ರೈಲ್ವೆ ಗುಡ್ ನ್ಯೂಸ್: ಬೆಂಗಳೂರಿನ ಯಲಹಂಕದಿಂದ ಇಲ್ಲಿಗೆ ವಿಶೇಷ ರೈಲು ಕಾರ್ಯಾಚರಣೆ

Special Trains: ನೈಋತ್ಯ ರೈಲ್ವೆ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಶತಮಾನೋತ್ಸವ ಆಚರಣೆಯ ಅಂಗವಾಗಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅನಕಪಲ್ಲೆ-ಯಲಹಂಕ-ಅನಕಪಲ್ಲೆ ಮಾರ್ಗದ ನಡುವೆ ಒಂದು ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಘೋಷಿಸಲಾಗಿದೆ. ಇದು ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತಡೆಯಲಿದೆ.

ಅನಕಪಲ್ಲೆಯಿಂದ ಯಲಹಂಕವರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲು (07409) ಇದೇ ನವೆಂಬರ್ 13 (ಗುರುವಾರ) ರಂದು ಸಂಜೆ 5.15ಕ್ಕೆ ಹೊರಟು ಮುಂದಿನ ದಿನ ಮಧ್ಯಾಹ್ನ 12.30ಕ್ಕೆ ತಲುಪಲಿದೆ. ಅದರಂತೆಯೇ ಯಲಹಂಕದಿಂದ ಅನಕಪಲ್ಲೆವರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲು (07410) ನವೆಂಬರ್ 14 (ಶುಕ್ರವಾರ) ರಂದು ಮಧ್ಯಾಹ್ನ 2 ಗಂಟೆಗೆ ಹೊರಟು ಮುಂದಿನ ದಿನ ಬೆಳಗ್ಗೆ 11.00 ಗಂಟೆಗೆ ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

SWR special Express Trains Between Anakapalle and Yelahanka to clear Extra Rush of Passengers

ಈ ವಿಶೇಷ ರೈಲುಗಳು 23 ಬೋಗಿಗಳಿಂದ ಕೂಡಿವೆ. ಅದರಲ್ಲಿ ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ಜನರಲ್ ಕೋಚ್‌ ಸೇರಿದಂತೆ ಹಲವು ಬೋಗಿಗಳು ಇವೆ. ಎರಡೂ ದಿಕ್ಕುಗಳಲ್ಲಿ ಎಳ್ಳಮಂಚಿಲಿ, ಟೂನಿ, ಸಮಾಲ್ಕೋಟ್ ಜಂಕ್ಷನ್, ರಾಜಹಮುನ್ದ್ರಿ, ತಡೆಪಳ್ಳಿಗುಡೆಮ್, ಎಲೂರು, ವಿಜಯವಾಡ ಜಂಕ್ಷನ್, ಗುಂಟೂರು ಜಂಕ್ಷನ್, ನಾರಸಾರೋಪೇಟ, ವಿನುಕೊಂಡ, ಡೋನಕೊಂಡ, ಮಾರ್ಕಾಪುರ ರಸ್ತೆ, ಕುಂಬಂ, ಗಿಡ್ಡಲೂರು, ದಿಗುವಮೆಟ್ಟ, ನಂದ್ಯಾಲು, ಧೋನೆ, ಗುಟಿ, ಅನಂತಪುರ, ಧರ್ಮಾವರಂ ಮತ್ತು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಪ್ರಯಾಣಿಕರು ರೈಲುಗಳ ಸಮಯ ಹಾಗೂ ಇತರೆ ವಿವರಗಳನ್ನು ತಿಳಿಯಲು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ http://www.enquiry.indianrail.gov.in ಅಥವಾ NTES ಆಪ್ ಇಲ್ಲವೇ 139 ಸಂಖ್ಯೆಗೆ ಕರೆಮಾಡಿ ಮಾಹಿತಿ ಪಡೆಯಬಹುದು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲ್ ಒನ್‌ಆಪ್: ಆನ್‌ಇನ್ ಒನ್ ಆಪ್

ನೀವು ಟಿಕಟ್ ಬುಕ್ ಮಾಡಲು ಐಆರ್‌ಸಿಟಿಸಿ ಬದಲಾಗಿ 'ರೈಲ್ ಒನ್‌ಆಪ್' ಸಹ ಬಳಸಬಹುದಾಗಿದೆ. ರೈಲ್ ಒನ್‌ಆಪ್ ಇದು ಆನ್‌ಇನ್ ಒನ್ ಆಪ್ ಆಗಿದೆ. ಈ ಆಪ್‌ ನಲ್ಲಿ ನೀವು ಟಿಕೆಟ್ ಬುಕ್ ಮಾಡಬಹುದು. ಪ್ಲಾಟ್‌ ಫಾರ್ಮ್ ಟಿಕೆಟ್ ಬುಕ್ ಮಾಡಬಹುದು. ಸೀಸನ್ ಪಾಸ್ ಪಡೆಯುವುದು ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯಬಹುದು. ಇದನ್ನು ಆಂಡ್ರಾಯ್ಡ್ ಮತ್ತು ಐಓಎಸ್ ಆಪ್ ಸ್ಟೋರ್ ನಲ್ಲಿ ಡೌನ್‌ಲೋಡ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+