'ಗಲಭೆ ಸೃಷ್ಟಿಸುವವರಿಗೆ ಬುಲ್ಡೋಜರ್ ಮೂಲಕವೇ ಪಾಠ ಕಲಿಸಿ': ಬಿಜೆಪ ಶಾಸಕ ರೇಣುಕಾಚಾರ್ಯ
ಬೆಂಗಳೂರು, ಏಪ್ರಿಲ್ 21: ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಯಾವುದೇ ವ್ಯಕ್ತಿ ಇಲ್ಲವೇ ಸಂಘಟನೆಗಳಿಗೆ ಬುಲ್ಡೋಜರ್ ಮೂಲಕವೇ ತಕ್ಕ ಪಾಠ ಕಲಿಸಬೇಕು ಎಂದು ರಾಜ್ಯದ ಜನತೆಯ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮನವಿ ಮಾಡಿದ್ದಾರೆ. ಸಮಾಜದಲ್ಲಿ ಗಲಭೆ ಸೃಷ್ಟಿ ಶಾಂತಿ ಸುವ್ಯವಸ್ಥೆ ಕದಡುವ ಜನರಿಗೆ ಯುಪಿ ಮಾದರಿಯಲ್ಲಿ ಪಾಠ ಕಲಿಸಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
ಕೆಜಿ ಹಳ್ಳಿ- ಡಿಜಿ ಹಳ್ಳಿಯಿಂದ ಆರಂಭವಾಗಿ ಶಿವಮೊಗ್ಗದ ಹರ್ಷ ಕಗ್ಗೊಲೆಯಾಗಿ ಹುಬ್ಬಳ್ಳಿಲಿ ಇದೇ ರಕ್ಕಸ ಪ್ರವೃತ್ತಿ ಕಾಣಿಸಿಕೊಂಡಿದೆ. ಮುಂದೆ ಇನ್ಯೇಲ್ಲೋ ಗೊತ್ತಿಲ್ಲ. ರಾಜ್ಯ ಸರ್ಕಾರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಕ್ಷಣವೇ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಲು "ಉತ್ತರಪ್ರದೇಶದ ಮಾದರಿ" ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಶ್ರೀ @BSBommai
— M P Renukacharya (@MPRBJP) April 21, 2022
ಅವರು, ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಯಾವುದೇ ವ್ಯಕ್ತಿ ಇಲ್ಲವೇ ಸಂಘಟನೆಗಳಿಗೆ ಬುಲ್ಡೋಜಾರ್ ಮೂಲಕವೇ ತಕ್ಕ ಪಾಠ ಕಲಿಸಬೇಕು ಎಂದು ರಾಜ್ಯದ ಜನತೆಯ ಪರವಾಗಿ ವಿನಂತಿಸಿಕೊಳ್ಳುವೆ. (7)
ಇಲ್ಲಿಯೇ ಹುಟ್ಟಿ, ಈ ನೆಲದಲ್ಲಿ ಬಿತ್ತಿ ಬೆಳೆದ ಅನ್ನ ತಿಂದು, ಇಲ್ಲಿ ಹರಿಯುವ ನೀರು ಕುಡಿದು, ನಾವೆಲ್ಲರೂ ಒಂದೇ ಎನ್ನುತ್ತಲೇ " ಪಾಕ್ ಪರ " ಕನಿಕರ ತೋರುವ ಇವರು ಕೊನೆಗೊಂದು ದಿನ ನಮಗೆ ಮುಳುವಾದರೂ ಅಚ್ಚರಿಯಿಲ್ಲ. ಕೆಲವು ಸೈತನಾರು ಈ ದೇಶದ ಕಾನೂನು ತಮ್ಮನ್ನು ಏನು ಮಾಡಲಾರದು ಎಂದುಕೊಂಡಿದ್ದಾರೆ. ಏಕೆಂದರೆ, ನಮ್ಮಲ್ಲಿರುವ ನಕಲಿ ಜಾತ್ಯಾತೀತ ಮನಸ್ಸುಗಳು ಇವರಿಗೆ ಕುಮ್ಮಕ್ಕು ನೀಡುತ್ತಿರುವುದರಿಂದಲೇ ಇವರ ಆಟಾಟೋಪಾಕ್ಕೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ ಎಂದು ಕಿಡಿ ಕಾರಿದ್ದಾರೆ.

ಉತ್ತರಪ್ರದೇಶದಲ್ಲಿ ದೇಶದ ಹೆಮ್ಮೆಯ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು, ಇಂತಹ ದೇಶದ್ರೋಹಿಗಳಿಗೆ ಬುಲ್ಡೋಜಾರ್ ಮೂಲಕವೇ
— M P Renukacharya (@MPRBJP) April 21, 2022
ಉತ್ತರ ಕೊಟ್ಟಿದ್ದರಿಂದ ನಮ್ಮ ಶತ್ರು ರಾಷ್ಟ್ರದ ಪರ ಜೈ ಜೈ ಎನ್ನುತ್ತಿದ್ದ " ಪಾಕ್ ಪ್ರೇಮಿಗಳು " ಈಗ ಬಿಲಾ ಸೇರಿಕೊಂಡಿವೆ ಎಂಬುದನ್ನು ನಾವು ಮರೆಯಬಾರದು! (3)
ಉತ್ತರಪ್ರದೇಶದಲ್ಲಿ ದೇಶದ ಹೆಮ್ಮೆಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಇಂತಹ ದೇಶದ್ರೋಹಿಗಳಿಗೆ ಬುಲ್ಡೋಜರ್ ಮೂಲಕವೇ ಉತ್ತರ ಕೊಟ್ಟಿದ್ದರಿಂದ ನಮ್ಮ ಶತ್ರು ರಾಷ್ಟ್ರದ ಪರ ಜೈ ಜೈ ಎನ್ನುತ್ತಿದ್ದ " ಪಾಕ್ ಪ್ರೇಮಿಗಳು " ಈಗ ಬಿಲಾ ಸೇರಿಕೊಂಡಿವೆ ಎಂಬುದನ್ನು ನಾವು ಮರೆಯಬಾರದು!. ಹೀಗಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಸಾರ್ವಜನಿಕರ ಆಸ್ತಿ- ಪಾಸ್ತಿಗಳನ್ನು ಹಾಳು ಮಾಡುವ " ದೇಶದ್ರೋಹಿಗಳಿಗೆ " ಸೇರಿದ ಆಸ್ತಿಯನ್ನು ಮುಲಾಜಿಲ್ಲದೆ ಬುಲ್ಡೋಜೋರ್ ಮೂಲಕ ತೆರವುಗೊಳಿಸಿ ಸರರ್ಕಾರ ತನ್ನ ವಶಕ್ಕೆ ಪಡೆಯಬೇಕು. ಇದು ಬಹಜನರ ಒತ್ತಾಸೆಯಾಗಿದೆ ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.












Click it and Unblock the Notifications