SWR: ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳಿಗೆ ಆಧುನಿಕ LHB ಬೋಗಿ ಅಳವಡಿಕೆ: ಸಂಚಾರ ಯಾವಾಗ?
Indian Railways Big Upgrage: ಪ್ರಯಾಣಿಕರ ಸುರಕ್ಷತೆಗೆ, ಆರಾಮದಾಯಕ ಪ್ರಯಾಣ ಒದಗಿಸಲು ಭಾರತೀಯ ರೈಲ್ವೆ ಒಂದಿಲ್ಲೊಂದು ಹೊಸ ಉಪಕ್ರಮ, ಯೋಜನೆ, ವ್ಯವಸ್ಥೆ ಜಾರಿಗೆ ತರುತ್ತಿದೆ. ಇದೀಗ ನೈಋತ್ಯ ರೈಲ್ವೆ ವಿಭಾಗವು ಕರ್ನಾಟಕ ಈ ಮಾರ್ಗದ ರೈಲು ಸೇರಿ ಕೆಲವು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ಪರಂಪರಾಗತ ಬೋಗಿಗಳನ್ನು ಹೊಸ LHB (Linke-Hofmann-Busch) ಬೋಗಿಗಳಿಂದ ಬದಲಾಯಿಸಲಿದೆ. ಆಧುನಿಕ ಬೋಗಿಗಳನ್ನು ಅಳವಡಿಸುವುದಾಗಿ ಅಧಿಕೃತ ಮಾಹಿತಿ ನೀಡಿದೆ.
ವಿವಿಧ ರೈಲುಗಳ ಹಳೆಯ ಬೋಗಿಗಳಿಗೆ ಬದಲಾಗಿ ಹೊಸ ಬೋಗಿಗಳನ್ನು ಮುಂದಿನ ವರ್ಷ 2026 ರ ಫೆಬ್ರವರಿಯಿಂದ ಹಂತ ಹಂತವಾಗಿ ಜಾರಿಗೆ ಬರಲಿದೆ ಎಂದು ರೈಲ್ವೆ ಅಧಿಕಾರಿಳು ಮಾಹಿತಿ ನೀಡಿದ್ದಾರೆ. ಹಾಗಾದರೆ ಕರ್ನಾಟಕ ಸೇರಿ ಯಾವ ಮಾರ್ಗ ರೈಲುಗಳು ಈ ಹೊಸ ಬೋಗಿ ಸಹಿತ ಸಂಚಾರ ಸೇವೆ ನೀಡಲಿವೆ ಎಂಬ ಮಾಹಿತಿ ಇಲ್ಲಿದೆ.

ಮಂಗಳೂರು-ಚೆನ್ನೈ, ಚೆನ್ನೈ-ಅಲೆಪ್ಪಿ ಹಾಗೂ ಚೆನ್ನೈ-ತಿರುವನಂತಪುರಂ ಮಾರ್ಗಗಳ ಪ್ರಮುಖ ರೈಲುಗಳು ಹೊಸ ಆಧುನಿಕ ಬೋಗಿಗಳೊಂದಿಗೆ ಓಡಲಿವೆ. ಬಿಡುಗಡೆ ಮಾಡಿರುವ ಈ ರೈಲುಗಳ ವೇಳಾಪಟ್ಟಿ ಪ್ರಕಾರ, ಮಂಗಳೂರು ಸೆಂಟ್ರಲ್-ಡಾ. ಎಂ.ಜೀ.ಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ರೈಲು (12602/12601) ಫೆಬ್ರವರಿ 3ರಿಂದ ಮಂಗಳೂರಿನಿಂದ ಮತ್ತು ಫೆಬ್ರವರಿ 2ರಿಂದ ಚೆನ್ನೈಯಿಂದ LHB ಬೋಗಿಗಳ ಸಹಿತ ಕಾರ್ಯಾಚರಣೆ ಮಾಡಲಿದೆ.
ಅದೇ ರೀತಿ ಮಂಗಳೂರು ಸೆಂಟ್ರಲ್-ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ರೈಲು (22638/22637) ಫೆಬ್ರವರಿ 1ರಿಂದ ಮಂಗಳೂರಿನಿಂದ ಮತ್ತು ಫೆಬ್ರವರಿ 4ರಿಂದ ಚೆನ್ನೈಯಿಂದ ಹೊಸ ಬೋಗಿಗಳೊಂದಿಗೆ ಸಂಚಾರ ಸೇವೆ ಆರಂಭಿಸಲಿದೆ.
ಚೆನ್ನೈ-ಅಲೆಪ್ಪಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22639/22640) ಕೂಡ ಫೆಬ್ರವರಿ 1ರಿಂದ ಚೆನ್ನೈ ಕೇಂದ್ರದಿಂದ ಮತ್ತು ಫೆಬ್ರವರಿ 2ರಿಂದ ಚೆನ್ನೈ-ಅಲೆಪ್ಪಿದಿಂದ LHB ಬೋಗಿಗಳೊಂದಿಗೆ ಚಲಿಸಲಿದೆ. ಚೆನ್ನೈ-ತಿರುವನಂತಪುರಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12695/12696) ಫೆಬ್ರವರಿ 3ರಿಂದ ಚೆನ್ನೈಯಿಂದ ಮತ್ತು ಫೆಬ್ರವರಿ 4ರಿಂದ ತಿರುವನಂತಪುರಂನಿಂದ ಹೊಸ ಬೋಗಿಗಳೊಂದಿಗೆ ಸಂಚಾರ ಸೇವೆ ಶುರು ಮಾಡಲಿದೆ.
ಈ ಲಾವಣೆಗಳೊಂದಿಗೆ ಎಲ್ಲಾ ರೈಲುಗಳ ಬೋಗಿ ಸಂಯೋಜನೆ ಪರಿಷ್ಕರಿಸಲಾಗಿದೆ. ಫಸ್ಟ್ AC-ಕಮ್-AC ಟು ಟಿಯರ್, AC ಟು ಟಿಯರ್, AC ತ್ರಿ ಟಿಯರ್, ಸ್ಲೀಪರ್ ಹಾಗೂ ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳ ಸಂಖ್ಯೆ ಪರಿಷ್ಕೃತವಾಗಿದೆ. ವಿಶೇಷ ಚೇತನರು, ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಕೋಚ್ ಮತ್ತು ಸಾಮಾನು-ಬ್ರೇಕ್ ವ್ಯಾನ್‌ಗಳನ್ನು ಸೇರಿಸಲಾಗಿದೆ.
ವಿಶೇಷವಾಗಿ ವಿನ್ಯಾಸಗೊಳಿಸಿದ ಬೋಗಿಗಳಿವು
ಜರ್ಮನ್ ತಂತ್ರಜ್ಞಾನ ಆಧಾರಿತವಾದ ಈ LHB ಬೋಗಿಗಳು ಹೆಚ್ಚು ಸುರಕ್ಷತೆ ಹೊಂದಿವೆ. ದಕ್ಷತೆ ಜೊತೆಗೆ ವೇಗದ ಹೆಚ್ಚಳ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಸೂಕ್ತವಾಗಿವೆ. ಅಪಘಾತಗಳ ಸಂದರ್ಭದಲ್ಲೂ ಹಾನಿ ಕಡಿಮೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಭಾರತೀಯ ರೈಲ್ವೆ ಇಲಾಖೆಯು ರೈಲು ವ್ಯವಸ್ಥೆ ಆಧುನೀಕರಣದ ಪ್ರಮುಖ ಭಾಗವಾಗಿವೆ. ಫೆಬ್ರವರಿ 2026ರಿಂದ ಜಾರಿಗೊಳ್ಳುವ ಈ ಬದಲಾವಣೆಗಳು ಹತ್ತಾರು ಸಾವಿರ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಪ್ರಯಾಣ ಅನುಭವ ಒದಗಿಸಲಿವೆ ಎಂದು ನೈಋತ್ಯ ರೈಲ್ವೆ ಖಚಿತಪಡಿಸಿದೆ.












Click it and Unblock the Notifications