• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಾಯಿ ಕೊಂದು ಟೆಕ್ಕಿ ಪರಾರಿ; ಏರ್‌ಪೋರ್ಟ್‌ನಲ್ಲಿ ಬೈಕ್ ಪತ್ತೆ

|

ಬೆಂಗಳೂರು, ಫೆಬ್ರವರಿ 05 : ತಾಯಿಯನ್ನು ಹತ್ಯೆ ಮಾಡಿದ ಟೆಕ್ಕಿ ಅಮೃತಾ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಕೆ. ಆರ್. ಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ವಿಮಾನ ನಿಲ್ದಾಣದಲ್ಲಿ ಬೈಕ್ ಪತ್ತೆಯಾಗಿದೆ.

ಟೆಕ್ಕಿ ಅಮೃತಾ ಫೆಬ್ರವರಿ 2ರ ಮುಂಜಾನೆ ನಿದ್ರೆ ಮಾಡುತ್ತಿದ್ದ ತಾಯಿಯನ್ನು ಕೊಂದು, ಸಹೋದರನ ಹತ್ಯೆಗೆ ಯತ್ನ ನಡೆಸಿದ್ದಳು. ಸಹೋದರ ಅಸ್ವಸ್ಥಗೊಂಡ ಬಳಿಕ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಬೈಕ್‌ನಲ್ಲಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಮಹಿಳಾ ಟೆಕ್ಕಿಯಿಂದ ತಾಯಿ ಕೊಲೆ; ಪ್ರಕರಣಕ್ಕೆ ತಿರುವು!

ಕೆ. ಆರ್. ಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಮೃತಾ ಮನೆ ರಸ್ತೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಪ್ರಿಯಕರನ ಜೊತೆ ವಿಮಾನ ನಿಲ್ದಾಣಕ್ಕೆ ಹೋಗಿರುವುದು ಪತ್ತೆಯಾಗಿದೆ.

ಬೆಂಗಳೂರಲ್ಲಿ ಟೆಕ್ಕಿಯಿಂದ ತಾಯಿ ಹತ್ಯೆ; ಎರಡು ದಿನದಿಂದ ನಾಪತ್ತೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಿಯಕರನ ಬೈಕ್ ಪತ್ತೆಯಾಗಿದೆ. ಇದರಿಂದಾಗಿ ಟೆಕ್ಕಿ ಅಮೃತಾ ಪ್ರಿಯಕರನ ಜೊತೆ ವಿಮಾನದಲ್ಲಿ ಪರಾರಿಯಾಗಿರುವುದು ಖಚಿತವಾಗಿದೆ. ಎಲ್ಲಿಗೆ ಹೋಗಿದ್ದಾರೆ? ಎಂದು ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಅಮೃತಾ ಸಹೋದರ ಹರೀಶ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ತಾಯಿಕೊಂದಿದ್ದ ಟೆಕ್ಕಿ ಅಮೃತಾ, ಪ್ರಿಯಕರ ಶ್ರೀಧರ್ ಬಂಧನ

ಅಂಡಮಾನ್‌ಗೆ ಪ್ರಯಾಣ

ಅಂಡಮಾನ್‌ಗೆ ಪ್ರಯಾಣ

ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಪ್ರಿಯಕರನ ಜೊತೆ ಅಮೃತಾ ಅಂಡಮಾನ್‌ಗೆ ಪರಾರಿಯಾಗಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಈ ಕುರಿತು ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ. ವಿಮಾನ ಪ್ರಯಾಣದ ಸಮಯ, ಸ್ಥಳದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ಪ್ರಿಯಕರ ಸಹ ನಾಪತ್ತೆ

ಪ್ರಿಯಕರ ಸಹ ನಾಪತ್ತೆ

ಅಮೃತಾ ಪ್ರಿಯಕರ ಸುಬ್ಬಯ್ಯನಪಾಳ್ಯದ ನಿವಾಸಿಯಾಗಿದ್ದಾನೆ. ಫೆಬ್ರವರಿ 2ರಿಂದ ಆತ ಸಹ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಂಡಮಾನ್‌ ಅಥವ ಹೈದರಾಬಾದ್‌ಗೆ ಹೋಗಿರಬಹುದು ಎಂಬ ಶಂಕೆ ಇದ್ದು, ತನಿಖೆ ಚುರುಕುಗೊಂಡಿದೆ.

ಪ್ರಿಯಕರನಿಗೆ ಕರೆ

ಪ್ರಿಯಕರನಿಗೆ ಕರೆ

ಫೆ.2ರ ಮುಂಜಾನೆ ತಾಯಿ ನಿರ್ಮಲಾರನ್ನು ಹತ್ಯೆ ಮಾಡಿ, ಸಹೋದರ ಹರೀಶ್ ಹತ್ಯೆಗೆ ಯತ್ನಿಸಿದ ಬಳಿಕ ಅಮೃತಾ ಪ್ರಿಯಕರನಿಗೆ ಕರೆ ಮಾಡಿದ್ದಾಳೆ. ಈ ಕುರಿತು ಅಮೃತಾ ಪೋನ್ ಕರೆ ಜಾಡು ಹಿಡಿದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇಬ್ಬರು ಮೊದಲೇ ಸಂಚು ರೂಪಿಸಿದಂತೆ ಬೈಕ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ.

ಪ್ರೇಮ ಪ್ರಕರಣ ಕಾರಣ

ಪ್ರೇಮ ಪ್ರಕರಣ ಕಾರಣ

ದಾವಣಗೆರೆ ಮೂಲದ ನಿರ್ಮಲಾ ಪುತ್ರಿ ಅಮೃತಾ ಮತ್ತು ಪುತ್ರ ಹರೀಶ್ ಜೊತೆ ವಾಸವಾಗಿದ್ದರು. ಅಮೃತಾ ಪ್ರೀತಿ ಮಾಡುತ್ತಿದ್ದ ವಿಚಾರವನ್ನು ಮನೆಯಲ್ಲಿ ಹೇಳಿದ್ದಳು. ತಾಯಿ ಮತ್ತು ಸಹೋದರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ, ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

English summary
Techie Amrutha who murdered mother and attempt to kill brother escaped with lover. Lover bike found in Bengaluru International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X