Kannada vs Tamil: ಬೆಂಗಳೂರಲ್ಲಿ ಕಾಂಗ್ರೆಸ್‌ನಿಂದ ತಮಿಳು ದರ್ಬಾರ್‌: ರೊಚ್ಚಿಗೆದ್ದ ಕನ್ನಡಿಗರು!

ಬೆಂಗಳೂರಿನಲ್ಲಿ ಶಾಂತಿನಗರದಲ್ಲಿ ತಮಿಳು ದರ್ಬಾರ್‌ ಶುರುವಾಗಿದ್ದು, ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾನವೀಯತೆಯ ಹಬ್ಬ ಎನ್ನುವ ಹೆಸರಿನಲ್ಲಿ ತಮಿಳು ದರ್ಬಾರ್‌ ಶುರುವಾಗಿದ್ದು, ಇದಕ್ಕೆ ಕಾಂಗ್ರೆಸ್‌ ಶಾಸಕರ ಕಾರ್ಯಕ್ರಮವೇ ಕಾರಣ. ಪ್ರಚಾರದ ಹೆಸರಿನಲ್ಲಿ ಬೆಂಗಳೂರಿನಲ್ಲಿ ತಮಿಳು ಹಾಡು ಹಾಕಲಾಗುತ್ತಿದೆ. ಇದೀಗ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಏನಿದು ಮಾನವೀಯತೆಯ ಕಾರ್ಯಕ್ರಮ ವಿರೋಧವೇಕೆ, ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು ನೋಡೋಣ ಬನ್ನಿ.

ಬೆಂಗಳೂರಿನಲ್ಲಿ ಹಿಂದಿ - ಕನ್ನಡ ವಿವಾದ ತೀವ್ರವಾಗಿತ್ತು. ಇದರ ನಡುವೆಯೇ ಬೆಂಗಳೂರಿನಲ್ಲಿ ತಮಿಳು ಹಾಗೂ ಕನ್ನಡ ವಿವಾದ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಶಾಂತಿ ನಗರ ಕಾಂಗ್ರೆಸ್‌ ಶಾಸಕ ಎನ್‌.ಎ ಹ್ಯಾರಿಸ್ ಅವರು ಆಯೋಜಿಸಿರುವ ಕಾರ್ಯಕ್ರಮ. ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾನವೀಯತೆಯ ಹಬ್ಬ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ತಮಿಳು ದರ್ಬಾರು ಜೋರಾಗಿದ್ದು, ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Tamil song controversy Kannadigas anger against Congress in Bengaluru

ಶಾಂತಿ ನಗರದಲ್ಲಿ ಮಾನವೀಯತೆಯ ಹಬ್ಬ ಎನ್ನುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು. ಇದರ ಪ್ರಚಾರದ ಭಾಗವಾಗಿ ಖಾಸಗಿ ವಾಹನವೊಂದರಲ್ಲಿ ತಮಿಳು ಹಾಡುಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಪ್ರತಿದಿನ ಈ ವಾಹನದಲ್ಲಿ 10ರಿಂದ 15 ತಮಿಳುಹಾಡುಗಳನ್ನು ಹಾಕಲಾಗುತ್ತಿದೆ. ಕರ್ನಾಟಕದಲ್ಲಿ ವಲಸಿಗರನ್ನು ಮೆಚ್ಚಿಸುವ ಹಾಗೂ ವೋಟ್ ಬ್ಯಾಂಕ್‌ ರಾಜಕೀಯ ನಡೆಯುತ್ತಿದೆ ಎಂದು ಬೆಂಗಳೂರಿನ ಕನ್ನಡಿಗರು ಆರೋಪಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ತೀವ್ರ ಆಕ್ರೋಶ: ಇನ್ನು ಈ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕವನ್ನು ವಲಸಿಗರ ಸ್ಥಳವನ್ನಾಗಿ ಮಾಡಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಇರುವುದೇ ಕರ್ನಾಟಕದಲ್ಲಿ ವಲಸಿಗರನ್ನು ಉದ್ಧಾರ ಮಾಡುವುದಕ್ಕೆ ಎಂದು ಕೆಲವರು ಕಮೆಂಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

Tamil song controversy Kannadigas anger against Congress in Bengaluru

ಹ್ಯಾರಿಸ್‌ ಅವರಿಗೆ ಧನ್ಯವಾದಗಳು, ಇಂದು ತಮಿಳುಹಾಡುಗಳನ್ನು ಹಾಕಿದ್ದೀರಿ. ನಾಳೆ ಮಲಯಾಳಂ ಹಾಡುಗಳನ್ನು ಹಾಕಿ. ಆದರೆ ಕನ್ನಡದ ಹಾಡುಗಳನ್ನು ಮಾತ್ರ ಹಾಕಬೇಡಿ ಎಂದಿದ್ದಾರೆ.

ಹಿಂದಿ ಭಾಷೆ ಬೇಡ: ಬೇರೆ ಭಾಷೆ ಬೇಕಾ

ಇನ್ನೂ ಹಲವರು ಬೆಂಗಳೂರಿನಲ್ಲಿ ಯಾರಾದರು ಹಿಂದಿ ದಬ್ಬಾಳಿಕೆ ಮಾಡಿದರೆ ಧ್ವನಿ ಎತ್ತುತ್ತಾರೆ. ಆದರೆ ಈಗ ತಮಿಳು ಭಾಷೆಯಲ್ಲಿ ಪ್ರಚಾರ ಹಾಗೂ ಹಾಡುಗಳು ಜೋರಾಗಿವೆ. ಆದರೆ ಇದನ್ನು ಯಾರು ಪ್ರಶ್ನೆ ಮಾಡುತ್ತಿಲ್ಲವೇಕೆ. ಕಾಂಗ್ರೆಸ್‌ ತನ್ನ ವೋಟ್‌ ಬ್ಯಾಂಕಿಂಗ್‌ಗಾಗಿ ಏನು ಬೇಕಾದರೂ ಮಾಡುತ್ತದೆ. ವೋಟ್ ಬ್ಯಾಂಕಿಂಗ್‌ಗಾಗಿ ಕಾಂಗ್ರೆಸ್‌ ನಾಯಕರು ಏನು ಬೇಕಾದರೂ ಮಾಡುತ್ತಾರೆ. ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಇವರು ಕನ್ನಡ ಹಾಗೂ ಕನ್ನಡಪರ ಹೋರಾಟಗಳ ಪರವಾಗಿ ಮಾತನಾಡುತ್ತಿದ್ದರು. ಇದೀಗ ಮತ್ತೆ ಬೆಂಗಳೂರಿನಲ್ಲಿ ವಲಸಿಗರನ್ನು ಮೆರೆಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಜನವರಿ 7 ಮತ್ತು 8ಕ್ಕೆ (ಮಂಗಳವಾರ ಮತ್ತು ಬುಧವಾರ) ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಆಸ್ಟಿನ್ ಟೌನ್, ನಂದನ್ ಫುಟ್ ಬಾಲ್ ಮೈದಾನದಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ. ಇದನ್ನು ಮಾನವೀಯತೆಯ ಹಬ್ಬ ಅಂತನೂ ಪ್ರಚಾರ ಮಾಡಲಾಗುತ್ತಿದೆ. ಕರ್ನಾಟಕದಲ್ಲಿರುವವರಿಗೆ ಕರ್ನಾಟಕದಲ್ಲಿ ಇರುವ ಸಂಸ್ಥೆಗಳಿಂದ ಉದ್ಯೋಗ ಸಿಗಲಿದೆ. ಆದರೆ, ಈ ಕಾರ್ಯಕ್ರಮದ ಪ್ರಚಾರವನ್ನು ತಮಿಳಿನಲ್ಲಿ ಮಾಡುತ್ತಿರುವುದು ವಿರೋಧಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+