ಬೆಂಗಳೂರಿನ ಉದ್ಧಾರಕ್ಕೆ ಐಐಎಂಬಿಯಲ್ಲಿ ಚಿಂತಕರ ಚಾವಡಿ

ಬೆಂಗಳೂರು, ಅಕ್ಟೋಬರ್ 06 : ಹಲವಾರು ದಶಕಗಳಿಂದ ಬೆಂಗಳೂರು ಊಹೆಗೂ ಮೀರಿ ಇನ್ನು ಬೆಳೆಯಲು ಅವಕಾಶವಿಲ್ಲದಂತೆ ಅಗಾಧವಾಗಿ ಬೆಳೆದಿದೆ. ಒಂದಾನೊಂದು ಕಾಲದಲ್ಲಿ ಉದ್ಯಾನ ನಗರಿಯಾಗಿದ್ದ ಬೆಂಗಳೂರು ಇಂದು ಸಿಲಿಕಾನ್ ನಗರಿಯಾಗಿ ಮಿಂಚುತ್ತಿದೆ.

ವಿಶ್ವದ ಖ್ಯಾತ ಸಾಫ್ಟ್ ವೇರ್ ಕಂಪನಿಗಳೆಲ್ಲ ಬೆಂಗಳೂರಿನಲ್ಲಿ ವ್ಯಾಪಾರದಲ್ಲಿ ತೊಡಗಿವೆ. ಆದರೆ, ಈ ಯಶಸ್ಸಿಗೆ ತಕ್ಕ ಬೆಲೆಯನ್ನೂ ತೆತ್ತಿದೆ ಬೆಂಗಳೂರು. ಟ್ರಾಫಿಕ್ ಸಮಸ್ಯೆ, ತುಂಬಿ ತುಳುಕುತ್ತಿರುವ ಚರಂಡಿಗಳು, ಕಣ್ಮರೆಯಾಗುತ್ತಿರುವ ಕೆರೆಗಳು, ಹೆಚ್ಚುತ್ತಿರುವ ತಾಪಮಾನ ಹಾಗೂ ಅಸಮರ್ಪಕ ಮೂಲಸೌಕರ್ಯ! ಒಂದಾ ಎರಡಾ?

Swarajya presents Citiscapes Bengaluru

ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅಕ್ಟೋಬರ್ 7, ಶನಿವಾರದಂದು ನಮ್ಮ ಬೆಂಗಳೂರು ಪ್ರತಿಷ್ಠಾನ, ಸ್ವರಾಜ್ಯ ಪತ್ರಿಕೆಯ ಸಹಯೋಗದೊಂದಿಗೆ "ಸಿಟಿಸ್ಕೇಪ್ಸ್-ಬೆಂಗಳೂರು" ಎಂಬ ಒಂದು ದಿನದ ಸಮ್ಮೇಳನವನ್ನು ಹಮ್ಮಿಕೊಂಡಿದೆ.

ಸಂಶೋಧಕರು, ಆಡಳಿತಗಾರರು, ತಜ್ಞರು ಹಾಗು ನಾಗರಿಕರನ್ನು ಒಂದು ಸೂರಿನಡಿ ಸೇರಿಸಿ, ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಶಾಶ್ವತ ಪರಿಹಾರ ಹುಡುಕುವುದು ಈ ಸಮ್ಮೇಳನದ ಮುಖ್ಯ ಉದ್ದೇಶ. ಈ ಸಮ್ಮೇಳನವು ಸಾರಿಗೆ, ಪರಿಸರ ಹಾಗು ರಾಜಕೀಯ ಸೇರಿದಂತೆ ಹಲವು ವಿಷಯಗಳನ್ನೊಳಗೊಂಡಂತೆ ನಮ್ಮ ಬೆಂಗಳೂರಿಗೆ ಒಂದು ಸಮಗ್ರ ಮುನ್ನೋಟ-2030 ಸಿದ್ಧಪಡಿಸಲಿದೆ.

ಸಮ್ಮೇಳನದ ವಿವರ:

ಕಾರ್ಯಕ್ರಮ : ಸಿಟಿಸ್ಕೇಪ್ಸ್-ಬೆಂಗಳೂರು
ದಿನಾಂಕ : ಅಕ್ಟೋಬರ್ 7, 2017
ಸಮಯ : ಬೆಳಗ್ಗೆ 9:40ರಿಂದ ಸಂಜೆ 6:15 ರವರೆಗೆ
ಸ್ಥಳ : ಐಐಎಂಬಿ ಸಭಾಂಗಣ, ಬನ್ನೇರುಘಟ್ಟ ರಸ್ತೆ, ಬೆಂಗಳೂರು

ಭಾಷಣಕಾರರು :

ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯರು
ಪ್ರಿಯಾಂಕ್ ಖರ್ಗೆ - ಐಟಿ/ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ
ಟಿ.ವಿ.ರಾಮಚಂದ್ರ - ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
ಪ್ರೊ. ಜಿ. ರಘುರಾಮ್ - ನಿರ್ದೇಶಕರು, ಐಐಎಂಬಿ
ಎ.ಏನ್. ಎಲ್ಲಪ್ಪ ರೆಡ್ಡಿ, ನಿವೃತ್ತ ಐಎಫ್ಎಸ್ ಅಧಿಕಾರಿ
ಪ್ರಕಾಶ್ ಬೆಳವಾಡಿ - ನಟ ಹಾಗೂ ರಂಗಕರ್ಮಿ
ಆರ್. ಜಗನ್ನಾಥ್ - ಸಂಪಾದಕೀಯ ನಿರ್ದೇಶಕರು, ಸ್ವರಾಜ್ಯ
ಶ್ರೀಧರ್ ಪಬ್ಬಿಸೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಮ್ಮ ಬೆಂಗಳೂರು ಪ್ರತಿಷ್ಠಾನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+