅಲ್ಲಿಂದ ಕೆಳಗೆ ಹಾರುತ್ತೇನೆ ಎಂದು ಸುಮಾರು ಎರಡೂವರೆ ಗಂಟೆ ಹೈಡ್ರಾಮ ನಡೆಸಿದ್ದಾನೆ.

9.30ರ ಸುಮಾರಿಗೆ ಸ್ಥಳೀಯರು, ಪೊಲೀಸರು, ಕಾರ್ಮಿಕರ ಮಾತು ಕೇಳದ ಆತ ನಾಲ್ಕನೇ ಮಹಡಿಯ ತುದಿಗೆ ಬಂದು ಅಲ್ಲಿಂದ ಕೆಳಗೆ ಹಾರಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+